ತಮಿಳಿನ ಪಡೆಯಪ್ಪ, ತೆಲುಗಿನಲ್ಲಿ ನರಸಿಂಹ ಎಂಬ ಹೆಸರಿನಲ್ಲಿ 1999 ರಲ್ಲಿ ತಮಿಳಿನ ನಿರ್ದೇಶಕ ಕೆ.ಎಸ್.ರವಿಕುಮಾರ್ ಅವರ ನಿರ್ದೇಶನದ ಪಡೆಯಪ್ಪ ಸಿನಿಮಾ ಬಿಡುಗಡೆಯಾಗಿ ಸಂಚಲನ ಸೃಷ್ಟಿಸಿತ್ತು‌. ಸೂಪರ್ ಸ್ಟಾರ್ ರಜನೀಕಾಂತ್ ನಾಯಕರಾಗಿ ನಟಿಸಿದ್ದ ಈ ಚಿತ್ರದಲ್ಲಿ ನಾಯಕಿಯರ ಪಾತ್ರದಲ್ಲಿ ಮಿಂಚಿದ್ದರು ನಟಿ ಸೌಂದರ್ಯ ಮತ್ತು ರಮ್ಯ ಕೃಷ್ಣ. ಈ ಸಿನಿಮಾದಲ್ಲಿ ಒಬ್ಬರಿಗೊಬ್ಬರು ಪೈಪೋಟಿ ಬಿದ್ದವರಂತೆ ನಟಿಸಿದ್ದರು. ಅದರಲ್ಲೂ ನಟಿ ರಮ್ಯಕೃಷ್ಣ ಅವರು ರಜನೀಕಾಂತ್ ಎದುರಾಗಿ ನೆಗೆಟಿವ್ ಪಾತ್ರದಲ್ಲಿ ಹೊಸ ಅಲೆಯೊಂದನ್ನು ಸೃಷ್ಟಿಸಿದ್ದ ಸಿನಿಮಾ.

ಸಿನಿಮಾದಲ್ಲಿ ನೀಲಾಂಬರಿ ಎಂಬ ಧೈರ್ಯ ಹಾಗೂ ಅಹಂಕಾರದ ಹೆಣ್ಣಿನ ಪಾತ್ರಕ್ಕೆ ರಮ್ಯಕೃಷ್ಣ ಅವರು ಜೀವ ತುಂಬಿದರೆ, ನಮ್ಮ ಕನ್ನಡತಿ ಸೌಂದರ್ಯ ಸಾತ್ವಿಕವಾದ ಪಾತ್ರವಾದ ವಸುಂಧರ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿದ್ದರು‌. ನೀಲಾಂಬರಿ ಪಾತ್ರಧಾರಿ ನಾಯಕನನ್ನು ಪ್ರೇಮಿಸಿದರೂ, ನಾಯಕ ವಸುಂಧರಳನ್ನು ಪ್ರೀತಿಸುತ್ತಾನೆ. ಆ ವಿಷಯ ತಿಳಿದು ಹಠದಿಂದ ತಾನೇ ನಾಯಕನನ್ನು ಮದುವೆಯಾಗಲು ಒಪ್ಪಿಸುವ ನೀಲಾಂಬರಿ ತನ್ನ ಸಂತೋಷವನ್ನು ವಸುಂಧರಳಿಗೆ ಹೇಳುವ ದೃಶ್ಯದಲ್ಲಿ ರಮ್ಯಕೃಷ್ಣ ಅವರು ತಮ್ಮ ಕಾಲನ್ನು ಸೌಂದರ್ಯ ಅವರ ಭುಜದ ಮೇಲಿಟ್ಟು, ತನ್ನ ಪಾದದಿಂದ ಸೌಂದರ್ಯ ಅವರ ಕೆನ್ನೆಗೆ ಕಾಲಿನಿಂದ ಮುಟ್ಟುವ ದೃಶ್ಯವಿದೆ.

ಆ ದೃಶ್ಯ ನಟಿಸುವಾಗ ರಮ್ಯಕೃಷ್ಣ ತನಗೆ ಬಹಳ ಮುಜುಗರವಾಯಿತೆಂದೂ, ಆ ದೃಶ್ಯ ನಟಿಸಲು ಬಹಳ ಕಷ್ಟಪಟ್ಟಿದ್ದಾಗಿ, ನಿರ್ದೇಶಕರು ಎಷ್ಟೇ ಹೇಳಿದರೂ ಆ ದೃಶ್ಯ ಬದಲಿಸಲು ಒಪ್ಪಲಿಲ್ಲ. ಬೇರೆ ದಾರಿಯಿಲ್ಲದೆ ಆ ದೃಶ್ಯ ನಟಿಸಬೇಕಾಗಿ ಬಂತು‌. ಅಂದಗಾತಿಯಾದ ಸೌಂದರ್ಯ ಅವರ ಭುಜದ ಮೇಲೆ ಕಾಲಿಟ್ಟಿದ್ದು ನಟನೆಯೇ ಆದರೂ ಅದರ ಬಗ್ಗೆ ಇಂದಿಗೂ ಬೇಸರವಿದೆ ಎಂದು ಸಂದರ್ಶನವೊಂದರಲ್ಲಿ ರಮ್ಯಕೃಷ್ಣ ತಮ್ಮ ಮನದಾಳದ ಮಾತುಗಳನ್ನು ಹೇಳಿಕೊಂಡಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here