ಭಾರತದ ಪ್ರಖ್ಯಾತ ಕ್ರಿಕೆಟ್ ಆಟಗಾರರಲ್ಲಿ ಒಬ್ಬರು ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿ‌. ಪ್ರಸ್ತುತ ಅವರು ಬಿಸಿಸಿಐ ನ ಅಧ್ಯಕ್ಷರು ಕೂಡಾ ಎಂಬುದು ವಿಶೇಷ. ಬಿಸಿಸಿಐ ನಲ್ಲಿ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡ ನಂತರ ಸೌರವ್ ಗಂಗೂಲಿ ಡೇ ಅಂಡ್ ನೈಟ್ ಟೆಸ್ಟ್ ಮ್ಯಾಚ್ ಗಳನ್ನು ನಡೆಸಲು ಸಾಕಷ್ಟು ಒತ್ತು ನೀಡಿದ್ದು, ಅದರಲ್ಲಿ ಯಶಸ್ವಿ ಕೂಡಾ ಆಗಿದ್ದಾರೆ. ಅಲ್ಲದೆ ಅವರು ಪ್ರಸ್ತುತ ಈ ಡೇ ಅಂಡ್ ನೈಟ್ ಟೆಸ್ಟ್ ಮ್ಯಾಚ್ ನಡೆಸುವ ತಯಾರಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ನಿನ್ನೆ ಭಾರತ ಇನ್ನಿಂಗ್ಸ್ ಹಾಗೂ 46 ರನ್ ಗಳಿಂದ ಬಾಂಗ್ಲಾ ತಂಡಕ್ಕೆ ಸೋಲಿನ ರುಚಿಯನ್ನು ನೀಡಿತ್ತು‌.

ಪಂದ್ಯದ ನಂತರ ಪ್ರೆಸೆಂಟೇಷನ್ ಸಮಯದಲ್ಲಿ ಸೌರವ್ ಗಂಗೂಲಿ ಅವರು ಹಾಜರಿದ್ದರು. ಆ ಸಂದರ್ಭದಲ್ಲಿ ತೆಗೆದಂತಹ ಒಂದು ಫೋಟೋವನ್ನು ಸೌರವ್ ಗಂಗೂಲಿ ಅವರು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅವರು ಹಂಚಿಕೊಂಡ ಫೋಟೋವನ್ನು ನೋಡಿರುವ ಅವರ ಮಗಳು ಸನಾ ತನ್ನ ಅಪ್ಪನ ಕಾಲೆಳೆದಿದ್ದಾರೆ. ಸೌರವ್ ಗಂಗೂಲಿ ಫೋಟೋಗೆ ನೀಡಿರುವ ಫೋಸ್ ಕುರಿತಾಗಿ ಅವರ ಮಗಳು ಕಾಮೆಂಟ್ ಒಂದರ ಮೂಲಕ ಸೌರವ್ ಅವರನ್ನು ಪ್ರಶ್ನೆ ಮಾಡಿದ್ದಾರೆ ‌

ಸನಾ ತನ್ನಪ್ಪನನ್ನು, ನಿಮಗೆ ಅಲ್ಲಿ ಏನೋ ಇಷ್ಟವಾಗುತ್ತಿಲ್ಲ ಅನಿಸ್ತಿದೆ? ಎಂದು ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ಉತ್ತರವಾಗಿ ಸೌರವ್ ಅವರು ನೀನು ನಾನು ಹೇಳಿದ ಹಾಗೆ ಕೇಳಲಿಲ್ಲ‌‌. ಅದೇ ಎಂದು ಉತ್ತರವನ್ನು ನೀಡಿದ್ದಾರೆ. ಅದಕ್ಕೆ ಮತ್ತೊಮ್ಮೆ ಪ್ರತಿಕ್ರಿಯೆ ನೀಡಿರುವ ಸನಾ ನಿಮ್ಮಿಂದಲೇ ನಾನು ಅದನ್ನು ಕಲಿಯುತ್ತಿದ್ದೇನೆ ಎಂದು ಹೇಳಿದ್ದಾರೆ. ಅಪ್ಪ ಮಗಳ ಈ ಕಾಮೆಂಟ್ ಗಳ ಮೂಲಕ ನಡೆದ ಸಂಭಾಷಣೆಯು ಸೌರವ್ ಅವರ ಅಭಿಮಾನಿಗಳ ಮೆಚ್ಚುಗೆಯನ್ನು ಪಡೆದಿದೆ‌.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here