“If you are bad, I’m your dad” ಅನ್ನೊ ಜಾಯಮಾನ ಆತನದು. ಏಕೆಂದರೆ ಅವನು ನಮ್ಮ ಟೀಮ್ ಇಂಡಿಯಾದ  ದಾದಾ. ಸರಿಸುಮಾರು 16 ವರ್ಷಗಳ ಹಿಂದೆ ಮುಂಬೈನ ವಾಂಖಡೆಯಲ್ಲಿ ನಡೆಯುತ್ತಿದ್ದ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ದ ಭಾರತ 5 ರನ್ ಗಳಿಂದ ಸೋತ್ತಿತ್ತು. ಆವಾಗ ಕೊನೆಯಲ್ಲಿ ನಮ್ಮ ಜಾವಗಲ್ ಶ್ರೀನಾಥ್ ರ ವಿಕೆಟ್ ಉರುಳಿಸಿದ್ದ ಫ್ಲಿಂಟಾಪ್ ತಾನು ಧರಿಸಿದ್ದ ಟೀ ಶರ್ಟ್ ಬಿಚ್ಚಿ ಗಾಳಿಯಲ್ಲಿ ಗಿರಗರ ತಿರುಗಿಸಿ ಅಬ್ಬರಿಸಿದ್ದ. ಅದಾಗಿ ಆರೇ ಅರೆ ತಿಂಗಳಲ್ಲಿ ಆಂಗ್ಲರ ನೆಲದ ಕ್ರಿಕೆಟ್ ನ ತವರು ಲಾಡ್ಸ್ ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವ ಸೋಲಿಗೆ ಕೆಡವಿದ ನಂತರ ದಾದ ಟೀ ಶರ್ಟ್ ಬಿಚ್ಚಿ ಗಾಳಿಯಲ್ಲಿ ಗಿರಗಿರ ತಿರುಗಿಸಿ ಆಂಗ್ಲರ ಅಹಂಕಾರ ತತ್ತರಿಸುವಂತೆ ಉತ್ತರಿಸಿದ್ದ..!

ಕ್ರಿಕೆಟ್ ನ ತವರಲ್ಲಿ ನೀವೂ ಹೀಗೆ ಮಾಡಿದ್ದು ಸರಿಯೆ ಎಂದು ಬಾಯ್ಕಟ್ ಒಮ್ಮೆ ಗಂಗೂಲಿಯನ್ನು ಕೇಳಿದ್ದಾಗ “ಲಾರ್ಡ್ಸ್ ಕ್ರಿಕೆಟ್ ನ ತವರಿರಬಹುದು.., ಆದರೆ ವಾಂಖಡೆ ನಮ್ಮ ತವರು ಕೂಡ..!” ಎಂದು ಉತ್ತರಿಸಿದವನು ದಾದ. ಎದುರಾಳಿಗಳ ಕಿರಿಕ್ ಗಳ ಕಂಗೆಡಿಸಿದವನು, ಕೆಣಕಿದವರ ಕೆಕ್ಕರಿಸಿದವನು , ವಿಶ್ವಕಪ್ ಗೆಲ್ಲದೆ ಇದ್ದರು ವಿಶ್ವದೆದುರು ನಮ್ಮ ತಂಡವ ಗೆಲ್ಲಿಸಿದವನು ದಾದ. ಆತನ ಬ್ಯಾಟಿಂಗ್ ದಾದಾಗಿರಿಯ ಬಗ್ಗೆ ಹೆಚ್ಚಿಗೆ ಯಾರಿಗು ಹೇಳಬೇಕಾಗಿಲ್ಲ.

ಏಕೆಂದರೆ ನಮ್ಮ ಜಮಾನದ ಎಲ್ಲರು ಗಂಗೂಲಿ, ಸಚಿನ್ , ದ್ರಾವಿಡ್ ರ ಆಟ ನೋಡಿಕೊಂಡೆ ಬೆಳೆದವರು. ಸೆಹವಾಗ್ ನಂತಹ ಹೊಡಿಬಡಿಯ ಆಟಗಾರನನ್ನು ಟೆಸ್ಟ್ ಕ್ರಿಕೆಟ್ ನ ಆರಂಭಿಕನಾಗಿ ಬೇಕೆ ಬೇಕೆಂದು ಹಠ ಹಿಡಿದವನು ದಾದ. ಏಕೋ ಏನೊ ಸೌರವ್ ಗೆ ಆಕ್ರಮಣಕಾರಿಆಟವೆ ಬಲು ಇಷ್ಟ . ಹಾಗಾಗಿ ಅವ ನಮಗೆ ಬಲು ಇಷ್ಟ . ಇವತ್ತು ಸೌರವ್ ಗಂಗೂಲಿಯ ಜನ್ಮದಿನ. ಹಾಗಾಗಿ ದಾದಗಿರಿ ನೆನಪಾಯ್ತು..!
#HappyBirthdayDada

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here