ಕ್ರಿಕೆಟ್ ಕ್ರೇಜ್ ಭಾರತದಲ್ಲಿ ಬಹಳ ಅಧಿಕ. ಐಪಿಎಲ್ ಆರಂಭವಾದರೆ ಕ್ರಿಕೆಟ್ ಅಭಿಮಾನಿಗಳಿಗೆ ಅದೊಂದು ಹಬ್ಬದ ಸಂಭ್ರಮ. ಅದು ಮುಗಿಯುವವರೆಗೆ ಅವರ ಆಸಕ್ತಿಯೆಲ್ಲಾ ಕೂಡಾ ಐಪಿಎಲ್ ಕ್ರಿಕೆಟ್ ಪಂದ್ಯಾವಳಿಗೆ ಸೀಮಿತ ಎನ್ನುವಂತೆ ಇರುತ್ತದೆ ವಾತಾವರಣ. ಐಪಿಎಲ್ ನಲ್ಲಿ ಎಲ್ಲಕ್ಕಿಂತ ಪ್ರಮುಖ ಆಕರ್ಷಣೆ ಎಂದರೆ ಅದರ ವೈಭವದಿಂದ ಕೂಡಿದ ಓಪನಿಂಗ್ ಸೆರಮನಿ(ಆರಂಭೋತ್ಸವ). ಇದನ್ನು ಕ್ರಿಕೆಟ್ ಬೋರ್ಡ್ ಕೂಡಾ ಬಹಳ ವಿಜೃಂಭಣೆಯಿಂದ ಕೋಟಿಗಟ್ಟಲೆ ಹಣ ಖರ್ಚು ಮಾಡಿ, ಬಾಲಿವುಡ್ ತಾರೆಯರು ಅಲ್ಲಿಗೆ ಆಗಮಿಸಿ ನೃತ್ಯಗಳನ್ನು ಮಾಡಿ ಕ್ರಿಕೆಟ್ ಅಭಿಮಾನಿಗಳನ್ನು ರಂಜಿಸುವ ಮೂಲಕ ಐಪಿಎಲ್ ಆರಂಭವಾಗುತ್ತಿತ್ತು.

ಆದರೆ ಇನ್ನು ಮುಂದೆ ಇಂತಹ ಅಬ್ಬರದ ಐಪಿಎಲ್ ಓಪನಿಂಗ್ ಸೆರಮನಿಗೆ ಬ್ರೇಕ್ ಬೀಳಲಿದೆ. ಏಕೆಂದರೆ ಈ ರೀತಿಯ ಅದ್ದೂರಿಯಾದ ಆರಂಭೋತ್ಸವಕ್ಕೆ ಕೋಟ್ಯಂತರ ರೂಪಾಯಿಗಳು ವಿನಾಕಾರಣ ವ್ಯರ್ಥವಾಗಿ ಹರಿಯುತ್ತಿದೆ ಎಂಬ ಚಿಂತನೆಯನ್ನು ಮಾಡಿದೆ ಬಿಸಿಸಿಐ. ಆದ ಕಾರಣ ಇನ್ನು ಮುಂದೆ ಐಪಿಎಲ್ ಸೀಸನ್ ಗಳಲ್ಲಿ ಇಂತಹ ದುಬಾರಿ ವೆಚ್ಚದ ಸಮಾರಂಭವನ್ನು ನಡೆಸಬಾರದು ಎಂದು ಬಿಸಿಸಿಐ ತೀರ್ಮಾನ ಮಾಡಿದ್ದು, ಕ್ರಿಕೆಟ್ ಅಭಿಮಾನಿಗಳಿಗೆ ಕೂಡಾ ಇಂತಹ ಸಮಾರಂಭದಲ್ಲಿ ಆಸಕ್ತಿ ಉಳಿದಿಲ್ಲ ಎಂದು ಬಿಸಿಸಿಐ ಹೇಳಿದೆ.

ಈ ವರ್ಷ ಪುಲ್ವಾಮ ಧಾಳಿಯ ಹಿನ್ನೆಲೆಯಲ್ಲಿ ಓಪನಿಂಗ್ ಕಾರ್ಯಕ್ರಮ ಮಾಡಿರಲಿಲ್ಲ.ಬದಲಿಗೆ ಧಾಳಿಯಿಂದ ನೊಂದವರಿಗೆ ಸಹಾಯ ನೀಡಲು ಮುಂದಾಗಿತ್ತು ಬಿಸಿಸಿಐ. ಅದರಂತೆ ಇನ್ನು ಮುಂದೆಯೂ ಸಹಾ ಓಪನಿಂಗ್ ಸೆರಮನಿಗೆ ವೆಚ್ಚವಾಗುವ 20 ಕೋಟಿಯಲ್ಲಿ 11 ಕೋಟೆಯನ್ನು ಭಾರತೀಯ ಸೇನೆಗೆ, 7 ಕೋಟಿಗನ್ನು ಸಿ.ಆರ್.ಪಿ.ಎಫ್ ಯೋಧರಿಗೆ ಹಾಗೂ ತಲಾ ಒಂದು ಕೋಟಿಯನ್ನು ನೌಕಾ ಮತ್ತು ವಾಯು ಸೇನೆಗೆ ನೀಡುವುದು ಉತ್ತಮ ಎಂಬ ನಿಲುವು ಬಿಸಿಸಿಐದಾಗಿದೆ. ಇತ್ತೀಚೆಗಷ್ಟೇ ಬಿಸಿಸಿಐ ಅಧ್ಯಕ್ಷರಾದ ಸೌರವ್ ಗಂಗೂಲಿ ಇಂತಹ ಒಂದು ಆಲೋಚನೆಯೊಂದಿಗೆ ಜನರ ಮನಸ್ಸನ್ನು ಗೆಲ್ಲುವ ಪ್ರಯತ್ನ ಮಾಡಿದ್ದಾರೆ ಎಂದು ಸುದ್ದಿಯಾಗಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here