ಕನ್ನಡ ಚಿತ್ರ ರಂಗದಿಂದ ಸ್ಟಾರ್ ನಟಿಯಾಗಿ ಬೆಳೆದು ಅನಂತರ ತೆಲುಗು ತಮಿಳಿನಲ್ಲಿ ಕೂಡಾ ಸಿನಿಮಾಗಳಲ್ಲಿ ಹಾಗೂ ಧಾರಾವಾಹಿಗಳಲ್ಲಿ ನಟಿಸಿ ಸಾಕಷ್ಟು ಹೆಸರು ಮಾಡಿದ್ದ ನಟಿ ವಿಜಯಲಕ್ಷ್ಮಿ ಅವರು ಚೆನ್ನೈನಲ್ಲಿ ಆತ್ಮಹತ್ಯೆಗೆ ಪ್ರಯತ್ನ ಮಾಡಿದ್ದಾರೆ‌. ಅವರು ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆಗೆ ಪ್ರಯತ್ನ ಮಾಡಿದ್ದು, ಅದಕ್ಕೂ ಮುನ್ನ ವೀಡಿಯೋ ಒಂದನ್ನು ಮಾಡಿ ಇದು ನನ್ನ ಕೊನೆಯ ವೀಡಿಯೋ ಇನ್ನು ಮುಂದೆ ನಾನು ಬದುಕಿರುವುದಿಲ್ಲ ಎಂದು ಹೇಳಿ ಮಾತ್ರೆಗಳನ್ನು ನುಂಗಿದ್ದಾರೆ. ಇನ್ನು ವಿಜಯಲಕ್ಷ್ಮಿ ಅವರು ತನ್ನ ಆತ್ಮಹತ್ಯೆಗೆ ಇಬ್ಬರು ವ್ಯಕ್ತಿಗಳು ಕಾರಣ ಎಂದು ಅವರು ಹೇಳಿದ್ದಾರೆ.

ನಟಿ ವಿಜಯಲಕ್ಷ್ಮಿ ಅವರು ವೀಡಿಯೋದಲ್ಲಿ ನನ್ನ ಸಾವಿಗೆ ಚೆನ್ನೈನಲ್ಲಿ ಇರುವ ಇಬ್ಬರು ವ್ಯಕ್ತಿಗಳು ಕಾರಣ ಎಂದು, ಅವರು ನನ್ನನ್ನು ತುಂಬಾ ಕಾಡುತ್ತಿದ್ದು, ನಾನು ವೇಶ್ಯಾವಾಟಿಕೆಯಲ್ಲಿ ತೊಡಗಿರುವುದಾಗಿ ನನ್ನ ಬಗ್ಗೆ ಅಪಪ್ರಚಾರವನ್ನು ಮಾಡುತ್ತಿದ್ದಾರೆ. ಇವರೇ ನನ್ನ ಸಾವಿಗೆ ಕಾರಣವೆಂದು ಹೇಳುತ್ತಾ, ಅಭಿಮಾನಿಗಳೇ ಅವರನ್ನು ಸುಮ್ಮನೆ ಬಿಡಬೇಡಿ ಎಂದು ವಿಜಯಲಕ್ಷ್ಮಿ ಅವರು ವೀಡಿಯೋದಲ್ಲಿ ತಮ್ಮ ವೇದನೆ ಯನ್ನು ತೋಡಿಕೊಂಡಿದ್ದಾರೆ. ಅಲ್ಲದೇ ಅವರು ವೀಡಿಯೋದಲ್ಲಿ ಇನ್ನೂ ಕೆಲವು ವಿಚಾರಗಳನ್ನು ಮಾತನಾಡಿದ್ದಾರೆ.

ಇಂತಹ ಅವಮಾನವನ್ನು ಸಹಿಸಿ ಬದುಕುವುದು ಸಾಧ್ಯ ಇಲ್ಲ ಎಂದಿರುವ ಅವರು , ನನ್ನ ಈ ಸಾವು ಇತರರ ಕಣ್ಣು ತೆರೆಸುವಂತಾಗಲಿ ಎಂದು ಹೇಳಿದ್ದಾರೆ. ಹೀಗೆ ತನ್ನ ವೇದನೆ ಯನ್ನು ಹೊರಹಾಕಿದ ನಂತರ ವಿಜಯಲಕ್ಷ್ಮಿ ಅವರು ಒಂದಷ್ಟು ಮಾತ್ರೆಗಳನ್ನು ನುಂಗಿ ಆತ್ಮಹತ್ಯೆಗೆ ಪ್ರಯತ್ನವನ್ನು ಮಾಡಿದ್ದಾರೆ. ಇನ್ನು ವಿಷಯ ಹೊರಗೆ ಬರುತ್ತಿದ್ದಂತೆ, ಮಾತ್ರೆ ನುಂಗಿದ್ದ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎನ್ನಲಾಗಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here