ನಿಕೆಶಾ ಪಟೇಲ್ ಕನ್ನಡದ ಕಿಚ್ಚ ಸುದೀಪ್ ಮತ್ತು ಚಿರಂಜೀವಿ ಸರ್ಜಾ ಅವರ ಅಭಿನಯದ ಸಿನಿಮಾ ನಾಯಕ ನಟಿ ಈಕೆ. ಕನ್ನಡದಲ್ಲಿ ಈಕೆ ನಟಿಸಿದ್ದು ಕೆಲವೇ ಸಿನಿಮಾಗಳಾದರೂ, ಟಾಲಿವುಡ್, ಕಾಲಿವುಡ್ ಸಿನಿಮಾಗಳಲ್ಲಿ ಕೂಡಾ ನಟಿಸಿದ ಈ ನಟಿ ತನ್ನ ಅಂದ ಹಾಗೂ ಗ್ಲಾಮರ್ ಲುಕ್ ಮಾತ್ರವೇ ಅಲ್ಲದೇ ನಟನೆಯ ಮೂಲಕ ಕೂಡಾ ಹೆಸರಾದವರು. ತೆಲುಗಿನಲ್ಲಿ ನಟ ಪವನ್ ಕಲ್ಯಾಣ್ ಜೊತೆಗೆ ,ತಮಿಳಿನಲ್ಲಿ ಅರವಿಂದ ಸ್ವಾಮಿ ಜೊತೆ ನಟಿಸಿದ ಈ ನಟಿ ಬಹುಭಾಷಾ ತಾರೆಯಾದರೂ ಕೂಡಾ ಅವಕಾಶಗಳು ಇಲ್ಲದೆ ಇರುವುದಕ್ಕೆ ಕಾರಣವನ್ನು ವಿವರಿಸಿದ್ದಾರೆ.

ಹಾಲಿವುಡ್ ನಲ್ಲಿ ಇರುವಂತೆ ಇಲ್ಲಿ ಕೂಡಾ ಕಾಸ್ಟಿಂಗ್ ಕೌಚ್ ಇದೆ ಎಂಬುದನ್ನು ಬಹಳ ಸ್ಪಷ್ಟವಾಗಿ ಹೇಳುವ ನಿಕೇಶಾ ಪಟೇಲ್ ಅನೇಕರು ಅವಕಾಶಕ್ಕಾಗಿ ರಾಜಿ ಮಾಡಿಕೊಳ್ಳಲು ಕೇಳುತ್ತಾರೆ. ಇಂತಹ ಅವಕಾಶವನ್ನು ಒಪ್ಪಿದರೆ ಮಾತ್ರ ಸಿನಿಮಾಗಳಲ್ಲಿ ಅವಕಾಶ ಸಿಗುತ್ತದೆ ಎಂದು ಹೇಳಿದ್ದಾರೆ. ತನಗೆ ಸೂಪರ್ ಹಿಟ್ ಸಿನಿಮಾಗಳ ನಂತರ ಕೂಡಾ ಅವಕಾಶಗಳು ಸಿಗದೇ ಇರಲು ಇದೇ ಕಾರಣ ಎನ್ನುವ ನಿಕೇಶಾ ಅವರು ನನ್ನೊಂದಿಗೆ ಮಂಚ ಹಂಚಿಕೊಳ್ಳುವುದಕ್ಕಾಗಿ ಅನೇಕರು ಕೇಳಿದ್ದರು. ಆದರೆ ನಾನು ಒಪ್ಪದ ಕಾರಣ ಸಿನಿಮಾ ರಂಗದಲ್ಲಿ ಅವಕಾಶಗಳು ಕಡಿಮೆಯಾಗಿವೆ ಎನ್ನುತ್ತಾರೆ.

ಸಿನಿಮಾ ಹಿನ್ನೆಲೆಯ ಕುಟುಂಬಗಳಿಂದ ಬಂದ ನಟಿಯರಿಗೆ ಈ ಅನುಭವ ಆಗದೇ ಇರಬಹುದು ಆದರೆ ಇಲ್ಲಿ ವೃತ್ತಿಪರ ಅಲ್ಲದವರಿಗೆ ನೆಲೆಯೂರಲು ಕಷ್ಟವಾದಾಗ ಇಂತಹ ಅವಕಾಶಗಳನ್ನು ನೀಡಲಾಗುತ್ತದೆ. ಅದರ ಉದ್ದೇಶ ಮಾತ್ರ ಒಂದೇ ಎನ್ನುವ ಈ ನಟಿ ಮೀಟೂ ಅಭಿಯಾನದ ನಂತರ ಕೂಡಾ ಕಾಸ್ಟಿಂಗ್ ಕೌಚ್ ನಡೆಯುತ್ತಿದೆ ಎಂದು ಹೇಳುವ ಮೂಲಕ ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಎಂಬುದು ಇದೆ ಎಂದು ಹೇಳಿ, ಎಲ್ಲರ ಗಮನವನ್ನು ಸೆಳೆದಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here