ರಾಜ್ಯದಲ್ಲಿ ಅತೃಪ್ತ ಶಾಸಕರ ರಾಜೀನಾಮೆ ಸ್ವೀಕಾರ ವಿಚಾರದಲ್ಲಿ ಸ್ಪೀಕರ್ ರಮೇಶ್ ಕುಮಾರ್ ಅವರ ಮೇಲೆ ಹಲವು ಆರೋಪಗಳು ಕೇಳಿ ಬಂದಿವೆ. ಅವರು ಬೇಕಂತಲೇ ತಡ ಮಾಡುತ್ತಿದ್ದಾರೆ, ಒಂದು ಪಕ್ಷದ ಪರವಾಗಿ ಅವರು ತಮ್ಮ ನಿಲುವನ್ನು , ನಿಷ್ಠೆಯನ್ನು ತೋರುತ್ತಿದ್ದಾರೆ ಎಂದು ವಿರೋಧಿ ವಲಯದಲ್ಲಿ ಕೇಳಿಬಂದಿತ್ತು. ಇನ್ನು ಇದೇ ವಿಚಾರವಾಗಿ ಅಂದರೆ ತಮ್ಮ ಮೇಲೆ ಬಂದ ಆಪಾದನೆಗಳ ಕುರಿತಾಗಿ ಮಾತನಾಡಿರುವ ವಿಧಾನ ಸಭೆ ಸ್ಪೀಕರ್ ರಮೇಶ್ ಕುಮಾರ್ ಅದಕ್ಕೆ ಉತ್ತರವನ್ನು ನೀಡುತ್ತಾ ಗಾಂಧಿಯನ್ನೇ ಕೊಂದ ದೇಶವಿದು , ಇನ್ನು ರಮೇಶ್ ಕುಮಾರ್ ನನ್ನು ಬಿಡುತ್ತಾ ಎಂದು ಮಾದ್ಯಮಗಳ ಮುಂದೆ ಹೇಳಿದ್ದಾರೆ.

ಆಗ ಗಾಂಧಿಯವರಿಗೆ ನಮಸ್ಕಾರ ಹೇಳಿ, ನಂತರ ಅವರ ಮೇಲೆಯೇ ಗುಂಡು ಹಾರಿಸಲಾಯಿತು. ಗಾಂಧಿಯವರನ್ನು ಕೊಲ್ಲಲು ಪಿಸ್ತೂಲು ಬೇಕಿರಲಿಲ್ಲ. ದೊಣ್ಣೆ ಯಿಂದ ಹೊಡೆದಿದ್ದರೂ ಸಾವನ್ನಪ್ಪುತ್ತಿದ್ದರು. ಗಾಂಧಿ ಸತ್ತಿದ್ದಾರಾ ಎಂದು ಪ್ರಶ್ನಿಸುತ್ತಾ, ಇಲ್ಲ ಅವರ ಮೌಲ್ಯಗಳು ಇಂದಿಗೂ ಇವೆ, ಅವು ಯಾವತ್ತೂ ಸಾಯೋದಿಲ್ಲ ಎಂದು ಬಹಳ ಮೌಲ್ಯವಾದ ಮಾತುಗಳನ್ನಾಡುವ ಮೂಲಕ ತಮ್ಮ ನಡೆಯ ಬಗ್ಗೆ ಸಮರ್ಥನೆಯನ್ನು ನೀಡಿದ್ದಾರೆ ವಿಧಾನ ಸಭಾ ಸ್ಪೀಕರ್ ಅವರಾದ ಮಾನ್ಯ ರಮೇಶ್ ಕುಮಾರ್ ಅವರು.

ಮಾತು ಮುಂದುವರೆಸುತ್ತಾ ಸುಪ್ರೀಂ ಕೋರ್ಟ್ ತನ್ನ ಕೆಲಸ ತಾನು ಮಾಡಲಿ. ತೀರ್ಪು ಬಂದ ಮೇಲೆ ಏನು ಮಾಡಬೇಕೆಂಬುದನ್ನು ಎಂಬುದನ್ನು ಆಲೋಚನೆ ಮಾಡಿದರಾಯಿತು ಎಂದ ಅವರು, ನಿನ್ನೆಯ ದಿನ ಅತೃಪ್ತ ಶಾಸಕರು ಮತ್ತೊಮ್ಮೆ ಕ್ರಮಬದ್ಧವಾಗಿ ರಾಜೀನಾಮೆಯನ್ನು ನೀಡಲು ಬಂದಾಗ, ಅವರನ್ನು ಸೀರಿಯಲ್ ಪ್ರಕಾರ ವಿಚಾರಣೆ ಮಾಡಿ ಅವರ ರಾಜೀನಾಮೆಗಳನ್ನು ಸ್ವೀಕರಿಸಿದ್ದಾಗಿ ರಮೇಶ್ ಹೇಳಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here