ಪ್ರತಿಯೊಬ್ಬ ವ್ಯಕ್ತಿಯು ತಮ್ಮ ಯಾವುದೇ ಸಮಾರಂಭದ ಆಚರಣೆಯನ್ನು ಬಹಳ ಚೆನ್ನಾಗಿ ಆಚರಿಸಲು ಬಯಸುತ್ತಾರೆ ಮತ್ತು ಆಧುನಿಕತೆಯ ಭಾಗವಾಗಿ ಯಾವುದೇ ಸಂತಸದ ಆಚರಣೆಯಲ್ಲೂ ವಿಶೇಷವಾಗಿ ಅಂದವಾದ ವಿನ್ಯಾಸದ ಕೇಕ್ ಅನ್ನು ಇಟ್ಟು ಆಚರಿಸಲು ಬಯಸುತ್ತಾರೆ. ಇದಕ್ಕಾಗಿ ಪ್ರತಿಯೊಬ್ಬರೂ ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಕೇಕ್ ಗಳನ್ನು ಮಾಡಿಸುತ್ತಾರೆ. ಆದರೆ ಇಂದು ನಾವು ನಿಮಗೆ ಹೇಳಲು ಹೊರಟಿರುವುದು ಒಂದು ಬಹಳ ದುಬಾರಿಯಾದ ಕೇಕ್ ಬಗ್ಗೆ ಮತ್ತು ಅದರ ಖರೀದಿ ಶ್ರೀಮಂತರ ಆಲೋಚನೆಗೆ ಕೂಡಾ ಮೀರಿದೆ. ಹಾಗಾದರೆ ಬನ್ನಿ ಈ ವಿಶಿಷ್ಟ ಕೇಕ್ ಮತ್ತು ಅದರ ವಿಶೇಷತೆಯ ಬಗ್ಗೆ ತಿಳಿದುಕೊಳ್ಳೋಣ.

ದುಬೈನ ಸೆಲೆಬ್ರಿಟಿ ಕೇಕ್ ಡಿಸೈನರ್ ಡೆಬ್ಬಿ ವಿಂಗ್ಹ್ಯಾಮ್ ಮದುವೆ ಹೆಣ್ಣಿನಂತೆ ಅಲಂಕೃತಗೊಂಡ ಸುಂದರವಾದ ಹುಡುಗಿಯಂತೆ ಕಾಣುವ ಕೇಕ್ ಅನ್ನು ರಚಿಸಿದ್ದಾರೆ. ಎಲ್ಲಕ್ಕಿಂತ ಮುಖ್ಯವಾದ ವಿಷಯವೆಂದರೆ ಅದು ಪ್ರತಿಯೊಬ್ಬರೂ ಖರೀದಿಸಬಹುದಾದ ಸಾಮಾನ್ಯ ಕೇಕ್ ಅಲ್ಲ, ಏಕೆಂದರೆ ಅದರ ಬೆಲೆ ತುಂಬಾ ಹೆಚ್ಚಾಗಿದ್ದು, ಅದನ್ನು ಕೇಳಿದರೆ ತಲೆ ತಿರುಗಬಹುದು. ಪ್ರಸ್ತುತ ಇದು ವಿಶ್ವದ ಅತ್ಯಂತ ದುಬಾರಿ ಕೇಕ್ ಎಂದು ಪರಿಗಣಿಸಲ್ಪಟ್ಟಿದೆ, ಇದು ತಯಾರಿಸಲು 10 ದಿನಗಳಿಗಿಂತ ಹೆಚ್ಚು ಸಮಯ ತೆಗೆದುಕೊಂಡಿದೆ. ಈ ವಿಶಿಷ್ಟ ಕೇಕ್ ತಯಾರಿಸಲು 1000 ನೈಜ ಮುತ್ತುಗಳು, 5000 ಹೂವುಗಳು, 1000 ಮೊಟ್ಟೆಗಳು ಮತ್ತು 25 ಕೆಜಿ ಚಾಕೊಲೇಟ್ ಅನ್ನು ಬಳಸಲಾಗಿದೆ. ಈ ಕೇಕ್ ನ ತೂಕ ಸುಮಾರು 100 ಕೆ.ಜಿ.

ಈ ಕೇಕ್ ತಯಾರಿಕೆಯೊಂದಿಗೆ, ಡೆಬ್ಬಿ ವಿಂಗ್ಹ್ಯಾಮ್ ವಿಶ್ವದ ಅತ್ಯಂತ ದುಬಾರಿ ಕೇಕ್ ತಯಾರಿಸಿದ ದಾಖಲೆಯನ್ನು ಮಾಡಿದ್ದಾರೆ. ಇದರ ಮೌಲ್ಯ ಒಂದು ಕೋಟಿಗಿಂತ ಅಧಿಕ ಎನ್ನಲಾಗಿದ್ದು, ಮೂರು ಮರ್ಸಿಡಿಸ್ ಕಾರುಗಳನ್ನು ಖರೀದಿಸಬಹುದಾಗಿದೆ. ಈ ವರ್ಷದ ಆರಂಭದಲ್ಲಿ ದುಬೈ ವರ್ಲ್ಡ್ ಟ್ರೇಡ್ ಸೆಂಟರ್ನಲ್ಲಿ ನಡೆದ ಬ್ರೈಡಲ್ ಪ್ರದರ್ಶನದಲ್ಲಿ ಈ ದುಬಾರಿ ಹಾಗೂ ಅಂದವಾದ ಕೇಕ್ ಅನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಇದಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ಪಡೆಯಿತು. ಡೆಬ್ಬಿ ಈ ಮೊದಲು ಆದರೆ ಕೇಕ್ ಕುರ್ಚಿ, ಮಂಚ ಮತ್ತು ಮಡಕೆಯ ಆಕಾರದಲ್ಲಿ ಕೇಕ್ ಗಳನ್ನು ತಯಾರಿಸಿದ್ದಾರೆ. ಆದರೆ ಈ ಬಾರಿ ತಯಾರಿಸಿದ ಕೇಕ್ ವಿಶ್ವ ಪ್ರಸಿದ್ಧವಾಗಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here