ಸಾಮಾನ್ಯವಾಗಿ ನಾಯಿಗಳಿಗೆ ಒಂದು ಬಾಲ ಇದ್ದೇ ಇರುತ್ತದೆ. ಅದರಲ್ಲಿ ವಿಶೇಷ ಏನಿರುವುದಿಲ್ಲ. ಏಕೆಂದರೆ ಅದು ಎಲ್ಲರಿಗೂ ತಿಳಿದ ವಿಷಯವೇ. ಆದರೆ ನಾಯಿ ಮರಿಯೊಂದಕ್ಕೆ ಒಂದು ಬಾಲದ ಬದಲಾಗಿ ಎರಡು ಬಾಲಗಳಿದ್ದರೆ ಹೇಗಿರುತ್ತದೆ? ಎಂಬ ಊಹೆಯೇ ನಮಗೆ ವಿಚಿತ್ರ ಎನಿಸುತ್ತದೆ. ಈ ಬಾಲಗಳು ಒಂದು ಸಾಮಾನ್ಯವಾಗಿರುವಂತೆ ದೇಹದ ಹಿಂಭಾಗದಲ್ಲಿ , ಮತ್ತೊಂದು ಮೂಗಿನ ಮೇಲೆ ಎಂದರೆ ವಿಷಯ ವಿಚಿತ್ರ ಮಾತ್ರ ಹುಚ್ಚಾಟ ಇದು ಎನ್ನುವಿರಾ? ಆದರೆ ಇದು ಹುಚ್ಚಾಟವಲ್ಲ‌, ಬದಲಿಗೆ ವಾಸ್ತವ. ಇಲ್ಲೊಂದು ನಾಯಿ ಮರಿಗೆ ನಿಜವಾಗಿಯೂ ಮೂಗಿನ ಮೇಲೊಂದು ಬಾಲ ಮೂಡಿದ್ದು, ಈ ವಿಶೇಷವಾದ ನಾಯಿಯನ್ನು “ಯೂನಿಕಾರ್ನ್ ನಾಯಿ” ಎಂದೇ ಪ್ರಸಿದ್ಧವಾಗಿದೆ.

ನರ್ವಾಲ್ ಎಂದು ಹೆಸರಿಸಲಾಗಿರುವ ಈ ನಾಯಿ ಮರಿಯನ್ನು ಅಮೆರಿಕಾದಲ್ಲಿ ಮ್ಯಾಕ್ಸ್ ಮಿಶನ್ ಎಂಬ ಒಂದು ಪ್ರಾಣಿಗಳ ಸಂರಕ್ಷಣಾ ಸೇವೆ ಸಂಸ್ಥೆ ತನ್ನ ಆಶ್ರಯದಲ್ಲಿ ಇಟ್ಟುಕೊಂಡಿದೆ. ಕೆಲವು ದಿನಗಳ ಹಿಂದೆ ಅಮೆರಿಕದ ಮಿಸ್ಸೌರಿಯ ರಸ್ತೆಗಳಲ್ಲಿ ಚಳಿ ಗಾಳಿಯಿಂದ ಸಂಕಷ್ಟಕ್ಕೆ ಗುರಿಯಾಗಿದ್ದ ಈ ನಾಯಿ ಮರಿಯ ಬಗ್ಗೆ ದಾರಿ ಹೋಕರು ಈ ಸಂಸ್ಥೆಗೆ ತಿಳಿಸಿದ್ದಾರೆ. ಆಗ ಅಲ್ಲಿಗೆ ಧಾವಿಸಿದ ರಕ್ಷಣಾ ಸೇವಕರು ನಾಯಿ ಮರಿಯನ್ನು ತಮ್ಮ ಸಂಸ್ಥೆಗೆ ತಂದು ಅದರ ಆರೈಕೆ ಮಾಡಿದ್ದಾರೆ. ಈ ಸಂಸ್ಥೆಯ ಮುಖ್ಯಸ್ಥರಾದ ರೋಶೆಲ್ ಸ್ಟೀಫನ್ ಮುಖದ ಮೇಲೆ ಬಾಲ ಇರುವ ಈ ವಿಶೇಷ ನಾಯಿ ಮರಿ ನಮ್ಮ ಬಳಿ ಇರುವುದು ಬಹಳ ಖುಷಿಯಾಗಿದೆ ಎಂದಿದ್ದಾರೆ.

ಮೂಗಿನ ಮೇಲೆ ಬಾಲ ಇರುವ ಈ ನಾಯಿ ಮರಿಯನ್ನು ನೋಡಲು ಬಹಳಷ್ಟು ಜನ ಬರುತ್ತಾರೆ ಎನ್ನುತ್ತಾರೆ ರೋಶೆಲ್‌‌ . ಇನ್ನು ಮೂಗಿನ ಮೇಲೆ ಬಾಲ ಇರುವುದರಿಂದ ಒಳಗೆ ಮೂಳೆಯೇನಾದರೂ ಬೆಳೆದಿದ್ದರೆ ನಾಯಿ ಮರಿಗೆ ತೊಂದರೆ ಎಂದು ಅದಕ್ಕೆ ಎಕ್ಸ್ ರೇ ಕೂಡಾ ಮಾಡಿಸಲಾಗಿದ್ದು, ಆಶ್ಚರ್ಯ ಎಂದರೆ ಬಾಲ ಬೆಳೆದಿರುವ ಮೂಗಿನ ಒಳ ಭಾಗದಲ್ಲಿ ಯಾವುದೇ ಮೂಳೆ ಇಲ್ಲದಿರುವುದು ಕಂಡು ಬಂದಿದೆ. ಈ ನಾಯಿ ಮರಿ ನರ್ವಾಲ್ ಈಗ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here