ಸಾಮಾಜಿಕ ಜಾಲತಾಣಗಳಲ್ಲಿ ಒಂದು ಫೋಟೋ ಸಂಚಲನವನ್ನು ಸೃಷ್ಟಿಸುತ್ತಿದೆ. ಆ ಫೋಟೋವನ್ನು ನೋಡಿದಾಗ ಯಾರೋ ಒಬ್ಬ ಅತ್ಯುತ್ತಮ ಫೋಟೋಗ್ರಾಫರ್ ಒಂದೊಳ್ಳೆ ಫೋಟೋ ತೆಗೆದು ಹಾಕಿದ್ದಾರೆ ಎನಿಸುತ್ತದೆ. ಫೋಟೋದಲ್ಲಿ ಒಂದು ಸುಂದರವಾದ ತಾಯಿ ಹಕ್ಕಿ , ತನ್ನ ಮರಿಗೆ ಆಹಾರವನ್ನು ನೀಡುತ್ತಿರುವ ಬಹಳ ಸುಂದರವಾದ ಫೋಟೋ. ಆದರೆ ಅದೇ ಫೋಟೋವನ್ನು ಸೂಕ್ಷ್ಮವಾಗಿ ಗಮನಿಸಿದಾದ, ಅಲ್ಲೊಂದು ಮನ ಕಲಕುವ ದೃಶ್ಯ ಕಾಣುತ್ತಿದೆ. ಆ ಛಾಯಾಗ್ರಾಹಕ ಆ ಚಿತ್ರದ ಮೂಲಕ ಒಂದು ವಾಸ್ತವ ಅಂಶವನ್ನು ತೆರೆದಿಟ್ಟು, ಎಲ್ಲರ ಕಣ್ಣು ತೆರೆಸೋ ಪ್ರಯತ್ನ ಮಾಡಿದ್ದಾರೆ.

ಆ ಫೋಟೋದಲ್ಲಿ ತಾಯಿ ಹಕ್ಕಿ ಮರಿ ಹಕ್ಕಿಗೆ ಆಹಾದ ಕೊಡ್ತಾ ಇದೆ, ಆದರೆ ಆ ಆಹಾರ ಏನು ಅಂದ್ರೆ ದವಸ, ಧಾನ್ಯ ಅಥವಾ ಯಾವುದಾದರೂ ಹುಳು ಅಲ್ಲ ಬದಲಿಗೆ ಅದೊಂದು ಸಿಗರೇಟ್ ತುಂಡು. ಪಾಪ ಅದನ್ನು ಅರಿಯದ ಆ ಮುಗ್ಧ ಹಕ್ಕಿಯ ಮರಿ ಆ ಸಿಗರೇಟ್ ತುಂಡನ್ನು ಬಹಳ ಸಂತಸದಿಂದ ತನ್ನ ಕೊಕ್ಕಿನಲ್ಲಿ ಇಟ್ಟುಕೊಂಡು ಓಡಿರುವುದು ಕೂಡಾ ಇನ್ನೊಂದು ಫೋಟೋದಲ್ಲಿ ತೋರಿಸಿದ್ದಾರೆ. ಕಪ್ಪು ಸ್ಕಿಮ್ಮರ್ ಹಕ್ಕಿಯು ತನ್ನ ಮರಿಗೆ ಸಿಗರೇಟ್ ಸೇದಿ ಬಿಸಾಡಿದ ಅದರ ಕೊನೆಯ ಭಾಗವನ್ನು ಹೆಕ್ಕಿ ತಂದು ಮರಿಗೆ ಆಹಾರವಾಗಿ ನೀಡಿದೆ. ಚಿತ್ರ ಸಾಮಾನ್ಯವಾದುದುಲ್ಲ.

 

ಆ ಫೋಟೋ ತೆಗೆದಿರುವ ಕೆರೆನ್ ಮೆಸನ್ ಎಂಬ ಮಹಿಳೆ ಬೀಚ್ ಗಳಲ್ಲಿ ದಯವಿಟ್ಟು ಸಿಗರೇಟ್ ಸೇದಿದ ಮೇಲೆ ಅದರ ವ್ಯರ್ಥವನ್ನು ಎಲ್ಲೆಂದರಲ್ಲಿ ಎಸೆದು ಅಮಾಯಕ ಪಕ್ಷಿಗಳ ಜೀವನಕ್ಕೆ ಕಂಟಕವಾಗಬೇಡಿ ಎಂಬ ಸಂದೇಶವನ್ನು ನೀಡಿದ್ದಾರೆ. ಸಾಗರ ತೀರಗಳನ್ನು ಆ್ಯಸ್ಟ್ರೆ ರೀತಿಯಲ್ಲಿ ಬಳಸಬೇಡಿ ಎಂದಿದ್ದಾರೆ‌. ಆಕೆ ಪೋಸ್ಟ್ ಮಾಡಿದ ಫೋಟೋಗಳನ್ನು ನೂರಾರು ಮಂದಿ ಶೇರ್ ಮಾಡುವ ಮೂಲಕ ಒಂದು ಜಾಗೃತಿ ಮೂಡಿಸುವ ಕೆಲಸಕ್ಕೆ ಕೈ ಹಾಕಿದ್ದಾರೆ. ಇನ್ನಾದರೂ ಸಿಗರೇಟ್ ಸೇದುವವರು ಜಾಗೃತ ರಾಗಿ ಎಂದು ಈ ಮೂಲಕ ಸಂದೇಶ ನೀಡಿದ್ದು, ಪ್ರಕೃತಿ ಉಳಿಸಿ ಎಂದು ಮನವಿ ಮಾಡಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here