ಬಿಜೆಪಿ ಜೊತೆಗೆ ಸೇರಿರುವ ಪಕ್ಷೇತರ ಶಾಸಕರಾದ ಆರ್.ಶಂಕರ್ ಮತ್ತು ಹೆಚ್.ನಾಗೇಶ್ ಅವರು ವಿಧಾನ ಸಭಾ ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ಪ್ರತ್ಯೇಕವಾಗಿ ಪತ್ರಗಳನ್ನು ಬರೆಯುವ ಮೂಲಕ ತಾವು ಆಡಳಿತ ಪಕ್ಷಕ್ಕೆ ನೀಡಿದ ಬೆಂಬಲವನ್ನು ವಾಪಸ್ ಪಡೆದುಕೊಳ್ಳಲಾಗಿದೆಯೆಂದೂ, ತಮಗೆ ವಿರೋಧ ಪಕ್ಷದಲ್ಲಿ ಆಸನವನ್ನು ವ್ಯವಸ್ಥೆ ಮಾಡಿಕೊಡಿ ಎಂದು ಅವರು ಮನವಿಯನ್ನು ಮಾಡಿಕೊಂಡಿದ್ದಾರೆ. ಸಚಿವ ಸ್ಥಾನಗಳಿಗೆ ರಾಜೀನಾಮೆ ನೀಡಿದ ನಂತರ ಅತೃಪ್ತ ಶಾಸಕರ ಜೊತೆ ಮುಂಬೈ ಸೇರಿರುವ ಇಬ್ಬರೂ ಪಕ್ಷೇತರರು ಕೂಡಾ ಅಲ್ಲಿಂದಲೇ ಪತ್ರವನ್ನು ಬರೆದಿದ್ದಾರೆ.

ಈ ಇಬ್ಬರು ಪಕ್ಷೇತರ ಶಾಸಕರು ಕಳೆದ ಜುಲೈ 8 ರಂದು ರಾಜ್ಯಪಾಲರನ್ನು ಭೇಟಿ ಮಾಡಿ, ತಮ್ಮ ರಾಜೀನಾಮೆ ಹಾಗೂ ಬೆಂಬಲ ವಾಪಸ್ ಪಡೆಯುವ ಬಗ್ಗೆ ರಾಜ್ಯಪಾಲರಿಗೆ ಪತ್ರವನ್ನು ನೀಡಿದ್ದರು‌. ಈಗ ಅವರು ಸ್ಪೀಕರ್ ಅವರಿಗೆ ಪತ್ರವನ್ನು ಬರೆಯುವ ಮೂಲಕ ತಾವು ಆಡಳಿತ ಪಕ್ಷಕ್ಕೆ ನೀಡಿದ ಬೆಂಬಲವನ್ನು ವಾಪಸ್ಸು ಪಡೆಯುತ್ತಿರುವುದರ ಬಗ್ಗೆ ತಿಳಿಸಿದ್ದು, ತಮಗೆ ಪ್ರತಿ ಪಕ್ಷದಲ್ಲಿ ಆಸನ ವ್ಯವಸ್ಥೆಯನ್ನು ಮಾಡಿಕೊಡಬೇಕೆಂಬ ಮನವಿಯನ್ನು ಸ್ಪೀಕರ್ ಅವರ ಮುಂದಿಟ್ಟಿದ್ದಾರೆ.

ಸಚಿವರಾಗಿ ಅವರು ತಮ್ಮ ಸ್ಥಾನಗಳಿಗೆ ರಾಜೀನಾಮೆಯನ್ನು ನೀಡಿದ್ದರೂ ಸಹಾ ಪಕ್ಷೇತರರಿಗೆ ಸಚಿವರಿಗೆ ಕಲ್ಪಿಸಲಾಗುವ ಆಸನಗಳ ಸಾಲಿನಲ್ಲಿ ಆಸನಗಳನ್ನು ಮೀಸಲಿಡಬೇಕಾಗುತ್ತದೆ. ಪ್ರಸ್ತುತ ಆಸನ ಸಂಖ್ಯೆ 31, 32 ಪಕ್ಷೇತರರಿಗೆ ಮೀಸಲಾಗಿದ್ದು, ಈಗ ಅದನ್ನು ಬದಲಿಸುವಂತೆ , ಆಡಳಿತ ಸರ್ಕಾರಕ್ಕೆ ನೀಡಿದ್ದ ಬೆಂಬಲ ವಾಪಸ್ಸು ಪಡೆದಿರುವುದಾಗಿ ಪತ್ರ ಬರೆದಿರುವ ಇಬ್ಬರು ಪಕ್ಷೇತರ ಶಾಸಕರು ಮನವಿಯನ್ನು ಮಾಡಿಕೊಂಡಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here