ಪ್ರೇಮ ಎಂಬುದು ಕೆಲವರಿಗೆ ಜೀವನದ ಒಂದು ಮಹತ್ವದ ಘಟ್ಟ. ಅವರು ತಾವು ಪ್ರೇಮಿಸಿದವರಿಗಾಗಿ ತಮ್ಮ ಸರ್ವಸ್ವವನ್ನೂ ಕೂಡಾ ತ್ಯಾಗ ಮಾಡಲು ಸಿದ್ದರಿರುತ್ತಾರೆ ಎಂದೆಲ್ಲಾ ನಾವು ಸಿನಿಮಾ ಗಳಲ್ಲಿ, ಕಥೆಗಳಲ್ಲಿ ನೋಡಿದ್ದೇವೆ, ಕೇಳಿದ್ದೇವೆ. ಇತ್ತೀಚಿನ ದಿನಗಳಲ್ಲಿ ಪ್ರೇಮದ ಹೆಸರಿನಲ್ಲಿ ಟೈಂ ಪಾಸ್ ಮಾಡುವವರು ಕೂಡಾ ಕಡಿಮೆಯೇನಿಲ್ಲ, ಪ್ರೇಮದ ಹೆಸರಿನಲ್ಲಿ ಮೋಸ ಹೋಗುವವರು ಕೂಡಾ ಕಡಿಮೆಯೇನಿಲ್ಲ‌. ಆದರೆ ಇಲ್ಲೊಬ್ಬ ಯುವಕ ತಾನು ಹುಡುಗಿಯೊಂದಿಗೆ ನಿಶ್ಚಿತಾರ್ಥದ ನಂತರ ನಿಶ್ಚಿತಾರ್ಥ ಮಾಡಿಕೊಂಡ ಹುಡುಗಿಯನ್ನು ಯಾವ ಮಟ್ಟಕ್ಕೆ ಪ್ರೀತಿಸಿದ ಎಂದರೆ ದುರಾದೃಷ್ಟವಶಾತ್ ಆಕೆ ತನ್ನ ಕೈ ಹಾಗೂ ಕಾಲುಗಳನ್ನು ಕಳೆದುಕೊಂಡರೂ ಕೂಡಾ ಸದಾ ಆಕೆಯ ಜೊತೆಯಿರಲು ನಿರ್ಧರಿಸಿ, ತನ್ನ ಪ್ರೇಮ ಎಷ್ಟು ಸತ್ಯ ಎನ್ನುವುದನ್ನು ಸಾರಿದ್ದಾನೆ.

ಗುಜರಾತಿನ ಜಾಮ್ ನಗರದ ಲಾಲ್ ಪುರದ ಹತ್ತಿರ ಡಬಾಸ್ ಎಂಬ ಹಳ್ಳಿಯ ನಿವಾಸಿಯಾದ ಚಿರಾಗ್ ಎನ್ನುವ ಯುವಕನಿಗೆ ಹಿರಲ್ ಎನ್ನುವ ಯುವತಿಯೊಡನೆ ನಿಶ್ಚಿತಾರ್ಥವಾಗಿತ್ತು. ಉಜ್ವಲ ಭವಿಷ್ಯದ ಕನಸನ್ನು ಹೊತ್ತ ಈ ಜೋಡಿಯ ಜೀವನ ವಿವಾಹದೊಂದಿಗೆ ಆರಂಭವಾಗುವ ಮೊದಲೇ, ಮೇ 6, ರಂದು ಹಿರಲ್ ತನ್ನ ಮನೆಯಲ್ಲಿ ಕೆಲಸ ಮಾಡುವಾಗ, ಅವರ ಮನೆಯ ಮೇಲೆ ಹಾದು ಹೋಗಿದ್ದ 66 KV ವೋಲ್ಟೇಜ್ ವೈರ್ ಒಂದು ಕಿತ್ತು ಇವರ ಮನೆಯ ಮೇಲೆ ಬಿದ್ದು, ಅದು ಮನೆಯ ಕಿಟಕಿಯವರೆಗೆ ಬಿದ್ದಿತ್ತು‌‌. ಹಿರಲ್ ಮನೆ ಕೆಲಸ ಮಾಡುತ್ತಾ ಕಿಟಕಿ ತೆಗೆದಾಗ ಆ ವೈರ್ ಆಕೆಗೆ ಸೋಕಿ ವಿದ್ಯುತ್ ಶಾಕ್ ತಗುಲಿದೆ.

ಆಸ್ಪತ್ರೆಗೆ ದಾಖಲಾದಾಗ ಚಿಕಿತ್ಸೆ ನೀಡುತ್ತಿದ್ದ ವೈದ್ಯರು ಇನ್ಫೆಕ್ಷನ್ ಕಾರಣದಿಂದ ಆಕೆಯ ಕಾಲುಗಳನ್ನು ಮತ್ತು ಒಂದು ಕೈಯನ್ನು ಕತ್ತರಿಸಬೇಕು ಎಂದು ಹೇಳಿ, ಅನಿವಾರ್ಯತೆಯಿಂದ ಆಕೆಯ ಪ್ರಾಣ ಉಳಿಸಲು ಕೈ ಮತ್ತು ಕಾಲುಗಳನ್ನು ತೆಗೆಯಲಾಯಿತು. ಈ ಸಂದರ್ಭದಲ್ಲಿ ಚಿರಾಗ್ ಹಿರಲ್ ನ ಕೈ ಬಿಡಲು ಒಪ್ಪಲಿಲ್ಲ. ತಾನು ಆಕೆಯ ಜೊತೆಗೆ ಬದುಕುವುದಾಗಿ ಹೇಳಿದ. ಹಿರಲ್ ಳ ತಂದೆ ತಾಯಿ ಚಿರಾಗ್ ನಿಗೆ ಬೇರೆ ಮದುವೆ ಆಗಲು ಹೇಳಿದರೂ ಕೂಡಾ ಆತ ಒಪ್ಪದೆ ಹಿರಲ್ ಳ ಯೋಗ ಕ್ಷೇಮ ನೋಡಿಕೊಳ್ಳಲು, ಜೀವನ ಪೂರಾ ಆಸರೆಯಾಗಲು ನಿರ್ಧರಿಸಿದ್ದ. ಆದರೆ ವಿಧಿ ಬರಹ ಬೇರೆಯೇ ಆಗಿತ್ತು. ಆರೋಗ್ಯ ತೀವ್ರ ಹದಗೆಟ್ಟ ಕಾರಣ ಹಿರಲ್ ಬಾರದ ಲೋಕಕ್ಕೆ ಹೊರಟು ಹೋದಳು.

ಆದರೆ ನಿಶ್ಚಿತಾರ್ಥ ಆದ ಹುಡುಗಿಯ ಕೈ ಹಿಡಿದು, ಆಕೆಯ ಸ್ಥಿತಿ ಗಂಭೀರವಾದಗಲೂ ಕೂಡಾ ಆಕೆಯ ಜೊತೆ ನಿಂತ ಚಿರಾಗ್ ನಿಜಕ್ಕೂ ಪ್ರೇಮ ಎಂದರೆ ಏನು ಎಂಬುದನ್ನು ಅಕ್ಷರಶಃ ತೋರಿಸಿದ್ದಾರೆ.‌

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here