ಕೆಲವರು ಸಾಮಾಜಿಕ ಜಾಲತಾಣಗಳ ಪ್ರಭಾವದಿಂದಾಗಿ ಇರುಳು ಉರುಳಿ ಹಗಲಾಗುವ ವೇಳೆಗೆ ಸ್ಟಾರ್ ಗಳಾಗಿ ಬಿಡುತ್ತಾರೆ. ಹೀಗೆ ತನ್ನ ಚಿತ್ರ ವಿಚಿತ್ರ ವಿಡಿಯೋಗಳನ್ನು ಹಾಕಿಕೊಳ್ಳುತ್ತಲೇ ಫೇಮಸ್ ಆದವರು ದೀಪಕ್ ಕಲಾಲ್. ಈತನ ವಿಚಿತ್ರ ನಡವಳಿಕೆಯನ್ನು ನೋಡಿದವರಿಗೆ ಕೆಲವು ನಿಮಿಷಗಳಲ್ಲಿ ಅದು ಹುಚ್ಚಾಟ ಎನಿಸುತ್ತದೆ. ಯೂ ಟ್ಯೂಬ್ ನಲ್ಲಿ ಈತನ ಸಾಕಷ್ಟು ವಿಡಿಯೋಗಳು ಕೂಡಾ ಇವೆ. ಬಾಲಿವುಡ್ ನ ಡ್ರಾಮಾ ಕ್ವೀನ್ ರಾಖಿ ಸಾವಂತ್ ಳ ನಕಲಿ ಗಂಡನಾಗಿ ಕೂಡಾ ಕೆಲವು ಕಾಲ ಸುದ್ದಿಗಳಲ್ಲಿ ಇದ್ದ ದೀಪಕ್ ಕಲಾಲ್ ಹಿಂದಿಯ ಒಂದು ರಿಯಾಲಿಟಿ ಶೋನ ಕೆಲವು ಎಪಿಸೋಡ್ ಗಳಲ್ಲಿ ತನ್ನ ಪ್ರತಿಭೆ ತೋರಿಸಲು ಬಂದು ಅದು ಹಾಸ್ಯಾಸ್ಪದ ಕೂಡಾ ಆಗಿತ್ತು.

ಕೆಲವು ದಿನಗಳ ಹಿಂದೆಯಷ್ಟೇ ಮಾದ್ಯಮಗಳಲ್ಲಿ ದೀಪಕ್ ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡಿದ್ದವು‌. ಆದರೆ ಅದು ದೀಪಕ್ ಕಲಾಲ್ ನ ಯಾವುದೇ ಹೊಸ ವಿಡಿಯೋ ಬಗ್ಗೆ ಅಲ್ಲ, ಬದಲಿಗೆ ಮೆಟ್ರೋ ರೈಲಿನಲ್ಲಿ ಯುವತಿಯೊಬ್ಬಳಿಂದ ಏಟು ತಿಂದು ಸುದ್ದಿಯಾಗಿದ್ದ. ಯುವತಿಯೊಬ್ಬಳು ಆತನ ಅನುಮತಿ ಇಲ್ಲದೆ ಸೆಲ್ಫಿಗಾಗಿ ಬಂದಳೆಂದು ಆಕೆಯ ಮೇಲೆ ಅರಚಾಡಿ, ದೊಡ್ಡ ರಾದ್ದಾಂತವನ್ನು ಮಾಡಿದ್ದ ದೀಪಕ್ ಡೆಲ್ಲಿ ಮೆಟ್ರೋದಲ್ಲೇ ಯುವತಿಯಿಂದ ಏಟು ತಿಂದಿದ್ದ. ಈಗ ಅದರ ಹಿಂದೆಯೇ ಮತ್ತೊಂದು ವಿಷಯಕ್ಕೆ ದೀಪಕ್ ಸುದ್ದಿಯಾಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಈಗ ಇತ್ತೀಚಿನ ಘಟನೆಯೊಂದರಲ್ಲಿ ದೀಪಕ್ ಕಲಾಲ್ ಅವರನ್ನು ಪ್ರಸಿದ್ಧ ರೇಡಿಯೊ ಕೇಂದ್ರವೊಂದರಲ್ಲಿ ಸಂದರ್ಶನ ಮಾಡಲಾಗಿದ್ದು, ಸಂದರ್ಶನದ ವೇಳೆ ಕಲಾಲ್ ಮಹಿಳೆಯರ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದು ಹೆಣ್ಣು ಮಕ್ಕಳು ಗಂಡಸರಿಗೆ ಕೆಲಸದವರಾಗಿ ಇರಲು ಯೋಗ್ಯರು ಎಂದಿದ್ದು, ಈ ಮಾತು ಕೇಳಿದ ಆರ್.ಜೆ. ದೀಪಕ್ ಕಲಾಲ್ ಅನ್ನು ತರಾಟೆಗೆ ತೆಗೆದುಕೊಂಡಿರುವುದು ಮಾತ್ರವಲ್ಲದೇ, ಆತನನ್ನು ಸ್ಟುಡಿಯೋದಿಂದ ಹೊರ ದಬ್ಬಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ, ಆರ್.ಜೆ. ದೀಪಕ್ ಕಲಾಲ್ ಅನ್ನು ತರಾಟೆಗೆ ತೆಗೆದುಕೊಂಡಿದ್ದನ್ನು ಜನ ಮೆಚ್ಚಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here