ಆಲಯಗಳೆಂದರೆ ಅದಕ್ಕೆ ಮೂಲ ಸ್ಥಾನ ನಮ್ಮ ಭಾರತ ದೇಶ. ನಮ್ಮಲ್ಲಿ ಅನೇಕ ದೇವ ದೇವತೆಗಳ ದೇವಾಲಯಗಳಿದ್ದು ಪ್ರತಿಯೊಂದು ದೇವಾಲಯಕ್ಕೆ ತನ್ನದೇ ಆದ ಧಾರ್ಮಿಕ ಮಹತ್ವವಿದೆ. ಅಂತಹುದೇ ಒಂದು ವಿಸ್ಮಯಗಳ ಮಂದಿರ ರಾಜರಾಜೇಶ್ವರಿ ಬಾಲ ತ್ರಿಪುರ ಸುಂದರಿ ದೇವಾಲಯ. ಲಕ್ಷಾಂತರ ದೇವಾಲಯಗಳಲ್ಲಿ ಇಲ್ಲೇನು ವಿಶೇಷ ಎನ್ನುವುದಾದರೆ, ನಿಜಕ್ಕೂ ಈ ಆಲಯದಲ್ಲಿ ಒಂದು ಅದ್ಭುತ ಇದೆ. ಈ ಆಲಯ ಬಿಹಾರದ ಬಸ್ತಾರ್ ನಲ್ಲಿದೆ ಈ ರಾಜರಾಜೇಶ್ವರಿ ಬಾಲಾ ತ್ರಿಪುರ ಸುಂದರಿ ಆಲಯ. ತಾಂತ್ರಿಕ ಆರಾಧನೆಗಳಿಗೆ ಕೂಡಾ ಪ್ರಸಿದ್ಧವಾಗಿರುವ ಈ ಆಲಯ ಮಾತೆ ದುರ್ಗೆಗೆ ಸಮರ್ಪಣೆ ಮಾಡಲಾಗಿದೆ. ಇಲ್ಲಿ ಮಾತೆ ದುರ್ಗೆಯ ಮೂರ್ತಿ ಆಲಯದ ಅನೇಕ ಭಾಗಗಳಲ್ಲಿ ವಿವಿಧ ರೂಪಗಳಲ್ಲಿ ಕಂಡು ಬರುತ್ತದೆ.

ಇಲ್ಲಿ ದುರ್ಗಾ ಮಾತೆಯ ಮೂರ್ತಿಯು ತ್ರಿಪುರ, ದೂಮವತಿ, ಶೋಡಶಿ, ತಾರಾ, ಉಗ್ರ ತಾರಾ, ಮಾತಂಗಿ, ಕಮ್ಲಾ, ಭುವನೇಶ್ವರಿ ಹೀಗೆ ಹಲವು ರೂಪಗಳಲ್ಲಿ ಕಾಣ ಸಿಗುತ್ತವೆ. ಪ್ರತಿದಿನ ಅಸಂಖ್ಯಾತ ಭಕ್ತಾದಿಗಳು ವಿವಿಧ ಪ್ರದೇಶಗಳಿಂದ ಈ ಆಲಯಕ್ಕೆ ಬಂದು ಮಾತೆಯ ದರ್ಶನ ಪಡೆದು ಧನ್ಯರಾಗುತ್ತಾರೆ. ಸುಮಾರು ನಾನೂರು ವರ್ಷಗಳ ಹಿಂದೆ ಈ ಆಲಯ ನಿರ್ಮಾಣವಾಯಿತೆಂದು ಇಲ್ಲಿನ ಸ್ಥಳ ಪುರಾಣ. ಇಲ್ಲಿ ಮಾತೆಯೊಂದಿಗೆ ಭಟುಕ್ ಭೈರವ, ದತ್ತಾತ್ರೇಯ ಭೈರವ, ಅನ್ನಪೂರ್ಣ ಭೈರವ, ಕಾಲ ಭೈರವನ ರೂಪದಲ್ಲಿ ಮಹಾದೇವನನ್ನು ಕೂಡಾ ಆರಾಧಿಸಬಹುದು.

ಇದೆಲ್ಲಕ್ಕಿಂತ ಮುಖ್ಯವಾದ ಹಾಗೂ ವಿಸ್ಮಯಕಾರಿ ವಿಷಯ ಏನೆಂದರೆ ಮಧ್ಯ ರಾತ್ರಿ ಆದಂತೆ ಆಲಯದೊಳಗಿಂದ ಶಬ್ದಗಳು ಕೇಳಿಸುತ್ತವೆ. ಆ ಸಮಯದಲ್ಲಿ ಗುಡಿಯೊಳಗೆ ಯಾರೂ ಇರುವುದಿಲ್ಲ. ಆದರೂ ಒಳಗೆ ಯಾರೋ ಮಾತನಾಡಿದ ಹಾಗೆ ಕೇಳುತ್ತದೆ. ಇದನ್ನು ಅಲ್ಲಿನ ಜನರು ಹಾಗೂ ಅರ್ಚಕರು ಕೂಡಾ ಕೇಳಿಸಿಕೊಂಡಿದ್ದಾರೆ. ಅರ್ಚಕರು ಹಾಗೂ ಭಕ್ತರು ಹೇಳುವಂತೆ ಪ್ರತಿ ರಾತ್ರಿ ಅಲ್ಲಿನ ದೇವತೆಗಳು ಒಬ್ಬರೊಡನೆ ಮತ್ತೊಬ್ಬರು ಮಾತನಾಡುತ್ತಾರೆ ಎನ್ನಲಾಗಿದೆ. ಇದನ್ನು ಪರೀಕ್ಷಿಸುವ ಸಲುವಾಗಿ ವಿಜ್ಞಾನಿಗಳ ತಂಡವೊಂದು ಪ್ರಯತ್ನ ಮಾಡಿದೆಯಾದರೂ ಸರಿಯಾದ ಉತ್ತರ ನೀಡಲು ಆಗಿಲ್ಲ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here