ಮಂತ್ರಾಲಯ ಮಠದ ಪೀಠಾಧಿಪತಿಯವರಾದ
ಶ್ರೀ ಸುಭುದೇಂದ್ರ ತೀರ್ಥರ ವಿರುದ್ಧ ವ್ಯಕ್ತಿಯೊಬ್ಬರು ದೂರು ನೀಡಿದ್ದಾರೆ. ವ್ಯಕ್ತಿ ತಮ್ಮ ದೂರಿನಲ್ಲಿ ಶ್ರೀ ಗಳು ಶಾಂತಿಯನ್ನು ಕದಡಿದ್ದಾರೆ ಎಂದು ತಮ್ಮ ಆರೋಪದಲ್ಲಿ ತಿಳಿಸಿದ್ದಾರೆ. ಇತ್ತೀಚೆಗಷ್ಟೇ ರಾಯರ 348 ನೇ ಆರಾಧನೆಯ ಮಹಾ ರಥೋತ್ಸವದ ನಡೆದಿತ್ತು. ಆ ಸಂದರ್ಭದಲ್ಲಿ ಅಂದರೆ ರಥೋತ್ಸವದ ವೇಳೆಯಲ್ಲಿ ಮಠದ ಆವರಣದಲ್ಲಿ ಶ್ರೀಗಳು 100 ರೂ ನೋಟುಗಳನ್ನು ತೂರಿದ್ದರು. ಇದರಿಂದ ಉಂಟಾದ ತೊಂದರೆಯನ್ನು ಕಾರಣವನ್ನಾಗಿಸಿಕೊಂಡು ವ್ಯಕ್ತಿಯೊಬ್ಬರು ಈಗ ದೂರನ್ನು ನೀಡಿದ್ದಾರೆ.

ಮಠದ ಆವರಣದಲ್ಲಿ ಶ್ರೀಗಳು 100 ರೂ. ನೋಟುಗಳನ್ನು ತೂರಿ ಬಿಟ್ಟಿದ್ದರಿಂದ ಅಲ್ಲಿ ಜನರು ನೂಕು ನುಗ್ಗುಲು ಉಂಟಾದ ಕಾರಣ ಬಹಳಷ್ಟು ಜನರಿಗೆ ಅದರಿಂದ ತೊಂದರೆಯಾಗಿತ್ತು. ಮಠಾಧಿಪತಿಗಳ ವಿರುದ್ಧ ಮಠದ ವಸತಿ ಸಮುಚ್ಚಯವೊಂದರ ನಿರ್ವಹಣೆಯ ಗುತ್ತಿಗೆಯನ್ನು ಪಡೆದಿರುವ ನಾರಾಯಣ ಎಂಬುವವರು ಮಠಾಧಿಪತಿಗಳಾದ ಶ್ರೀ ಸುಭುದೇಂದ್ರ ತೀರ್ಥರ ವಿರುದ್ಧ ದೂರು ನೀಡಿದ್ದು ಈಗ ಅದು ಎಲ್ಲರ ಗಮನವನ್ನು ಸೆಳೆದಿದೆ. ಆಗಸ್ಟ್ 18 ರಂದು ನಡೆದ ರಾಯರ ಉತ್ತರರಾಧನೆಯಂದು ಮಠದಲ್ಲಿ ನಾನಾ ಭಾಗಗಳಿಂದ ಬಂದಿದ್ದ ಸಾವಿರಾರು ಜನ ಭಕ್ತರು ಮಠದ ಆವರಣದಲ್ಲಿ ಸೇರಿದ್ದರು.

ಆಗ ಹಿಂದೆಂದೂ ಆಚರಿಸದ ಸಂಪ್ರದಾಯವೊಂದರ ಭಾಗವಾಗಿ ಈ ಸಾವಿರಾರು ಜನರು ನೆರೆದಿರುವ ಆ ವೇಳೆಯಲ್ಲಿ ಶ್ರೀಗಳು ಭಕ್ತರ ಕಡೆಗೆ ನೂರು ರೂ. ಮುಖ ಬೆಲೆಯ ನೋಟುಗಳನ್ನು ತೂರಿದ್ದರು. ಇದರಿಂದ ಆ ನೋಟುಗಳನ್ನು ಸಂಗ್ರಹಿಸಲು ಜನರು ನುಗ್ಗಿದ್ದರಿಂದ ಅಲ್ಲಿ ನೂಕುನುಗ್ಗಲು ಉಂಟಾಗಿ ಜನ ತೊಂದರೆ ಅನುಭವಿಸಿದ್ದರು. ಹೀಗೆ ಶ್ರೀಗಳ ಹೊಸ ಆಚರಣೆಯಿಂದ ಜನರು ಮಾತ್ರವಲ್ಲದೆ ಅಲ್ಲಿನ ಶಾಸಕರಾದ ಬಾಲನಾಗಿರೆಡ್ಡಿ ಅವರ ಕುಟುಂಬ ಕೂಡಾ ತೊಂದರೆ ಅನುಭವಿಸಿತು ಎನ್ನಲಾಗಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here