ಇಂದು ರಾಜ್ಯದ ಆರೋಗ್ಯ ಸಚಿವರಾದ ಶ್ರೀರಾಮುಲು ಅವರು ರಸ್ತೆಯಲ್ಲಿ ಅಪಘಾತವಾದ ಮಹಿಳೆಯರನ್ನು ತಮ್ಮ ಕಾರಿನಲ್ಲಿ ಆಸ್ಪತ್ರೆಗೆ ಕಳುಹಿಸಿದ ಘಟನೆ ನಡೆದಿದೆ. ಈ ಬಗ್ಗೆ ತಮ್ಮ ಫೇಸ್ಬುಕ್ನಲ್ಲಿ ಶ್ರೀರಾಮುಲು ಅವರು ಈ ರೀತಿಯಾಗಿ ಬರೆದುಕೊಂಡಿದ್ದಾರೆ.

ಮಾನವೀಯತೆ ಮೆರೆದಾಗ ಸಿಗುವ ಸಂತ್ರಪ್ತ ಭಾವ ಬೇರಾವತ್ತೂ ಸಿಗದು…
ಮೊನ್ನೆ ಚಾಮರಾಜನಗರದಲ್ಲಿ, ಇಂದು ಉಡುಪಿ ಬಳಿ. ಉಡುಪಿ-ಕುಂದಾಪುರ ರಸ್ತೆಯಲ್ಲಿ ಹೋಗುತ್ತಿದ್ದಾಗ ಆಟೋ ಪಲ್ಟಿಯಾಗಿ ಮಹಿಳೆಯೊಬ್ಬರು ಗಾಯಗೊಂಡು ಬಿದ್ದಿದ್ದರು.

ಕೂಡಲೇ ಅವರಿಗೆ ಸ್ಥಳದಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ನಮ್ಮದೇ ವಾಹನದಲ್ಲಿ ಆಸ್ಪತ್ರೆಗೆ ಕಳುಹಿಸಿ ಅಲ್ಲಿ ಹೆಚ್ಚಿನ ಚಿಕಿತ್ಸೆಗೆ ವ್ಯವಸ್ಥೆ ಮಾಡಿದೆ. ಅಪಘಾತ ಸಂಭವಿಸಿದಾಗ ನೂರಾರು ಮಂದಿ ಸೇರುತ್ತಾರೆ. ನೂರಾರು ಮಂದಿ ಸೇರಿದ್ದರೂ ಆಂಬುಲೆನ್ಸ್ ಗೆ ಕರೆ ಮಾಡಿ ಅದು ಬರುವವರೆಗೆ ಕಾಯುತ್ತಾರೆ. ಆದರೆ, ಮಾನವನ ಜೀವ ಅಮೂಲ್ಯ.

ಸಮೀಪದಲ್ಲೇ ಆಸ್ಪತ್ರೆ ಇದ್ದರೆ ಆಂಬುಲೆನ್ಸ್ ಬರುವವರೆಗೆ ಕಾಯದೆ ಅಲ್ಲಿದ್ದ ವಾಹದಲ್ಲಿ ಗಾಯಾಳುಗಳನ್ನು ಸಾಗಿಸುವುದು ಮಾನವೀಯತೆ. ಇದನ್ನು ಎಲ್ಲರೂ ರೂಢಿಸಿಕೊಂಡರೆ ಸಾವಿರಾರು ಪ್ರಾಣಗಳನ್ನು ಕಾಪಾಡಬಹುದು.

https://m.facebook.com/story.php?story_fbid=2636014596450079&id=854133574638199

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here