ಶ್ರೀ ಮುಕ್ತಿನಾಗ ದೇವಾಲಯ :-
ವಿಶ್ವದಲೇ ಅತಿ ಎತ್ತರದ 16 ಅಡಿ ಎತ್ತರದ ನಾಗ ವಿಗ್ರಹ ಹೊಂದಿರುವ ” ಶ್ರೀ ಮುಕ್ತಿನಾಗ ದೇವಾಲಯ ” ಬೆಂಗಳೂರಿನ ಕೆಂಗೇರಿಯ ರಾಮೋಹಳ್ಳಿ ಎಂಬಲ್ಲಿ ವೈಭವವಾಗಿ ನಿರ್ಮಾಣವಾಗಿದ್ದು ಪ್ರತಿನಿತ್ಯ ನೂರಾರು ಭಕ್ತಾದಿಗಳು ಭೇಟಿನೀಡಿ ಪೂಜೆ ಸಲ್ಲಿಸುತ್ತಿರುವರು.
ಬೆಂಗಳೂರು ಮೈಸೂರು ರಸ್ತೆಯ ಶ್ರೀ ರಾಜರಾಜೇಶ್ವರಿ ಇಂಜನಿಯರಿಂಗ್ ಕಾಲೇಜ್ ತಿರುವಿನ ರಸ್ತೆಯಲ್ಲಿ ದೊಡ್ಡ ಆಲದಮರಕ್ಕೆ ಹೋಗುವ ರಸ್ತೆಯಲ್ಲಿ ರಾಮೋಹಳ್ಳಿ ಬಸ್ ನಿಲ್ದಾಣದ ಸಮೀಪದ ಬಲ ತಿರುವಿನ ರಸ್ತೆಯಲ್ಲಿ ಸುಮಾರು 3 ಕಿ ಮೀ ದೂರದಲ್ಲಿ ಶ್ರೀ ಮುಕ್ತಿನಾಗ ದೇವಾಲಯ ಬೃಹದಾಕಾರವಾಗಿ ತಲೆ ಎತ್ತಿ ನಿಂತಿದೆ.

ದೇಗುಲದಲ್ಲಿ ನಾಗರಾಜನ ದರ್ಶನದ ವೀಡಿಯೋ ನೋಡಿ.

ವಿಶಾಲವಾದ ಕ್ಷೇತ್ರದ ಆವರಣದಲ್ಲಿ ಸುಮಾರು 100 ಅಡಿ ಎತ್ತರದ ಬೆಟ್ಟದಮೇಲೆ 21 ಅಡಿಗಳ ಎತ್ತರದ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಕ್ಷೇತ್ರದ ನಿರ್ಮಾಣ ಕಾರ್ಯವೂ ಭರದಿಂದ ಸಾಗುತ್ತಿದೆ.
ಈ ಸ್ಥಳವನ್ನು “ಚಿಕ್ಕ ಪಳನಿ” ಕ್ಷೇತ್ರವೆಂದು ನಾಮಕರಿಸಲಾಗಿದೆ.
ಈ ಕ್ಷೇತ್ರದಲ್ಲಿ ಈಗಾಗಲೇ ಶ್ರೀ ಕಾರ್ಯಸಿದ್ದಿ ವಿನಾಯಕ, ಶ್ರೀ ಪಾರ್ವತಿ ಅಮ್ಮನವರ, ಶ್ರೀ ತ್ರಯಂಬಕೇಶ್ವರ, ಶ್ರೀ ಲಕ್ಷ್ಮೀನರಸಿಹ ಸ್ವಾಮಿ , ಪಾಟಾಲಮ್ಮ, ದೇವಾಲಯಗಳು ನಿರ್ಮಾಣ ವಾಗಿ ಪೂಜಾದಿ ಕೈಂಕರ್ಯಗಳು ನಡೆಯುತ್ತಿವೆ.


ನಾಡಿನ ಖ್ಯಾತ ಚಲನ ಚಿತ್ರ ಸಾಹಿತಿ ದಿವ್ಂಗತ ಸೋರಟ್ ಅಶ್ವತ್ ಅವರ ಪುತ್ರ ಗುರುಜಿ ದೈವಜ್ನ ಶ್ರೀ ಸುಬ್ರಹ್ಮಣ್ಯ ಶಾಸ್ತ್ರಿ ಅವರು ಶ್ರೀ ಮುಕ್ತಿನಾಗ ದೇವಾಲಯಗಳ ಟ್ರಸ್ಟಿನ ಧರ್ಮದರ್ಶಿಗಳಾಗಿ ಕ್ಷೇತ್ರದ ಸರ್ವ್ತೋಮುಖ ಅಭಿವೃದ್ಧಿಗೆ ಹಗಲಿರುಳು ಶ್ರಮಿಸುತ್ತಿರುವರು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here