ಇಡೀ ವಿಶ್ವವೇ ಕೊಂಡಾಡುವ ಮಹನೀಯರು ಶ್ರೀ ಶಿವಕುಮಾರ ಸ್ವಾಮಿಗಳು. ನಿನ್ನೆ ಅವರು ಲಿಂಗೈಕ್ಯರಾದ ಅವರನ್ನು ನಾಡಿನ ಮೂಲೆಗಳಿಂದ, ದೇಶ , ವಿದೇಶಗಳಿಂದ ಅಪಾರ ಜನಸ್ತೋಮವೇ ಸಿದ್ಧಗಂಗೆಯ ಶ್ರೀ ಮಠದ ಕಡೆ ನಡೆದಿದೆ. ಜನರಿಗೆ ಅನುಕೂಲವಾಗಲಿ ಎಂದು ಸರ್ಕಾರ ರಜೆಯನ್ನು ಕೂಡಾ ಘೋಷಿಸಿದೆ ಹಾಗೂ ಎಲ್ಲೂ ಜನರು ಯಾವುದೇ ಸಂಭ್ರಮಾಚರಣೆಯನ್ನು ಮಾಡುವ ಪರಿಸ್ಥಿತಿಯಲ್ಲಿ ಇಲ್ಲ. ಆದರೆ ಅಂತಹ ಮಹಾನುಭಾವನಿಗೆ ಕನಿಷ್ಠ ಗೌರವ ನೀಡುವ ಸೌಜನ್ಯವನ್ನು ಶಾಲೆಯೊಂದು ಕಳೆದುಕೊಂಡಿರುವಂತಹ ದುರ್ವರ್ತನೆ ಬೆಂಗಳೂರಿನಲ್ಲಿ ನಡೆದಿದೆ.

ಇಡೀ ರಾಜ್ಯದ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆಯನ್ನು ನಿನ್ನೆಯೇ ಮಾಡಲಾಗಿದೆ. ಆದರೆ ಬೆಂಗಳೂರಿನ ಡೈರಿ ಸರ್ಕಲ್ ನಲ್ಲಿರುವ ಕ್ರೈಸ್ಟ್ ಶಾಲೆ ಮಾತ್ರ ರಜೆಯನ್ನು ನೀಡಿಲ್ಲ‌. ಶಾಲೆ ಮಕ್ಕಳು ಹಾಗೂ ಶಿಕ್ಷಕರಿಗೆ ಶಾಲೆಗೆ ಹಾಜರಾಗುವಂತೆ ಕಟ್ಟುನಿಟ್ಟಾದ ಆದೇಶವನ್ನು ನೀಡಿದೆ. ಈ ವಿಷಯವನ್ನು ಆಡಳಿತ ಮಂಡಳಿ ಪೋಷಕರ ವಾಟ್ಸಾಪ್ ಗ್ರೂಪಿನಲ್ಲಿ ಸಹಾ ಹಾಕಿದ್ದು, ಶಾಲಾ ವಾರ್ಷಿಕೋತ್ಸವ ಪೂರ್ವ ತಯಾರಿ ನಡೆಸಲು ಎಲ್ಲರೂ ಬರಬೇಕೆಂದು ಆದೇಶವೊಂದನ್ನು ಹೊರಡಿಸಿರುವುದು ನಿಜಕ್ಕೂ ಖಂಡನೀಯ ಎನಿಸಿದೆ.
ಶಿಕ್ಷಣ ಕ್ಷೇತ್ರದಲ್ಲಿ ಶ್ರೀಗಳ ಅಪರಿಮಿತ ಸಾಧನೆ ಈ ಶಾಲೆಯ ಕಣ್ಣಿಗೆ ಕಾಣಲಿಲ್ಲವೇ?

ಸಿದ್ದಗಂಗಾ ಮಠಕ್ಕೆ ಹೋಗಲಾರದ ಮಂದಿ ಟಿವಿಗಳಲ್ಲಾದರೂ ಅವರ ಅಂತಿಮ ದರ್ಶನವನ್ನು ಮಾಡಬಹುದು. ಆದರೆ ಕ್ರೈಸ್ಟ್ ಶಾಲೆ ಅದಕ್ಕೂ ಅವಕಾಶ ಮಾಡಿಕೊಟ್ಟಿಲ್ಲ. ಈ ಶಾಲೆಗಳಂತೆ ಲಕ್ಷ ಲಕ್ಷ ಸಂಪಾದನೆಯ ಆಸೆಯಿಲ್ಲದೆ, ಶಿಕ್ಷಣವು ಸೇವೆ ಎಂದು ಶ್ರಮಸಿದ ಪರಮಾತ್ಮ ಸ್ವರೂಪಿ ಶ್ರೀಗಳ ಔನತ್ಯ ಅರಿಯದ ಶಾಲಾ ಆಡಳಿತ ಮಂಡಳಿಗೆ ಬಹುಶಃ ಶಿಕ್ಷಣ ಎಂಬುದು ಕೇವಲ ವ್ಯವಹಾರ ಆಗಿರಬಹುದೇ ಎಂಬ ಅನುಮಾನ ಮೂಡುತ್ತಿದೆ. ಇಡೀ ರಾಜ್ಯಕ್ಕೆ ಅನ್ವಯಿಸುವ ಸರ್ಕಾರದ ಆದೇಶ ಇವರಿಗೆ ಅನ್ವಯವಾಗುವುದಿಲ್ಲವೇ?

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here