ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ಬಹುನಿರೀಕ್ಷೆಯ ಸಿನಿಮಾ ಭರಾಟೆ ಚಿತ್ರದ ಚಿತ್ರೀಕರಣ ಹೈದರಾಬಾದ್ ನ ರಾಮೋಜಿರಾವ್ ಫಿಲ್ಮ್ ಸಿಟಿಯಲ್ಲಿ ಅದ್ದೂರಿಯಾಗಿ ನಡೆಯುತ್ತಿದೆ. ಕನ್ನಡ ಚಿತ್ರರಂಗದ ಸ್ಟಾರ್ ನಟರಲ್ಲಿ ಶ್ರೀಮುರಳಿ ಸಹ ಪ್ರಮುಖರು. ಉಗ್ರಂ ಚಿತ್ರದ ಮೂಲಕ ಬಿಗ್ ಕಮ್ ಬ್ಯಾಕ್ ಮಾಡಿರುವ ರೋರಿಂಗ್ ಸ್ಟಾರ್ ಶ್ರೀಮುರಳಿ ಅವರು ನಂತರ ರಥಾವರ ಮತ್ತು ಮಫ್ತಿ ಗಳಂತಹ ಬ್ಲಾಕ್‌ಬಸ್ಟರ್ ಸಿನಿಮಾಗಳನ್ನು ಕನ್ನಡ ಸಿನಿರಸಿಕರಿಗೆ ನೀಡಿದರು.ಇದೀಗ ಬಹದ್ದೂರ್  ಮತ್ತು ಭರ್ಜರಿ ಚಿತ್ರಗಳ ಯಶಸ್ವಿ ನಿರ್ದೇಶಕರಾದ ಚೇತನ್ ಕುಮಾರ್ ನಿರ್ದೇಶನ ಮಾಡುತ್ತಿರುವ ಭರಾಟೆ ಚಿತ್ರದಲ್ಲಿ ಶ್ರೀಮುರಳಿ ಅವರು ತೊಡಗಿಸಿಕೊಂಡಿದ್ದಾರೆ.

ಭರಾಟೆ ಚಿತ್ರದ ಚಿತ್ರೀಕರಣ ಈ ಮೊದಲು‌ ರಾಜಸ್ಥಾನ ,ಮೈಸೂರು ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಡೆದಿತ್ತು. ಇದೀಗ ಭರಾಟೆ ಚಿತ್ರೀಕರಣ ಹೈದರಾಬಾದ್ ನ ಹೆಸರಾಂತ ರಾಮೋಜಿರಾವ್ ಫಿಲ್ಮ್ ಸಿಟಿಯಲ್ಲಿ ಕಳೆದ ಒಂದು ವಾರದಿಂದ ನಡೆಯುತ್ತಿದೆ. ಇದೀಗ ಭರಾಟೆ ಚಿತ್ರದ ಚಿತ್ರೀಕರಣದ ಸ್ಥಳಕ್ಕೆ ಟಾಲಿವುಡ್ ಸೂಪರ್‌ ಸ್ಟಾರ್ ಪ್ರಿನ್ಸ್ ಮಹೇಶಬಾಬು ಅವರು ಆಗಮಿಸಿರುವ ಫೋಟೋಗಳನ್ನು ಭರಾಟೆ ಚಿತ್ರದ ಫೋಟೋಗ್ರಫಿ ಮಾಡುತ್ತಿರುವ ಸ್ಯಾಂಡಲ್ ವುಡ್ ನ ಖ್ಯಾತ ಫೋಟೋಗ್ರಾಫರ್ ಚಂದನ್ ಗೌಡ ಅವರು ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ ‌.

ಮಹೇಶ್ ಬಾಬು ಸಾಮಾನ್ಯವಾಗಿ ಯಾರೊಬ್ಬರ ಚಿತ್ರೀಕರಣದ ಸ್ಥಳಕ್ಕೆ ಸಾಮಾನ್ಯವಾಗಿ ಭೇಟಿ ನೀಡುವುದಿಲ್ಲ. ಇಂದು ಶ್ರೀಮುರಳಿ ಅವರ ಜೊತೆ ಕೆಲಹೊತ್ತು ಮಹೇಶ್ ಬಾಬು ಅವರು ಭರಾಟೆ ಚಿತ್ರೀಕರಣದ ಸಮಯದಲ್ಲಿ ಕಾಲ ಕಳೆದಿರುವುದು ಸ್ಯಾಂಡಲ್ ವುಡ್ ಮತ್ತು ಟಾಲಿವುಡ್ ನಲ್ಲಿ ಸಾಕಷ್ಟು ಸಂಚಲನ ಹುಟ್ಡಿಸಿದೆ. ಪ್ರಿನ್ಸ್ ಮಹೇಶ್ ಬಾಬು ಅವರಿಗೆ ಕರ್ನಾಟಕದಲ್ಲಿ ಸಹ ಸಾಕಷ್ಟು ಅಭಿಮಾನಿಗಳ ಬಳಗ ಇದೆ. ಮಹೇಶ್ ಬಾಬು  ಅಭಿನಯದ ಚಿತ್ರದ ಚಿತ್ರೀಕರಣ ಸಹ ರಾಮೋಜಿರಾವ್ ಫಿಲ್ಮ್ ಸಿಟಿಯಲ್ಲಿ ನಡೆಯುತ್ತಿದ್ದು   ಮಹೇಶ್ ಬಾಬು ಭರಾಟೆ ಚಿತ್ರೀಕರಣದ  ಸ್ಥಳಕ್ಕೆ ಭೇಟಿ ನೀಡಿದ್ದಾರೆ ಎನ್ನಲಾಗಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here