ಸೆಲೆಬ್ರಿಟಿಗಳು ಆಗಾಗ ತಮ್ಮ ಒತ್ತಡದ ಜೀವದನಲ್ಲೂ ಬಿಡುವು ಮಾಡಿಕೊಂಡು ಸಮಾಜ ಪರ ಕಾರ್ಯಗಳಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಅವರ ಸಮಾಜ ಮುಖಿ ಕಾರ್ಯಗಳ ಮೂಲಕ ಜನರ ಜೊತೆ ಬೆರೆಯಲು ಹಾಗೂ ಇತರರಿಗೆ ಪ್ರೇರಣೆಯನ್ನು ಸಹಾ ನೀಡುತ್ತಾರೆ. ಈಗ ಇಂತಹುದೇ ಒಂದು ಮಾನವೀಯ ಕಾರ್ಯವನ್ನು ರೋರಿಂಗ್ ಸ್ಟಾರ್ ಶ್ರೀ ಮುರುಳಿ ಅವರು ಮಾಡಿದ್ದಾರೆ. ಉಗ್ರಂ ನಂತರ ಅಪಾರ ಯಶಸ್ಸನ್ನು ಹಾಗೂ ಹೆಸರನ್ನು ಪಡೆದು ಸ್ಯಾಂಡಲ್ ವುಡ್ ನಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿರುವ ಪ್ರತಿಭಾನ್ವಿತ ನಟ ಅವರು. ಪ್ರಸ್ತುತ ಅವರು ಭರಾಟೆ ಚಿತ್ರದ ಚಿತ್ರೀಕರಣದಲ್ಲಿ ಬಹಳಷ್ಟು ಬ್ಯುಸಿಯಾಗಿರುವ ವಿಷಯ ಈಗಾಗಲೇ ತಿಳಿದಿದೆ.

ಶ್ರೀ ರಂಗಪಟ್ಟಣದಲ್ಲಿ ಅವರ ಭರಾಟೆ ಸಿನಿಮಾದ ಚಿತ್ರೀಕರಣ ಬಹಳ ಭರದಿಂದ ಸಾಗಿದೆ ಹಾಗೂ ಅದರ ಕೆಲಸದಲ್ಲಿ ನಟ ಶ್ರೀ ಮುರುಳಿ ತೊಡಗಿಕೊಂಡಿದ್ದಾರೆ. ಆದರೆ ತಮ್ಮ ಬ್ಯುಸಿ ಶೆಡ್ಯೂಲ್ ನಡುವೆಯೂ ಅವರ ಸ್ವಲ್ಪ ಬಿಡುವು ಮಾಡಿಕೊಂಡು ಶ್ರೀ ರಂಗಪಟ್ಟಣದಲ್ಲಿ ಬಡ ಮಹಿಳೆಯರಿಗೆ ಸೀರೆಗಳನ್ನು ವಿತರಿಸಿದ್ದಾರೆ. ಅಲ್ಲಿನ ಕಡು ಬಡವರಾದ ಮಹಿಳೆಯರನ್ನು ಗುರುತಿಸಿದ ನಂತರ ಅವರಿಗಾಗಿ ತಮ್ಮ ಮ್ಯಾನೇಜರ್ ಮುಖಾಂತರ ಸೀರೆಗಳನ್ನು ತರಿಸಿಕೊಂಡು ಹಂಚಿದ್ದಾರೆ ಶ್ರೀ ಮುರುಳಿ ಅವರು. ಅವರ ಈ ಕಾರ್ಯ ಈಗ ಎಲ್ಲೆಡೆ ಮೆಚ್ಚುಗೆಯ ಪಾತ್ರವಾಗಿದೆ.

ಶ್ರೀ ಮುರುಳಿ ಅವರು ಬಡ ಮಹಿಳೆಯರಿಗೆ ಸೀರೆ ಹಂಚುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಇದು ಒಬ್ಬ ಸೆಲೆಬ್ರೆಟಿಯನ್ನು ಹೈಲೈಟ್ ಮಾಡುವ ತಂತ್ರ ಎಂದು ಹಲವರಿಗೆ ಅನಿಸಬಹುದು. ಆದರೆ ಅವರು ಮಾಡುವ ಉತ್ತಮ ಕಾರ್ಯಗಳು ಹೆಚ್ಚಿನ ಜನರಿಗೆ ತಿಳಿದಾಗ ಅದರಿಂದ ಮತ್ತಷ್ಟು ಮಂದಿ ಪ್ರೇರಣೆಗೊಂಡರೆ ನಿಜಕ್ಕೂ ಅದರಿಂದ ಸಿಗುವ ಪ್ರತಿಫಲ ಮತ್ತೊಂದಿಷ್ಟು ಕಡುಬಡವರಿಗೆ ಅವರ ಅವಶ್ಯಕತೆ ಪೂರೈಸುವ ಮಾರ್ಗವಾಗಬಹದಲ್ಲವೇ. ಆ ನಿಟ್ಟಿನಲ್ಲಿ ಶ್ರೀ ಮುರುಳಿಯವರ ಈ ಕಾರ್ಯ ಸಾಗಲಿ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here