‘ರೋರಿಂಗ್ ಸ್ಟಾರ್​’ ಶ್ರೀ ಮುರಳಿಯವರ ‘ಭರಾಟೆ’ ಸೆಟ್ಟೇರಿದಾಗ ಅದರ ಜೊತೆಯಲ್ಲೇ ಅವರ ಇನ್ನೊಂದು ಹೊಸ ಸಿನಿಮಾದ ಸುದ್ದಿ ಕೂಡಾ ಸಾಕಷ್ಟು ಸದ್ದು ಮಾಡಿತ್ತು. ಟೈಟಲ್ ನಿಂದಲೇ ಸಾಕಷ್ಟು ಸುದ್ದಿಯಾದ ಆ ಸಿನಿಮಾ ಮದಗಜ. ಈ ಸಿನಿಮಾದ ನಿರ್ದೇಶನ  ಮಾಡುತ್ತಿರುವವರು ಮತ್ತಾರೂ ಅಲ್ಲ, ಕನ್ನಡ ಚಿತ್ರರಂಗದ ಪ್ರತಿಭಾವಂತ ಯುವ ನಿರ್ದೇಶಕ ಎಸ್. ಮಹೇಶ್ ಕುಮಾರ್ ಅವರು. ಪ್ರತಿಭಾವಂತರಾದ ಈ ಯುವ ನಿರ್ದೇಶಕ ನಿರ್ದೇಶನ ಮಾಡಿದ ಮೊದಲ ಸಿನಿಮಾ ಅಯೋಗ್ಯ‌. ಮೊದಲ ಸಿನಿಮಾದ ಮೂಲಕವೇ ಸಾಕಷ್ಟು ಹೆಸರು ಮಾಡಿದ ಮಹೇಶ್ ಕುಮಾರ್ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಎರಡನೆಯ ಸಿನಿಮಾ ಮದಗಜ.

ಒಂದು ವರ್ಷದ ಹಿಂದೆ ಭರಾಟೆ ಮತ್ತು ಮದಗಜ ಎರಡೂ ಚಿತ್ರತಂಡವೂ ಮುರಳಿ ಅವರ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿತ್ತು. ಭರಾಟೆ ಈಗಾಗಲೇ ಬಿಡುಗಡೆಯಾಗಿ ಭರ್ಜರಿ ಕಲೆಕ್ಷನ್ ಮಾಡಿದೆ. ಇನ್ನು ಇದರ ಬೆನ್ನಲ್ಲೇ ‘ಮದಗಜ’ ಸಿನಿಮಾದ ಚಿತ್ರೀಕರಣ ಆರಂಭವಾಗಬೇಕಿತ್ತು. ಆದರೆ ಕೆಲವೊಂದು ಸಮಸ್ಯೆಗಳಿಂದ ಅದು ತಡವಾಗಿದೆ.‌ ಮಧ್ಯೆ ಆದರೆ ಸಿನಿಮಾದ ಟೈಟಲ್ ಬದಲಾಗಿದೆ ಎಂಬ ಸುದ್ದಿಗಳು ಕೂಡಾ ಸಾಕಷ್ಟು ಹರಿದಾಡಿದ್ದು ಕೂಡಾ ಗೊತ್ತಿರುವ ವಿಷಯ. ಇದೆಲ್ಲದರ ನಡುವೆ ಚಿತ್ರ ತಂಡ ಮುರಳಿ ಅವರ ಜನ್ಮ‌ದಿನದಂದು ಮದ ಗಜ ಚಿತ್ರದ ಪೋಸ್ಟರ್ ಬಿಡುಗಡೆ ಮಾಡುವ ಸಾಧ್ಯತೆ ಕೂಡಾ ಇದೆ ಎನ್ನಲಾಗಿದೆ‌.

ಇನ್ನು ಸಿನಿಮಾ ಚಿತ್ರೀಕರಣ ಈ ಜನವರಿಯಿಂದಲೇ ಆರಂಭವಾಗಲಿದೆಯೆಂದು ಹೇಳಲಾಗಿದೆ. ಜನವರಿ
15 ರಿಂದ ಚಿತ್ರೀಕರಣ ಆರಂಭವಾಗಲಿದ್ದು, ವಾರಾಣಾಸಿಯಲ್ಲಿ ಕೂಡಾ ಚಿತ್ರೀಕರಣ ನಡೆಸಲಾಗುವುದು ಎನ್ನಲಾಗಿದೆ. ನಿರ್ದೇಶಕ ಮಹೇಶ್ ಕುಮಾರ್ ಅವರು ಎರಡನೇ ಸಿನಿಮಾದ ಮೂಲಕವೇ ದೊಡ್ಡ ನಟರನ್ನೊಳಗೊಂಡ ಸಿನಿಮಾ ನಿರ್ದೇಶನ ಮಾಡುತ್ತಿರುವುದು ಅವರ ಪ್ರತಿಭೆಗೆ ಒಂದು ಸದವಕಾಶ ದೊರೆತಂತಾಗಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ರಾಬರ್ಟ್ ಸಿನಿಮಾ ನಿರ್ಮಾಣ ಮಾಡುತ್ತಿರುವ ಉಮಾಪತಿ ಶ್ರೀನಿವಾಸ್ ಅವರೆ ಈ ಸಿನಿಮಾ ಕೂಡಾ ನಿರ್ಮಾಣ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಮುರಳಿ ಅವರ ಜೊತೆಗೆ ಜಗಪತಿ ಬಾಬು, ಪ್ರಕಾಶ್ ರೈ ಅಂತಹ ದಿಗ್ಗಜ ನಟರು ಕೂಡಾ ಇರುವುದು ವಿಶೇಷ‌.

 

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here