ಸ್ಯಾಂಡಲ್ ವುಡ್ ನ ಬಿಗ್ ಬಜೆಟ್ ಸಿನಿಮಾ ಎಂದೇ ಕರೆಯಲ್ಪಡುತ್ತಿರುವ, ಸ್ಯಾಂಡಲ್ ವುಡ್ ನ ಸ್ಥಾನವನ್ನು ಮತ್ತೊಂದು ಎತ್ತರಕ್ಕೆ ಕೊಂಡೊಯ್ದ ಚಿತ್ರ ಕೆಜಿಎಫ್. ಬಿಡುಗಡೆ ಹೊಂದಿ ದಾಖಲೆಗಳನ್ನು ನಿರ್ಮಿಸುತ್ತಿರುವ ಈ ಚಿತ್ರವು ದೇಶದಾದ್ಯಂತ ಪ್ರೇಕ್ಷಕರಿಂದ ಆದರಿಸಲ್ಪಡುತ್ತಿದೆ. ಬಿಡುಗಡೆಗೆ ಮುನ್ನ ಒಂದು ರೀತಿಯ ಕುತೂಹಲ, ಬಿಡುಗಡೆಯ ನಂತರ ಮತ್ತೊಂದು ರೀತಿಯ ಕ್ರೇಜ್ ಹೀಗೆ ಕೆಜಿಎಫ್ ತನ್ನದೇ ಆದ ರೀತಿಯಲ್ಲಿ ಪ್ರೇಕ್ಷಕರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ. ರಾಕಿಂಗ್ ಸ್ಟಾರ್ ಹಾಗೂ ಪ್ರಶಾಂತ್ ನೀಲ್ ಅವರ ಪ್ರಯತ್ನ ತನ್ನ ಮಾಯೆ ಎಲ್ಲಡೆ ಹರಡಿದೆ. ಒಂದರ್ಥದಲ್ಲಿ ಈ ಸಿನಿಮಾದ ರಿಯಲ್ ಹೀರೋ ಯಾರೆಂದರೆ ಅದು ಈ ಚಿತ್ರದ ನಿರ್ದೇಶಕರಾದ ಪ್ರಶಾಂತ್ ನೀಲ್.

ಒಂದು ಸಿನಿಮಾದ ಮೂಲಕ ಕನ್ನಡ ಚಿತ್ರವೊಂದರ ಬಗ್ಗೆ ವಿಶ್ವಮಟ್ಟದ ಹೆಸರು ತಂದು ಕೊಡಲು ಪ್ರಶಾಂತ್ ನೀಲ್ ಅವರು ತಮ್ಮನ್ನು ತಾವು ಸಂಪೂರ್ಣವಾಗಿ ತೊಡಗಿಸಿಕೊಂಡಿರುವುದು ಮಾತ್ರವಲ್ಲದೆ, ಚಿತ್ರಕ್ಕಾಗಿ ತಮ್ಮನ್ನು ತಾವು ಸಮರ್ಪಿಸಿಕೊಂಡಿದ್ದಾರೆ. ಪ್ರಶಾಂತ್ ನೀಲ್ ಇದುವರೆಗೆ ಎರಡು ಚಿತ್ರಗಳನ್ನು ನಿರ್ದೇಶನ ಮಾಡಿರುವುದಾದರೂ, ಎರಡು ಅದ್ಭುತ ಸಿನಿಮಾಗಳ ಮೂಲಕ ಕನ್ನಡದ ಕನ್ನಡದ ಇಬ್ಬರು ನಟರಿಗೆ ಸೂಪರ್ ಹಿಟ್ ಚಿತ್ರಗಳನ್ನು ನೀಡಿದ ಹಾಗೂ ಕನ್ನಡದ ಭರವಸೆಯ ನಿರ್ದೇಶಕ ಎಂಬ ಹೆಗ್ಗಳಿಕೆಗೆ ಪಾತ್ರರಾದ ಹೆಗ್ಗಳಿಕೆಗೆ ಕೂಡಾ ಪ್ರಶಾಂತ್ ನೀಲ್ ಅವರು ಪಾತ್ರರಾಗಿದ್ದಾರೆ.

ನಟ ಶ್ರೀ ಮುರುಳಿ ಅವರಿಗೆ ಉಗ್ರಂ ಸಿನಿಮಾ ಒಂದು ದೊಡ್ಡ ಬ್ರೇಕ್ ನೀಡಿದ ಚಿತ್ರ. ಆ ಚಿತ್ರದ ನಂತರ ಶ್ರೀಮುರುಳಿಯವರು ಕನ್ನಡದ ರೋರಿಂಗ್ ಸ್ಟಾರ್ ಆಗಿ ಅಗ್ರ ನಾಯಕನ ಸ್ಥಾನ ಪಡೆದರು. ಮೊದಲ ಚಿತ್ರ ನಿರ್ದೇಶನದ ಮೂಲಕವೇ ಪ್ರಶಾಂತ್ ನೀಲ್ ಹಿಟ್ ಚಿತ್ರ ನೀಡಿದ ನಿರ್ದೇಶಕರಾದರು. ಇದಾದ ನಂತರ ಎರಡನೇ ಚಿತ್ರದ ಮೂಲಕ ರಾಕಿಂಗ್ ಸ್ಟಾರ್ ಯಶ್ ಅವರನ್ನು ರಾಷ್ಟ್ರೀಯ ಮಟ್ಟದ ನಾಯಕನನ್ನಾಗಿ ಮಾಡಿದ್ದಾರೆ. ಪ್ರಶಾಂತ್ ನೀಲ್ ಅವರ ಕೆಜಿಎಫ್ ಈಗ ಐದು ಭಾಷೆಯ ಚಿತ್ರರಂಗಗಳಲ್ಲೂ ಒಳ್ಳೆಯ ಹೆಸರು ಬಂದಿರುವುದು ಮಾತ್ರವಲ್ಲದೆ ರಾಕಿಂಗ್ ಸ್ಟಾರ್ ಗೆ ಎಲ್ಲೆಡೆ ಅಭಿಮಾನಿಗಳು ಹುಟ್ಟಿಕೊಂಡಿರುವುದಲ್ಲದೆ, ಯಶ್ ಅವರಿಗೆ ಬೇರೆ ಭಾಷೆಗಳಿಂದ ಅವಕಾಶಗಳು ಕೂಡಾ ಬರುತ್ತಿವೆ ಎನ್ನಲಾಗಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here