ಮಾನ್ಯ ಆರೋಗ್ಯ ಸಚಿವರಾದ ಶ್ರೀರಾಮುಲು ಅವರಿಗೆ ಕೊರೊನಾ ಪಾಸಿಟಿವ್ ಆಗಿರುವ ವಿಚಾರ ಈಗಾಗಲೇ ರಾಜ್ಯ ವ್ಯಾಪಿ ಸುದ್ದಿಯಾಗಿದೆ‌. ಸಾಮಾನ್ಯವಾಗಿ ಸಚಿವರು, ಮಂತ್ರಿಗಳು ಅಥವಾ ಸೆಲೆಬ್ರಿಟಿಗಳಿಗೆ ಕೊರೊನಾ ಪಾಸಿಟಿವ್ ಆದರೆ ಅವರೆಲ್ಲಾ ಐಶಾರಾಮೀಯಾದ ಖಾಸಗಿ ಆಸ್ಪತ್ರೆಗಳ ಕಡೆ ಮುಖ ಮಾಡುವುದು ಎಲ್ಲರಿಗೂ ತಿಳಿದೇ ಇದೆ. ಅಲ್ಲದೇ ಈ ಕುರಿತಾಗಿ ಸಾಮಾಜಿಕ ಜಾಲತಾಣಗಳಲ್ಲಿ ಕೂಡಾ ನೆಟ್ಟಿಗರು ಸಚಿವರು ತಾವೇ ಸರ್ಕಾರದ ಹಣದಿಂದ ನಿರ್ಮಾಣ ಮಾಡಿಸುವ ಸರ್ಕಾರಿ ಆಸ್ಪತ್ರೆಗಳ ಕಡೆಗೆ ಏಕೆ ಹೋಗುವುದಿಲ್ಲ? ಅಲ್ಲಿನ ಚಿಕಿತ್ಸೆ ಮೇಲೆ ನಂಬಿಕೆಯಿಲ್ಲವೇ? ಎಂಬ ಪ್ರಶ್ನೆಗಳನ್ನು ಕೇಳುವುದು ಉಂಟು.

ಆದರೆ ಈಗ ಆರೋಗ್ಯ ಸಚಿವರಾದ ಶ್ರೀರಾಮುಲು ಅವರು ಈ ಅಪವಾದಕ್ಕೆ ಗುರಿಯಾಗದೆ ಒಂದು ಮಾದರಿಯನ್ನು ಮೆರೆದಿದ್ದಾರೆ. ಸಚಿವರು ತಮ್ಮ ಫೇಸ್ ಬುಕ್ ಖಾತೆಯಲ್ಲಿ ತಾವು ಕೋವಿಡ್-19 ನಿಂದಾಗಿ ಆಸ್ಪತ್ರೆಗೆ ದಾಖಲಾಗಿರುವ ವಿಷಯವನ್ನು ತಿಳಿಸುತ್ತಾ,
“ಕೊರೊನ ಪಾಸಿಟಿವ್ ಬಂದಿರುವ ಹಿನ್ನೆಲೆಯಲ್ಲಿ, ಬೆಂಗಳೂರಿನ ಶಿವಾಜಿನಗರದಲ್ಲಿರುವ ಸರ್ಕಾರಿ ಸ್ವಾಮ್ಯದ ಬೋರಿಂಗ್ ಆಸ್ಪತ್ರೆಗೆ ದಾಖಲಾಗಿದ್ದೇನೆ.
ಶೀಘ್ರ ಗುಣಮುಖನಾಗಿ ಬರುವ ವಿಶ್ವಾಸವಿದ್ದು, ಯಾರೂ ಆತಂಕಪಡುವ ಅಗತ್ಯವಿಲ್ಲ.” ಎಂದು ಬರೆದು ಕೊಂಡಿದ್ದಾರೆ.

ಶ್ರೀರಾಮುಲು ಅವರು ತಾನು ಸರ್ಕಾರಿ ಸ್ವಾಮ್ಯದ ಬೋರಿಂಗ್ ಆಸ್ಪತ್ರೆಗೆ ದಾಖಲಾಗಿರುವುದು ತಿಳಿಸಿರುವ ವಿಷಯ ಈಗ ಎಲ್ಲರ ಗಮನವನ್ನು ಸೆಳೆದಿದೆ. ಈ ಮೂಲಕ ಅವರು ಒಂದು ಮಾದರಿಯನ್ನು ಮೆರೆಯುತ್ತಿದ್ದಾರೆ. ಸಚಿವರು ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾದರೆ ಸಹಜವಾಗಿಯೇ ವೈದ್ಯಕೀಯ ಸೌಲಭ್ಯ ಕೂಡಾ ಉತ್ತಮವಾಗಿ ದೊರೆಯುವುದು ವಾಸ್ತವ. ಆದರೆ ಸಚಿವರಾಗಿ ಜನರ ನಂಬಿಕೆಯನ್ನು ಉಳಿಸಲು ಇಂತಹುದೊಂದು ನಡೆ ಅವಶ್ಯಕತೆ ಇದೆ ಎಂದು ಕೆಲವರು ತಮ್ಮ ಮೆಚ್ಚುಗೆಯನ್ನು ಕೂಡಾ ಸೂಚಿಸಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here