ಆರೋಗ್ಯ ಸಚಿವರಾದ ಶ್ರೀರಾಮುಲು ಅವರ ಮುಂದೆ ಮಹಿಳೆಯೊಬ್ಬರು ಗಂಡನ ಚಿಕಿತ್ಸೆಗಾಗಿ ಅಲವತ್ತುಕೊಂಡ ಘಟನೆಯೊಂದು ನಡೆದಿದೆ‌. ಆಕೆ ಸಚಿವರ ಮುಂದೆ ಕಣ್ಣೀರು ಸುರಿಸುತ್ತಾ, ನಾನು ಮುತ್ತೈದೆಯಾಗಿ ಬದುಕಬೇಕು. ನನ್ನ ಗಂಡನನ್ನು ಬದುಕಿಸಿ ಕೊಡಿ ಇಲ್ಲವೇ ಇಬ್ಬರಿಗೂ ಸಾವು ಕೊಡಿರೆಂದು ಬೇಡಿಕೊಂಡ ಘಟನೆಯೊಂದು ಶನಿವಾರ ನಡೆದಿದೆ. ಮಹಿಳೆಯ ಗಂಡನಿಗೆ ವಾರಕ್ಕೆರಡು ಬಾರಿ ಡಯಾಲಿಸಿಸ್ ಮಾಡಿಸಬೇಕಿದ್ದು, ಅದಕ್ಕಾಗಿ ಶಿವಮೊಗ್ಗ, ಮಂಗಳೂರು ಹಾಗೂ ಇತರೆ ಆಸ್ಪತ್ರೆಗಳಿಗೆ ಸುತ್ತಿ ಸುತ್ತಿ ಇದ್ದ ಹಣವೆಲ್ಲಾ ಖಾಲಿಯಾಗಿ, ಸಾಲ ಮಾಡಿದ್ದೇನೆಂದು ಸಂಕಟ ತೋಡಿಕೊಂಡಿದ್ದಾರೆ.

 

ಡಯಾಲಿಸಿಸ್​ ಮಾಡಿಸಲು ಹಾಗೂ ರಕ್ತ ಪರೀಕ್ಷೆಗೆಂದು ಆಗಾಗ ಚಿತ್ರದುರ್ಗ ನಗರಕ್ಕೆ ಹೋಗಬೇಕೆಂದು ಆಕೆ ತನ್ನ ಕಷ್ಟವನ್ನು ಹೇಳಿಕೊಂಡಿದ್ದು, ಒಂದು ಸಲ ಚಿತ್ರದುರ್ಗಕ್ಕೆ ಹೋಗಿ ಬರಲು 300 ರೂಪಾಯಿ ಬೇಕೆಂದೂ, ಒಂದೊಂದು ಸಾರಿ ಕೈಯಲ್ಲಿ 50 ರೂಪಾಯಿ ಕೂಡಾ ಇರುವುದಿಲ್ಲವೆಂದು, ಅಷ್ಟು ದೂರ ಹೋಗಿ ಬರಲು ಏನು ಮಾಡುವುದೆಂದು ಆಕೆ ಕಣ್ಣೀರು ಹಾಕಿದ್ದು, ತಮಗೆ ನಮ್ಮ ಜಿಲ್ಲೆಯಲ್ಲೆ ಚಿಕಿತ್ಸೆ ಕೊಡಿಸಿ ಇಲ್ಲವೇ ಇಬ್ಬರಿಗೂ ಸಾವು ಕೋಡಿ ಎಂದು ಮಹಿಳೆಯು ಹೇಳುತ್ತಿದ್ದ ಸನ್ನಿವೇಶ ಎಂತಹವವರ ಮನವನ್ನು ಕಲಕುವಂತೆ ಇತ್ತು. ಆಕೆಯ ಕಣ್ಣೀರಿಗೆ ಕೂಡಲೇ ಸ್ಪಂದಿಸಿರುವ ಸಚಿವರು, ಮಹಿಳೆಗೆ ಭರವಸೆಯನ್ನು ನೀಡಿದ್ದಾರೆ.

ಇನ್ನು ಮುಂದೆ ಅಶಕ್ತ ಡಯಾಲಿಸಿಸ್ ರೋಗಿಗಳನ್ನು ಸರ್ಕಾರಿ ವೆಚ್ಚದಲ್ಲೇ ಚಿತ್ರದುರ್ಗಕ್ಕೆ ಕರೆದುಕೊಂಡು ಹೋಗಲು ಸ್ಥಳೀಯ ವೈದ್ಯರಿಗೆ ಸೂಚನೆಗಳನ್ನು ನೀಡಿದ್ದಲ್ಲದೇ, ಆರೋಗ್ಯ ಸುರಕ್ಷಾ ಸಮಿತಿ ಅದಕ್ಕೆ ಹಣ ವ್ಯಯಿಸಲಿ ಎಂದು ಸ್ಥಳದಲ್ಲೇ ನಿರ್ದೇಶನ ನೀಡಿದ್ದಾರೆ. ಮಹಿಳೆ ಇಂದು ಒಂದು ದಿನಕ್ಕೆ ಸೀಮಿತವಾಗದಿರಲೆಂದು ಆಗ್ರಹ ಮಾಡಿದಾಗ,
ಸಚಿವರು ಇನ್ಮುಂದೆ ನಾನು ನಿಮ್ಮ ಜೊತೆಗಿರುತ್ತೇನೆಂದೂ, ಎಲ್ಲ ಅಶಕ್ತ ಡಯಾಲಿಸಿಸ್ ರೋಗಿಗಳನ್ನ ಇನ್ನು ಮುಂದೆ ಸರ್ಕಾರವೇ ಚಿತ್ರದುರ್ಗಕ್ಕೆ ಕರೆದೊಯ್ದು, ಮತ್ತೆ ಅವರನ್ನು ವಾಪಸ್ ಕರೆದುಕೊಂಡು ಬರುತ್ತಾರೆಂದು ಸಚಿವ ಶ್ರೀರಾಮುಲು ಅವರು ಭರವಸೆ ನೀಡಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here