ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಸಚಿವ ಶ್ರೀ ರಾಮುಲು ಅವರು ಖಾವಿ ವಸ್ತ್ರವನ್ನು ಧರಿಸಿದ್ದ ವಿಚಾರವನ್ನು ಮಾತನಾಡುತ್ತಾ ಶ್ರೀ ರಾಮುಲು ಅವರನ್ನು ಟೀಕೆ ಮಾಡಿದ್ದಾರು. ಈಗ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮಾನ್ಯ ಸಚಿವರಾದ ಶ್ರೀರಾಮುಲು ಅವರು ತಮ್ಮ ಪ್ರತಿಕ್ರಿಯೆ ನೀಡಿದ್ದು, ನಾನು ಕಾವಿ ಧರಿಸುವ ಬಗ್ಗೆ ಟೀಕೆ ಮಾಡಿದ್ದು, ಕಾವಿ ಧರಿಸಿದವರೆಲ್ಲರಿಗೂ ಅಪಮಾನ ಮಾಡಿದಂತೆ ಎಂದು ಹೇಳಿದ್ದಾರೆ. ಮಾತು ಮುಂದುವರೆಸಿದ ಶ್ರೀ ರಾಮುಲು ಅವರು ಮಾಜಿ ಸಿಎಂ ಅವರ ವಿರುದ್ಧ ಕೂಡಾ ಸಾಕಷ್ಟು ವಾಗ್ದಾಳಿಯನ್ನು ನಡೆಸಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಮಾತ್ರ ಇವರಿಗೆ ಜನ ನೆನಪಾಗುತ್ತಾರೆ, ಅವರ ಮುಂದೆ ಹೋಗಿ ಇವರು ಕಣ್ಣೀರು ಹಾಕುತ್ತಾರೆ ಎಂದು ವ್ಯಂಗ್ಯ ವಾಡಿದ್ದಾರೆ ಶ್ರೀರಾಮುಲು ಅವರು.

ಈ ವಿಚಾರವನ್ನು ನಾನು ಮಾತನಾಡಿದರೆ ನಂತರ ಕುಮಾರಸ್ವಾಮಿ ಅವರು ನನ್ನ ಬಗ್ಗೆ ವೈಯಕ್ತಿಕ ಟೀಕೆಯನ್ನು ಮಾಡಲು ತೊಡಗುತ್ತಾರೆ. ಅವರು ನನ್ನ ಬಗ್ಗೆ ಮಾತನಾಡುತ್ತಾ ಶ್ರೀರಾಮುಲು ಗಡ್ಡ ಬಿಟ್ಟಿದ್ದಾರೆ, ಕಾವಿ ಧರಿಸಿದ್ದಾರೆ ಎನ್ನುತ್ತಾರೆ ಅವರು ಎಂದು ಹೇಳಿದ್ದಾರೆ. ಪೇಜಾವರ ಶ್ರೀಪಾದರು, ಸುತ್ತೂರು ಶ್ರೀಗಳು ಕಾವಿ ಹಾಕಿಲ್ಲವೇ ಎಂದು ಪ್ರಶ್ನಿಸಿರುವ ಶ್ರೀರಾಮುಲು ಅವರು ಕುಮಾರಸ್ವಾಮಿ ಅವರು ಮಾಡಿರುವಂತರ ಟೀಕೆ, ಕೇವಲ ನನ್ನನ್ನು ಮಾತ್ರವಲ್ಲ, ಬದಲಿಗೆ ಕಾವಿ ಹಾಕಿದ ಎಲ್ಲರಿಗೂ ಕೂಡಾ ಅಪಮಾನ ಮಾಡಿದಂತೆ ಆಗಿದೆ ಎಂದು ಅವರು ಹೇಳಿದ್ದಾರೆ.

ರಾಜ್ಯದಲ್ಲಿ ಬಿಜೆಪಿ ಪಾರ್ಟಿಯು ನನಗೆ ಸ್ಥಾನ ಮಾನ ನೀಡಿದ್ದು, ನಾನು ನನ್ನ ಕೆಲಸಗಳನ್ನು ಮಾಡಿಕೊಂಡು ಹೋಗುತ್ತಿದ್ದೇನೆ, ಅದೇ ಕಾರಣದಿಂದಲೇ ಹಲವರು ನನ್ನ ಮೇಲೆ ಈ ರೀತಿ ಟೀಕೆಗಳನ್ನು ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ ಸಚಿವ ಶ್ರೀರಾಮುಲು ಅವರು. ಕಾವಿ ವಿಚಾರವಾಗಿ ಸಿಎಂ ಅವರು ಮಾಡಿದ್ದ ಟೀಕೆಗೆ ಈ ರೀತಿ ಅವರು ತಿರುಗೇಟು ನೀಡಿದ್ದಾರೆ ಶ್ರೀರಾಮುಲು ಅವರು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here