ರಾಜ್ಯ ಸಚಿವರಾದ ಶ್ರೀರಾಮುಲು ಅವರು ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿ ಅವರ ವಿರುದ್ಧ ತೀವ್ರವಾದ ವಾಗ್ದಾಳಿಯನ್ನು ನಡೆಸಿದ್ದಾರೆ. ಚಿಕ್ಕಮಗಳೂರಿನಲ್ಲಿ ಇಂದು ಮಾತನಾಡಿರುವ ಸಚಿವ ಶ್ರೀರಾಮುಲು ಅವರು ಅವರ ಮಾತಿನಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಮಾತುಗಳ ಬಗ್ಗೆ ಹಾಗೂ ಅವರ ವರ್ತನೆಯ ಬಗ್ಗೆ ತೀವ್ರವಾದ ಅಸಮಾಧಾನವನ್ನು ಹೊರಹಾಕುತ್ತಾ ಅವರ ವಿರುದ್ಧ ತಮ್ಮ ಸಿಟ್ಟನ್ನು ವ್ಯಕ್ತಪಡಿಸಿದ್ದಾರೆ. ಶ್ರೀ ರಾಮುಲು ಅವರು ಕುಮಾರ ಸ್ವಾಮಿ ಅವರು ಸೀರಿಯಸ್ ರಾಜಕಾರಣಿಯೇ ಅಲ್ಲ ಎಂದು ಹರಿಹಾಯುವ ಮೂಲಕ ತಮ್ಮ ಸಿಟ್ಟನ್ನು ಹೊರ ಹಾಕಿದ್ದಾರೆ.

ಶ್ರೀರಾಮುಲು ಅವರು ಮಾನನಾಡುತ್ತಾ ಕುಮಾರಸ್ವಾಮಿ ಅವರು ಮಾತನಾಡುವಾಗ ಕೀಳು ಮಟ್ಟದ ಪದ ಬಳಕೆಯನ್ನು ಮಾಡುತ್ತಾರೆ. ನಾನು ಅವರ ವಿರುದ್ಧ ಯಾವುದೇ ವೈಯಕ್ತಿಕ ಟೀಕೆಯನ್ನು ಮಾಡುವುದಿಲ್ಲ. ಯಾರು ಮನೆ ಹಾಳು ಮಾಡಿದ್ದಾರೆ ಎಂಬುದು ಜನರಿಗೆ ತಿಳಿದಿದೆ ಎಂದು ಅವರು ಹೇಳಿದ್ದಾರೆ. ಆದರೆ ನಾನು ಅದರ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ. ಅವರ ಭಾಷೆಯೇ ಬೇರೆ, ನನ್ನ ಭಾಷೆಯೇ ಬೇರೆ ಎಂದು ಹೇಳುತ್ತಾ, ಯಾರು ಏನೆಂಬುದು ಇಡೀ ರಾಜ್ಯಕ್ಕೆ ತಿಳಿದಿದೆ ಎಂದು ಶ್ರೀ ರಾಮುಲು ಅವರು ಕುಮಾರಸ್ವಾಮಿ ಅವರ ವಿರುದ್ಧ ವಾಗ್ದಾಳಿಯನ್ನು ನಡೆಸಿದ್ದಾರೆ.

ಶ್ರೀ ರಾಮುಲು ಅವರ ತಮ್ಮ ಮಾತಿನ ಮೂಲಕ ಸಿಟ್ಟನ್ನು ಹೊರಹಾಕುವ ಜೊತೆಗೆ ಕುಮಾರಸ್ವಾಮಿ ಅವರ ಮಾತು, ಅವರ ಭಾಷೆ ಹಾಗೂ ಪದ ಬಳಕೆ ಬಗ್ಗೆ ತಮ್ಮ ಸಿಟ್ಟನ್ನು ಕೂಡಾ ವ್ಯಕ್ತಪಡಿಸಿದ್ದಾರೆ. ಅಲ್ಲದೆ ತಾನು ಅವರ ವಿಷಯವಾಗಿ ಯಾವುದೇ ವೈಯಕ್ತಿಕ ವಾಗ್ದಾಳಿ ಮಾಡುವುದಿಲ್ಲ ಎಂದು ಕೂಡಾ ಸ್ಪಷ್ಟವಾಗಿ ಹೇಳಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here