ಇಂದು ನಡೆದ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಸಭೆಯಲ್ಲಿ ನಡೆದ ಅಂಬರೀಶ್ ನೇತೃತ್ವದ ಸಭೆಯಲ್ಲಿ ಮಾಧ್ಯಮಗಳ ಜೊತೆ ಅಂಬರೀಶ್ ,ಅರ್ಜುನ್ ಸರ್ಜಾ ಮತ್ತು ಶೃತಿ‌ ಹರಿಹರನ್ ಮಾತನಾಡಿದರು.ಈ ಸಮಯದಲ್ಲಿ ಶೃತಿ ಹರಿಹರನ್ ಸಹ ಮಾತನಾಡುತ್ತಾ ತಮ್ಮ‌ ಅಭಿಪ್ರಾಯ ಹಂಚಿಕೊಂಡರು. ಒಂದು ಹೆಣ್ಣಿಗೆ ಅನ್ಯಾಯ ಆಗಿದೆ ಎಂದಾಗ ಎಲ್ಲರೂ ಕನಿಷ್ಠ ಪಕ್ಷ ನೋವಿಗೆ ಸ್ಪಂದಿಸಿ ,ಸತ್ಯ ತಿಳಿಯದೆ ನನ್ನನ್ನು ಟಾರ್ಗೆಟ್ ಮಾಡುವುದು ಯಾವ ನ್ಯಾಯ ನಾನು ಯಾವುದೇ ತಪ್ಪು ಮಾಡಿಲ್ಲ. ನನಗೆ ಸಮಸ್ಯೆಯಾಗಿದೆ. ನಾನು ಏಕೆ ಕ್ಷಮೆ ಕೇಳಬೇಕು ಎಂದು ನಟ ಅರ್ಜುನ್ ಸರ್ಜಾ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿರುವ ನಟಿ ಶ್ರುತಿ ಹರಿಹರನ್​ ಅವರು ಪ್ರಶ್ನಿಸಿದ್ದಾರೆ.

ವಿವಾದದ ಹಿನ್ನೆಲೆಯಲ್ಲಿ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಅರ್ಜುನ್ ಸರ್ಜಾ ಮತ್ತು ಶ್ರುತಿ ಹರಿಹರನ್​ ವಿಚಾರಣೆ ನಡೆಸಿದ ನಂತರ ಶ್ರುತಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅನ್ಯಾಯದ ವಿರುದ್ಧ ಧ್ವನಿಯೆತ್ತುವ ಹೆಣ್ಣನ್ನು ಬಲಿಪಶು ಮಾಡುವ ಪ್ರಯತ್ನಗಳು ನಡೆಯುತ್ತಲೇ ಇರುತ್ತವೆ.ನಾನು ಕನ್ನಡ ಚಿತ್ರರಂಗದಲ್ಲಿ 5 ವರ್ಷದಿಂದ ಕೆಲಸ ಮಾಡುತ್ತಿದ್ದೇನೆ. ನನಗೆ ಚಲನಚಿತ್ರ ವಾಣಿಜ್ಯ ಮಂಡಳಿಯ ಮೇಲೆ ಸಂಪೂರ್ಣ ನಂಬಿಕೆ ಇದೆ ಎಂದು ಹೇಳಿದರು.2 ದಿನಗಳ ಹಿಂದೆ ವಾಣಿಜ್ಯ ಮಂಡಳಿಯಲ್ಲಿ ಸಭೆ ಇದೆ ಎಂದು ಕವಿತಾ ಮೇಡಂ ತಿಳಿಸಿದ್ದರು.

ಹಾಗಾಗಿ ನಾನು ದೂರು ಕೊಡುವುದನ್ನು ಮುಂದೂಡಿದ್ದೆ. ಈಗ ಅರ್ಜುನ್​ ಸರ್ಜಾ ಅವರು ನನ್ನ ವಿರುದ್ಧ ದೂರು ಕೊಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಆದರೂ ನಾನು ವಾಣಿಜ್ಯ ಮಂಡಳಿ ತೀರ್ಮಾನಕ್ಕಾಗಿ ನಾಳೆ ಬೆಳಗ್ಗೆಯವರೆಗೂ ಕಾಯುತ್ತೇನೆ. ವಾಣಿಜ್ಯ ಮಂಡಳಿಯ ತೀರ್ಮಾನ ಪ್ರಕಟವಾದ ನಂತರ ನನ್ನ ಮುಂದಿನ ನಡೆಯ ಕುರಿತು ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದು ಶ್ರುತಿ ಹರಿಹರನ್​ ತಿಳಿಸಿದರು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here