ಶೃತಿ ಹರಿಹರನ್ ಅದ್ಯಾವಾಗ ಅರ್ಜುನ್ ಸರ್ಜಾ ವಿರುದ್ಧ ಆರೋಪಗಳನ್ನ ಮಾಡೋದಕ್ಕೆ ಶುರುಮಾಡಿದ್ರೋ ಆಗ ಇಡೀ ಚಿತ್ರರಂಗ ಅರ್ಜುನ್ ಸರ್ಜಾ ಪರವಾಗಿ ನಿಂತ್ರು. ಅರ್ಜುನ್ ಸರ್ಜಾರನ್ನ 35ವರ್ಷಗಳಿಂದ ನೋಡ್ಕೊಂಡು ಬಂದಿದ್ದ ಚಿತ್ರರಂಗದ ಫ್ಯಾಮಿಲಿ ಅವರನ್ನ ಅಷ್ಟು ಸುಲಭಕ್ಕೆ ಬಿಟ್ಟುಕೊಡೋದಕ್ಕೆ ರೆಡಿಯಿರಲಿಲ್ಲ. ಹೀಗಾಗಿ ಇಡೀ ಚಿತ್ರರಂಗ ಶೃತಿ ವಿರುದ್ಧ ತಿರುಗಿಬಿದ್ದಿತ್ತು. ನಿರ್ಮಾಪತರು, ನಿರ್ಶೇಕರು ಶೃತಿ ವಿರುದ್ಧವೇ ವಾಗ್ದಾಳಿ ನಡೆಸೋದಕ್ಕೆ ಶುರುಮಾಡಿದ್ರು. ಆದಾದ ನಂತ್ರ ಇದ್ಯಾಕೋ ಬೇರೆಯದ್ದೇ ರೂಟ್ ಹಿಡ್ಕೊಂಡು ಹೋಗ್ತಿದೆ ಅಂತ ಹಿರಿಯರೆಲ್ಲಾ ಸೇರಿ ಕಾಂಪ್ರಮೈಸ್ ಮಾಡಿಸೋದಕ್ಕೆ ನೋಡಿದ್ರು. ಆದ್ರೆ ಶೃತಿ ಅಲ್ಲಿ ಸಾರಿ ಕೇಳದೆ ಹೋದ್ರು.

ಅಲ್ಲದೆ ನಮ್ಮಿಬ್ಬರ ನಡುವೆ ಏನು ನಡೆದಿದೆ ಅನ್ನೋದು ನಮ್ಮಿಬ್ಬರಿಗೆ ಮಾತ್ರ ಗೊತ್ತು ಅಂತ ಎಲ್ಲರನ್ನ ದಂಗುಬಡಿಸಿದ್ರು.ಇಷ್ಟೆಲ್ಲಾ ಆದ ಮೇಲೆ ನಾನು ಕಾಂಪ್ರಮೈಸ್ ಆಗೋದಿಲ್ಲ ಅಂತ ಅರ್ಜುನ್ ಸರ್ಜಾ ಕೋರ್ಟ್ ಮೆಟ್ಟಿಲೇರೋದಕ್ಕೆ ರೆಡಿಯಾದ್ರು. ಶೃತಿ ಮೀಟು ಅಭಿಯಾನದ ಹೆಸರಲ್ಲಿ ನನ್ನ ಮಾನನಷ್ಟ ಮಾಡಿದ್ದಾಳೆ ಅಂತ ಕೋರ್ಟ್ ಮೆಟ್ಟಿಲೇರಿದ್ರು. ವಿಸ್ಮಯ ಸಿನಿಮಾ ಚಿತ್ರೀಕರಣದ ವೇಳೆ ನಾನು ಆಕೆಯ ಜೊತೆ ಅನುಚಿತವಾಗಿ ವರ್ತಿಸಿಲ್ಲ ಅಂತ ಅರ್ಜುನ್ ವಾದವಾಗಿತ್ತು. ಅಲ್ಲದೆ ತನ್ನ ಮಾನಹಾನಿ ಮಾಡಿದ ಶೃತಿಗೆ ಬುದ್ಧಿ ಕಲಿಸೋದಕ್ಕೆ ಅಂತಾನೆ ಸರ್ಜಾ ಕೋರ್ಟ್ ನಲ್ಲಿ ಕೇಸ್ ಹಾಕಿದ್ರು. ಅಲ್ಲದೆ ತನ್ನ ವಿರುದ್ಧ ಇನ್ನೆಲ್ಲೂ ಮಾತನಾಡಬಾರದು ಅಂತ ಶೃತಿಗೆ ಸ್ಟೇ ತರೋದಕ್ಕೂ ಕೂಡಾ ಅರ್ಜಿ ಸಲ್ಲಿಸಿದ್ರು.

ಈ ಕೇಸ್ ಅನ್ನ ಇನ್ನು ಕೋರ್ಟ್ ವಿಚಾರಣೆ ನಡೆಸ್ತಿದೆ. ಅಲ್ಲಿ ಆಕ್ಷನ್ ಕಿಂಗ್ ಶೃತಿಗೆ ಮೊದಲ ಪಂಚ್ ನೀಡಿದ್ರು. ಆದ್ರೆ ಅದ್ಯಾವಾಗ ಸರ್ಜಾ ಕೋರ್ಟ್ ಮೊರೆ ಹೋದ್ರೋ ಶೃತಿಯೊಳಗಿದ್ದ ಹೆಣ್ಣತನ ಕೂಗಲಾರಂಭಿಸಿತ್ತು. ನೀನು ಹೆಣ್ಣು ನೀನು ಮನಸ್ಸು ಮಾಡಿದ್ರೆ ಆ ರೀಲ್ ಹೀರೋನ ಮಕಾಡೆ ಮಲಗಿಸೋದು ಎಷ್ಟು ಹೊತ್ತು ಅಂತ ಹೂಂಕರಿಸಿತ್ತು. ಆಗಲೇ ಶೃತಿ ಸರ್ಜಾರನ್ನ ಮುಗಿಸೋದಕ್ಕೆ ಪ್ಲಾನ್ ಮಾಡಿಬಿಟ್ಲು. ಸರ್ಜಾ ವಿರುದ್ಧ ತಿರುಗಿಬಿದ್ದಿದ್ದ ಶೃತಿ ಈಗ ಕಾನೂನು ಹೋರಾಟಕ್ಕೆ ರೆಡಿ ಮಾಡ್ಕೊಂಡಿದ್ಲು. ತಾನು ಕೇಸ್ ಹಾಕಿದ್ರೆ ಏಟಿಗೆ ಎದಿರೇಟು ಹೇಗಿರುತ್ತೆ ಅನ್ನೋದು ಗೊತ್ತಾಗುತ್ತೆ ಅನ್ನೋದನ್ನ ಇವತ್ತು ಶೃತಿ ಹರಿಹರನ್ ಸರ್ಜಾಗೆ ತೋರಿಸಿಕೊಟ್ಟಿದ್ಲು.

ಇಂದು ಬೆಳಗ್ಗೆ ಕಬ್ಬನ್ ಪಾರ್ಕ್ ಗೆ ತನ್ನ ವಕೀಲರ ಜೊತೆ ಆಗಮಿಸಿದ ಶೃತಿ ಸರ್ಜಾ ವಿರುದ್ಧ ಬ್ರಹ್ಮಾಸ್ತ್ರವನ್ನೇ ಬಿಟ್ಟಿದ್ಲು. ಅದೇನಪ್ಪಾ ಅಂದ್ರೆ 2015ರಲ್ಲಿ ವಿಸ್ಮಯ ಶೂಟಿಂಗ್ ವೇಳೆ ಅರ್ಜುನ್ ನನಗೆ ಲೈಂಗಿಕ ಕಿರುಕುಳ ನೀಡಿದ್ರು ಅಂತ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ಲು. ಅದು ಸುಮ್ಮನೆ ನೀಡಿದ್ದ ದೂರಾಗಿರಲಿಲ್ಲ. ಅರ್ಜುನ್ ಸರ್ಜಾರನ್ನ ಚಕ್ರವ್ಯೂಹದೊಳಗೆ ಸಿಲುಕಿಸೋ ಪ್ಲಾನ್ ಅದಾಗಿತ್ತು. ಹೀಗಾಗಿ ಅರ್ಜುನ್ ಗೆ ಚಕ್ರವ್ಯೂಹ ಬೇಧಿಸಿಕೊಂಡು ಹೊರಗೆ ಬರದೇ ಇರೋ ಹಾಗೆ ಪ್ಲಾನ್ ಮಾಡಿದ್ಲು. ತನಗೆ ಲೈಂಗಿಕ ದೌರ್ಜನ್ಯ ನೀಡಿದ್ದಾರೆ. ಅವರು ನನ್ನನ್ನ ಲೈಂಗಿಕವಾಗಿ ಉಪಯೋಗಿಸಿಕೊಳ್ಳೋದಕ್ಕೆ ನೋಡಿದ್ರು ಅಂತ ದೂರಿನಲ್ಲಿ ತಿಳಿಸಿದ್ರು.

ಅಲ್ಲಿಗೆ ಕಬ್ಬನ್ ಪಾರ್ಕ್ ಪೊಲೀಸ್ರು ದೂರು ಪಡೆದು ಐಪಿಸಿ ಸೆಕ್ಷನ್ 354 ಮತ್ತು 506 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ರು.ಶೃತಿ ನೋಡೋದಕ್ಕೆ ಮಾತ್ರ ಚೆಂದ. ಆದ್ರೆ ಆಕೆ ಸಮಯಸಾಧಕಿ ಅನ್ನೋದು ತನ್ನ ಗಂಡನ ವಿಚಾರ ಮುಚ್ಚಿಟ್ಟಾಗಲೇ ಗೊತ್ತಾಗಿತ್ತು ಅಂತ ಈಗ ಗಾಂಧಿನಗರದ ಜನ ಮಾತನಾಡಿಕೊಳ್ತಿದ್ದಾರೆ. ಆಕೆ ಮದುವೆಯಾಗಿರೋದನ್ನ ಯಾರಿಗೂ ಹೇಳಿಯೇ ಇಲ್ಲ. ಆಕೆಯ ಬಗ್ಗೆ ತೀರ ಗೊತ್ತಿದ್ದವರಿಗೂ ಆಕೆಯ ವೈವಾಹಿಕ ಸಂಬಂಧದ ಬಗ್ಗೆ ಮಾಹಿತಿಯಿಲ್ಲ. ಹೀಗೆ ತನ್ನ ಗಂಡನ ಬಗ್ಗೆಯೇ ಯಾರಿಗೂ ಹೇಳಿಕೊಳ್ಳದೆ ಆಕೆ ಸಾಕಷ್ಟು ವರ್ಷಗಳಿಂದ ಸಿನಿಮಾದಲ್ಲಿ ಕಾಣಿಸಿಕೊಳ್ತಿದ್ದಾಳೆ.

ಅಲ್ಲದೆ ರಾಮ್ ಕೂಡಾ ಇಲ್ಲಿವರೆಗೂ ಎಲ್ಲಿಯೂ ಶೃತಿ ಜೊತೆ ಕಾಣಿಸಿಕೊಂಡಿಲ್ಲ. ಇಡೀ ದೇಶಕ್ಕೆ ದೇಶವೇ ಶೃತಿಯನ್ನ ವಿರೋಧಿಸ್ತಿದ್ರು ಆಕೆಯ ಪತಿ ರಾಮ್ ಮಾತ್ರ ಎಲ್ಲೂ ತನ್ನ ಪತ್ನಿಯ ಪರವಾಗಿ ಮಾತನಾಡಿರೋದನ್ನ ಜನ ನೋಡಿಲ್ಲ. ಅಲ್ಲದೆ ತನ್ನ ಸಪೋರ್ಟ್ ಗೆ ಈಗ ನನ್ನ ಗಂಡ ಬರರ್ತಾನೆ ಅಂತಾನು ಶೃತಿ ಎಲ್ಲೂ ಹೇಳಿಲ್ಲ. ಹೀಗಾಗಿ ತನಗೆ ಮದುವೆಯಾಗಿರೋ ವಿಷಯ ಮುಚ್ಚಿಟ್ಟು ಆಕೆ ಸಾಧಿಸೋದಾದ್ರೂ ಏನು ಅನ್ನೋ ಪ್ರಶ್ನೆ ಕಾಡುತ್ತೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here