ಹತ್ತನೇ ತರಗತಿ ಪರೀಕ್ಷೆಗಳು ಎಂದರೆ ಅದಕ್ಕಾಗಿ ಪ್ರತಿ ಶಾಲೆಯಲ್ಲಿ ಕೂಡಾ ಶಿಕ್ಷಕರು ವರ್ಷಾರಂಭದಿಂದಲೇ ವಿದ್ಯಾರ್ಥಿಗಳನ್ನು ಸಿದ್ಧಗೊಳಿಸಲು ಸಜ್ಜಾಗುತ್ತಾರೆ. ಅವರಿಗೆ ಪ್ರತಿ ಪಾಠವನ್ನು ಮಾಡುವಾಗಲೇ, ಆ ಪಾಠದಲ್ಲಿ ಕೇಳಲಾಗುವ ಪ್ರಶ್ನೆಗಳಿಗೆ ಹೇಗೆ ಉತ್ತರ ನೀಡಬೇಕೆಂಬ ಮಾಹಿತಿಯನ್ನು ಕೂಡಾ ನೀಡುತ್ತಾರೆ. ಅಲ್ಲದೆ ಪ್ರಶ್ನೆ ಪತ್ರಿಕೆ ಸರ್ಕಾರದಿಂದ ಸಿದ್ಧವಾಗುವುದರಿಂದ ಪ್ರತಿ ಅಂಶಕ್ಕೆ ಒತ್ತು ಕೊಟ್ಟು, ಅಲ್ಲಿನ ಅನುಮಾನಗಳನ್ನು ಪರಿಹರಿಸುವ ಕೆಲಸವನ್ನು ಮಾಡುತ್ತಾ, ವಿದ್ಯಾರ್ಥಿಗಳ ಜೊತೆಗೆ ಶಿಕ್ಷಕರು ಕೂಡಾ ಸಾಕಷ್ಟು ಶ್ರಮವನ್ನು ವಹಿಸುತ್ತಾ, ಬೋಧನೆಯನ್ನು ಮಾಡುತ್ತಾರೆ.

ಹತ್ತನೇ ತರಗತಿ ಪರೀಕ್ಷೆಗಳು ಪಬ್ಲಿಕ್ ಪರೀಕ್ಷೆ ಆದ್ದರಿಂದ ಅದರ ಬಗ್ಗೆ ವಿದ್ಯಾರ್ಥಿಗಳ ಭಯ ಹೋಗಲಾಡಿಸಲು ಹಾಗೂ ಅವರು ಎಷ್ಟರ ಮಟ್ಟಿಗೆ ಸಿದ್ಧವಾಗಿದ್ದಾರೆ, ಮುಂದಿನ ಫೈನಲ್ ಪರೀಕ್ಷೆಗೆ ತಯಾರಾಗಲೆಂದು ಪೂರ್ವ ತಯಾರಿ ಪರೀಕ್ಷೆಗಳನ್ನು ಕೂಡಾ ನಡೆಸಲಾಗುತ್ತದೆ. ಆಗ ಅದರಲ್ಲಿ ಅವರು ಮಾಡುವ ತಪ್ಪುಗಳನ್ನು ಶಿಕ್ಷಕರು ತಿದ್ದಿ ಮುಂದಿನ ಪರೀಕ್ಷೆಯಲ್ಲಿ ಆ ತಪ್ಪುಗಳು ಮರುಕಳಿಸದಂತೆ ಎಚ್ಚರವಹಿಸುವಂತೆ ಮಾರ್ಗದರ್ಶನ ನೀಡುತ್ತಾರೆ. ಆದರೆ ಇಂತಹ ಪ್ರಾಮುಖ್ಯತೆಯನ್ನು ಹೊಂದಿರುವ ಪೂರ್ವ ಸಿದ್ಧತಾ ಪರೀಕ್ಷೆಯ ರಾಜ್ಯ ಮಟ್ಟದ ಪರೀಕ್ಷಾ ಪ್ರಶ್ನ ಪತ್ರಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ಲೀಕ್ ಆಗಿವೆ.

ಹಲೋ ಆ್ಯಪ್ ನಲ್ಲಿ ಈ ಬಾರಿ ಎಸ್.ಎಸ್.ಎಲ್.ಸಿ. ರಾಜ್ಯಮಟ್ಟದ ಪೂರ್ವಸಿದ್ಧತಾ ಪರೀಕ್ಷೆಯ ಪ್ರಶ್ನ ಪತ್ರಿಕೆಗಳು ಕೂಡಾ ಪರೀಕ್ಷೆಗೆ ಮುನ್ನವೇ ಲಭ್ಯವಿದ್ದು, ವಿದ್ಯಾರ್ಥಿಗಳು ಇದರಿಂದ ಮೊದಲೇ ಅವುಗಳನ್ನು ಡೌನ್ಲೋಡ್ ಮಾಡಿಕೊಂಡು, ಅದರ ಉತ್ತರಗಳನ್ನು ಮಾತ್ರ ಓದಿ ಬಂದು ಪರೀಕ್ಷೆ ಬರೆಯುತ್ತಿದ್ದಾರೆ. ಪರೀಕ್ಷೆಯನ್ನು ಮಾಡುವ ಉದ್ದೇಶವೇನೆಂದು ಅರಿಯದ ಕಿಡಿಗೇಡಿಗಳ ಇಂತಹ ಕೃತ್ಯಗಳು ನಿಜಕ್ಕೂ ವಿದ್ಯಾರ್ಥಿಗಳನ್ನು ತಪ್ಪು ದಾರಿ ಹಿಡಿಯುವಂತೆ ಮಾಡುತ್ತಿವೆ. ಇದೇ ಶನಿವಾರ ಅಂದರೆ ನಾಡಿದ್ದು 22:02:2020 ರಂದು ಇರುವ ಸಮಾಜ ವಿಜ್ಞಾನ ಪ್ರಶ್ನ ಪತ್ರಿಕೆ ಕೂಡಾ ಈಗಾಗಲೇ ಲಭ್ಯವಿರುವುದು ಕೂಡಾ ನಿಜಕ್ಕೂ ಬೇಸರದ ಸಂಗತಿ ಎನಿಸಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here