ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆ , ಅನಂತರ ಕನ್ನಡದ ನಟ ರಾಘವೇಂದ್ರ ರಾಜ್‍ಕುಮಾರ್ ಅವರು ರಮೇಶ್ ಅವರು ಅಚ್ಚುಕಟ್ಟಾಗಿ ನಡೆಸಿಕೊಡುವ ಕನ್ನಡಿಗರ ಹೆಮ್ಮೆಯ ಕಾರ್ಯಕ್ರಮ ವೀಕೆಂಡ್ ವಿತ್ ರಮೇಶ್ ನ ಈ ಸೀಸನ್ ಗೆ ಆರಂಭದಲ್ಲಿಯೇ ಅತಿಥಿಗಳಾಗಿ ಬಂದು ಶೋ ನ ಆರಂಭಕ್ಕೆ ಭರ್ಜರಿ ಮೆರುಗು ನೀಡಿದ್ದಲ್ಲದೆ ಈ ಎರಡು ಸಂಚಿಕೆಗಳು ಬಹಳ ಜನಪ್ರಿಯ ಕೂಡಾ ಆದವು‌. ವೀರೇಂದ್ರ ಹೆಗ್ಗಡೆಯವರು ಹಾಗೂ ರಾಘಣ್ಣನ ನಂತರ ಈಗ ಬರುವ ಸಾಧಕರ ಕುರ್ಚಿಯಲ್ಲಿ ಕೂರುವ ಅತಿಥಿ, ಸಾಧಕರು ಯಾರೆಂಬ ಪ್ರಶ್ನೆಗೆ ತೆರೆ ಬಿದ್ದಿದೆ. ಈ ಬಾರಿ ಸಾಧಕರ ಕುರ್ಚಿ ಮೇಲೆ ಕೂರಲು ಬರುತ್ತಿರುವವರು ಕನ್ನಡದ ಒಬ್ಬ ಪ್ರತಿಭಾವಂತ ನಟಿ.

ಕನ್ನಡದಲ್ಲಿ ನಂಬರ್ ಒನ್ ನಟಿಯಾಗಿ, ಬಹುತೇಕ ಸ್ಟಾರ್ ನಾಯಕರಿಗೆ ನಾಯಕಿಯಾಗಿ ಮಿಂಚಿದ, ನಂತರ ನೆರೆಯ ಆಂಧ್ರದಲ್ಲಿ ತೆಲುಗಿನಲ್ಲಿ ಕೂಡಾ ಜನಪ್ರಿಯ ನಟಿಯಾಗಿ ಮೆರೆದ ನಟಿ ಪ್ರೇಮ ಅವರು ಈ ಬಾರಿ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಬರಲಿರುವ ಅತಿಥಿ. ಈಗಾಗಲೇ ಕಾರ್ಯಕ್ರಮದ ಪ್ರೋಮೋ ಬಿಡುಗಡೆಯಾಗಿದ್ದು, ಎಲ್ಲರ ಗಮನವನ್ನು ಸೆಳೆದಿದೆ. ಒಂದು ಕಾಲದ ಸ್ಟಾರ್ ನಟಿ, ಚಿತ್ರರಂಗದಲ್ಲಿ ಉತ್ತುಂಗದ ಸ್ಥಾನದಲ್ಲಿ ಇರುವಾಗಲೇ ಚಿತ್ರರಂಗದಿಂದ ದೂರಾದ ಈ ನಟಿಯ ಅಭಿಮಾನಿಗಳು ಇನ್ನೂ ಅವರನ್ನು ಮೊದಲಿನಂತೆ ಅಭಿಮಾನಿಸುತ್ತಾರೆ.

ಶಿವಣ್ಣನ ಜೊತೆ ಸವ್ಯಸಾಚಿ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಅಡಿಯಿಟ್ಟ ಪ್ರೇಮ ಅವರ ಚಿತ್ರ ಜೀವನದಲ್ಲಿ ಓಂ, ನಮ್ಮೂರ ಮಂದಾರ ಹೂವೇ ಇವೆಲ್ಲಾ ಅಪರೂಪದ ಚಿತ್ರಗಳು. ತಮ್ಮ ಎರಡನೇ ಚಿತ್ರಕ್ಕೆ ರಾಜ್ಯ ಪ್ರಶಸ್ತಿ ಪಡೆದುಕೊಂಡ ಪ್ರತಿಭಾನ್ವಿತ ನಟಿ ಅವರು. ತೊಂಬತ್ತರ ದಶಕದಲ್ಲಿ ಸ್ಟಾರ್ ಹಿರೋಯಿನ್ ಎಂದರೆ ಅದು ಪ್ರೇಮ. ವಿವಾಹದ ನಂತರ ಅವರು ಚಿತ್ರರಂಗದಿಂದ ದೂರ ಉಳಿದಿದ್ದು ಮಾತ್ರವಲ್ಲದೆ, ಪ್ರೇಮ ಅವರ ವೈಯಕ್ತಿಕ ಜೀವನದ ಬಗ್ಗೆ ಅನೇಕ ಸುದ್ದಿಗಳು ಹರಡಿದ್ದವು. ಈ ಎಲ್ಲಾ ವಿಷಯಗಳಿಗೆ ಉತ್ತರ ನೀಡುವರಾ? ಪ್ರೇಮ ಎನ್ನುವ ಕುತೂಹಲವನ್ನು ಕೆರಳಿಸಿದೆ ಈ ಬಾರಿಯ ವೀಕೆಂಡ್ ವಿತ್ ರಮೇಶ್.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here