ಬಿಗ್ ಬಾಸ್ ಮನೆಯಲ್ಲಿ ಪ್ರತಿವಾರವೂ ಹೊಸ ಟಾಸ್ಕ್ ಗಳು ಬಿಗ್ ಬಾಸ್ ಸ್ಪರ್ಧಿಗಳಿಗೆ ಇರುತ್ತದೆ. ಅದೇ ರೀತಿಯಲ್ಲಿ ಈ ವಾರ ಸಹ ಹೊಸ  ಟಾಸ್ಕ್ ಬಿಗ್ ಬಾಸ್ ಸ್ಪರ್ಧಿಗಳಿಗೆ ಸಿಕ್ಕಿದ್ದು ಬಿಗ್ ಬಾಸ್ ಮನೆಯಲ್ಲಿ ಇರುವ ಸದಸ್ಯರು ಈಗ ಇರುವ ಮನೆಯನ್ನು ಬಿಟ್ಟು ಚಿಕ್ಕ ಮನೆಯಲ್ಲಿ ವಾಸ ಮಾಡಬೇಕಾದಂತಹ ಟಾಸ್ಕ್ ಒಂದನ್ನು ಬಿಗ್ ಬಾಸ್  ಸ್ಪರ್ಧಿಗಳಿಗೆ ನೀಡಿದ್ದಾರೆ.ಈ ವಾರದ ಬಿಗ್‌ಬಾಸ್‌ ಎಪಿಸೋಡ್ಸ್‌ ಎಷ್ಟೊಂದು  ಕುತೂಹಲಕಾರಿಯಾಗಿರುತ್ತೆ ಅನ್ನೋದು ಈ ವಾರದ ಆರಂಭದ  ದಿನವೇ ಗೊತ್ತಾಗಿದೆ.

ಯಾಕೆಂದರೆ  ಬಿಗ್‌ಬಾಸ್‌ ಮನೆಯ  ಸ್ಪರ್ಧಿಗಳಿಗೆ ವಾರದ ಮೊದಲ ದಿನವೇ ಶಾಕ್ ಕೊಟ್ಟಿದ್ದು ಈಗ ಸ್ಪರ್ಧಿಗಳು ಇರುವ  ಮನೆಯನ್ನೇ ಖಾಲಿ ಮಾಡಿಸಿದ್ದಾರೆ. 29 ದಿನಗಳು ಇದ್ದ ವ್ಯವಸ್ಥೆಗಳು ಈ ವಾರ ಇರೋದಿಲ್ಲ. ನೆಲದ ಮೇಲೆ ಮಲಗಬೇಕು ಮತ್ತು  ಚಿಕ್ಕ ಜಾಗದಲ್ಲಿಯೇ ಈ ವಾರ ಕಳೆಯಬೇಕು. ಅಷ್ಟಕ್ಕೂ ಬಿಗ್‌ಬಾಸ್‌ ಈ ಟಾಸ್ಕ್ ಕೊಟ್ಟಿದ್ದೇಕೆ..? ಬಿಗ್‌ಬಾಸ್‌ನ ಹಲವು ಟಾಸ್ಕ್‌ಗಳು ಜೀವನಕ್ಕೆ ಹತ್ತಿರವಾಗಿರುತ್ತದೆ. ಸೂಕ್ಷ್ಮವಾಗಿ ಗಮನಿಸಿದ್ರೆ ಮಾತ್ರ ಇದು ಅರ್ಥವಾಗುತ್ತದೆ. ಈ ವಾರದ ಟಾಸ್ಕ್‌ ಕೂಡ ಇಂತಹದ್ದೇ ಅಂತಾ ಹೇಳಬಹುದು.

ನಿನ್ನೆ ಪ್ರಸಾರವಾದ ಎಪಿಸೋಡ್‌ನಲ್ಲಿ ಬಿಗ್‌ಬಾಸ್‌ ಕೇವಲ ಮನೆಯನ್ನ ಖಾಲಿ ಮಾಡಿಸಿದ್ದಾರೆ. ಸ್ಪರ್ಧಿಗಳು ತಮ್ಮ ವಸ್ತುಗಳನ್ನ ಶಿಫ್ಟ್ ಮಾಡಿದ್ದಾರೆ. ಗಾರ್ಡನ್‌ ಏರಿಯಾದಲ್ಲಿ ನಿರ್ಮಿಸಿರೋ ಪುಟ್ಟ ಮನೆಯಲ್ಲಿ ಈಗ ಎಲ್ಲರೂ ಇದ್ದಾರೆ. ಅಡುಗೆ ಸಾಮ್ರಾಗಿಗಳನ್ನು ಕೂಡ ಇದೇ ಮನೆಗೆ ವರ್ಗಾಯಿಸಲಾಗಿದೆ. ಈ ಮನೆಯಲ್ಲಿ ಬಿಗ್‌ಬಾಸ್ ಸ್ಪರ್ಧಿಗಳನ್ನ ಹೇಗೆ ಆಟವಾಡಿಸ್ತಾರೆ ಅಂತಾ ಇವತ್ತು ತಿಳಿಯಲಿದೆ. ಈ ಪುಟ್ಟ ಮನೆಯಲ್ಲಿ ಸ್ಪರ್ಧಿಗಳು ಹೇಗಿರ್ತಾರೆ ಅನ್ನೋ ಕುತೂಹಲವೂ ಮನೆ ಮಾಡಿದೆ.

Video and photos :- colors kannada

ತಿಂಗಳ ನೋಟೀಸ್ ಇಲ್ಲ, ಅಗ್ರೀಮೆಂಟ್ ಕೂಡ ಮುಗಿದಿಲ್ಲ! ಇದ್ದಕ್ಕಿದ್ದ ಹಾಗೆ ಇರೋ ಮನೆ ಖಾಲಿ ಮಾಡಿ ಅಂದ್ರೆ ಹೆಂಗೆ ಬಿಗ್‌ಬಾಸ್?ಬಿಗ್‌ಬಾಸ್ | ಪ್ರತಿ ರಾತ್ರಿ 9ಕ್ಕೆ#BBK7 #BiggBoss #ColorsKannada

Colors Kannada यांनी वर पोस्ट केले रविवार, १० नोव्हेंबर, २०१९

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here