ಸ್ಯಾಂಡಲ್ ವುಡ್ ನ ಸ್ಟಾರ್ ನಟ ಹಾಗೂ ನಿರ್ಮಾಪಕರ ಮೇಲೆ ನಡೆದಿರುವ ಐಟಿ ಧಾಳಿಯು ಸಹಜವಾಗಿಯೇ ಎಲ್ಲೆಡೆ ಕುತೂಹಲವನ್ನು ಕೆರಳಿಸಿದೆ. ಇಂದು ಎರಡನೆಯ ದಿನವೂ ಪರಿಶೀಲನೆ ಕಾರ್ಯವು ಮುಂದುವರೆದಿದ್ದು, ಹೀಗೆ ಸತತವಾಗಿ ಪರಿಶೀಲನೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸ್ಟಾರ್ ನಟರ ಮೇಲೆ ಹಾಗೂ ಕೆಲಸಗಳ ಮೇಲೆ ಸಹಜವಾಗಿಯೇ ಬ್ರೇಕ್ ಹಾಕಿದಂತಾಗಿದೆ. ವಿಷಯ ಹೀಗಿರುವಾಗ ಐಟಿ ಧಾಳಿಯ ಪರಿಣಾಮ ಕನ್ನಡದ ಸುಪ್ರಸಿದ್ಧ ರಿಯಾಲಿಟಿ ಶೋ ಬಿಗ್ ಬಾಸ್ ಮೇಲೆ ಇದು ಪರಿಣಾಮ ಬೀರಲಿದೆಯೇ ಎಂಬ ಅನುಮಾನ ಹಾಗೂ ಆತಂಕ ಉದ್ಭವಿಸಿದೆ. ಅದಕ್ಕೆ ಕಾರಣ ಸ್ಟಾರ್ ನಟ ಸುದೀಪ್ ಅವರ ಮೇಲಿನ ಐಟಿ ಧಾಳಿ. ಇನ್ನು ಈ ಧಾಳಿ ಬಿಗ್ ಬಾಸ್ ಮೇಲೆ ಹೇಗೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂಬುದಕ್ಕೆ ಉತ್ತರ ಇಲ್ಲಿದೆ.

ಇಂದು ರಾತ್ರಿ ಹಾಗೂ ನಾಳೆವರೆಗೂ ಪರಿಶೀಲನೆ ಮುಂದುವರೆದರೆ ಬಿಗ್ ಬಾಸ್ ವಾರದ ಕಥೆ, ಕಿಚ್ಚನ ಜೊತೆ ಕಾರ್ಯಕ್ರಮದ ಮೇಲೆ ಪರಿಣಾಮ ಬೀರುವುದು ಎನ್ನಲಾಗಿದೆ. ಕಾರಣ ವೀಕೆಂಡ್ನ ಈ ಎಪಿಸೋಡ್ ಗಳ ಬಹುತೇಕ ರೆಕಾರ್ಡಿಂಗ್ ಶನಿವಾರ ಮಧ್ಯಾಹ್ನ ಅಥವಾ ಸಂಜೆ ನಡೆಯುತ್ತದೆ. ಒಂದು ವೇಳೆ ಐಟಿ ಪರಿಶೀಲನೆ ದೀರ್ಘ ಸಮಯದವರೆಗೆ ಮುಂದುವರೆದರೆ ಈ ರೆಕಾರ್ಡಿಂಗ್ ಮೇಲೆ ಹಾಗೂ ವೀಕೆಂಡ್ ಎಪಿಸೋಡ್ ನ ಮೇಲೆ ಇದು ನೇರವಾಗಿ ಪರಿಣಾಮ ಬೀರಲಿದೆ. ಬದಲಾಗಿ ಬೆಳಿಗ್ಗೆ ವೇಳೆಗೆ ಅಥವಾ ಇಂದು ರಾತ್ರಿ ಪರಿಶೀಲನೆ ಮುಗಿದರೆ ಯಾವುದೇ ಸಮಸ್ಯೆಯು ಇರುವುದಿಲ್ಲ.

ಅದರ ಬದಲಾಗಿ ಐಟಿ ಅಧಿಕಾರಿಗಳ ಪರಿಶೀಲನೆ ನಾಳೆಯ ಮಧ್ಯಾಹ್ನದ ವರೆಗೂ ಏನಾದರೂ ಮುಂದುವರೆದರೆ, ಅದರಿಂದ ಬಿಗ್ ಬಾಸ್ ಆಯೋಜಕರಿಗೆ ಹಾಗೂ ಕಿಚ್ಚ ಸುದೀಪ್ ಇಬ್ಬರಿಗೂ ಕಷ್ಟವಾಗಲಿದೆ. ಏಕೆಂದರೆ ರೆಕಾರ್ಡಿಂಗ್ ಗೆ ಮೊದಲು ಸುದೀಪ್ ಅವರು ಎಪಿಸೋಡ್ ಗಳನ್ನು ನೋಡಿ, ಸಿದ್ಧತೆ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಆದರೆ ಆತುರವಾಗಿ ಅದನ್ನೆಲ್ಲಾ ಮಾಡುವುದು ಸಾಧ್ಯವಿಲ್ಲ. ಅದೃಷ್ಟವಶಾತ್ ಪರಿಶೀಲನೆ ಬೇಗ ಮುಗಿದರೆ ನಾಳೆ ಯಾವುದೇ ತೊಂದರೆಯಿಲ್ಲದೆ ಬಿಗ್ ಬಾಸ್ ಕಾರ್ಯಕ್ರಮ ನಡೆಯುತ್ತದೆ. ಇಲ್ಲವಾದಲ್ಲಿ ಖಚಿತವಾಗಿ ಐಟಿ ಧಾಳಿ ತನ್ನ ಪರಿಣಾಮ ಬೀರಲಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here