ಕೊರೊನಾ ವೈರಸ್ ನಿಯಂತ್ರಿಸುವ ಹಿನ್ನೆಲೆಯಲ್ಲಿ ಜನತಾ ಕರ್ಫ್ಯೂಗೆ ಕರೆಗೆ ನೀಡಿದ್ದ ಮೋದಿಯವರು ಸಂಜೆ ಐದು ಗಂಟೆಗೆ ಮನೆಯ ಮುಂದೆ, ಬಾಲ್ಕನಿಗಳಲ್ಲಿ ನಿಂತು ಚಪ್ಪಾಳೆಯನ್ನು ತಟ್ಟೋಣ. ಆ ಮೂಲಕ ಕೊರೊನಾ ವೈರಸ್ ನಿಯಂತ್ರಣಕ್ಕೆ ಹಾಗೂ ರೋಗಿಗಳ ರಕ್ಷಣೆಗೆ ನಿಂತ ವೈದ್ಯಕೀಯ ತಂಡದ ಸೇವೆಗೆ ಎಲ್ಲರೂ ಧನ್ಯವಾದಗಳನ್ನು ತಿಳಿಸೋಣ ಎಂದು ಸಂದೇಶ ನೀಡಿದ್ದರು. ಇದಕ್ಕೆ ಅಭೂತಪೂರ್ವ ಬೆಂಬಲ ಕೂಡಾ ದೊರೆತಿದ್ದು, ಇದೇ ಹಿನ್ನೆಲೆಯಲ್ಲಿ ನಟ ಕಿಚ್ಚ ಸುದೀಪ್ ಅವರು ಕೂಡಾ ಅಭಿಮಾನಿಗಳನ್ನು ಈ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಕೇಳಿದ್ದರು‌. ಅವರು ಒಂದು ವಿಡಿಯೋ ಕೂಡಾ ಶೇರ್ ಮಾಡಿದ್ದರು.

ವಿಡಿಯೋದಲ್ಲಿ ಮಹಿಳೆಯೊಬ್ಬರು ಮೋದಿಯವರು ನಿಮ್ಮ ಮೂಲಕ ಎನರ್ಜಿ ಮೆಡಿಸನ್ ಸೃಷ್ಟಿಸುತ್ತಿದ್ದಾರೆ. ಅವರು ನಿಮ್ಮನ್ನೂ ಎಲ್ಲೂ ಕರೆದುಕೊಂಡು ಹೋಗುತ್ತಿಲ್ಲ, ನಿಮ್ಮ ಮನೆಯ ಮುಂದೆ ಅಥವಾ ಬಾಲ್ಕನಿಯಲ್ಲಿ ಚಪ್ಪಾಳೆ ಹೊಡೆಯುವಂತೆ ಹೇಳಿದ್ದಾರೆ. ಇದು ಅದ್ಭುತ, ಸಾಧ್ಯವಾದಷ್ಟು ಇತರರಿಗೂ ತಿಳಿಸಿ ಎಂದು ಹೇಳಿದ್ದಾರೆ. ಜೊತೆಗೆ ಸುದೀಪ್ ಅವರು ದಯವಿಟ್ಟು ಇದರಲ್ಲಿ ಭಾಗವಹಿಸಿ, ಇದ್ರಿಂದ ಏನಾದ್ರೂ ಕಳೆದುಕೊಳ್ತೀವಾ? ಏನಾದ್ರೂ ಲಾಭವಾಗುತ್ತಾ? ಬಹುಶಃ ಆಗಬಹುದು, ನಾವೊಂದು ಸಣ್ಣ ಪ್ರಯತ್ನ ಮಾಡೋಣ ಎಂದು ಟ್ವೀಟ್ ಮಾಡಿದ್ದರು. ಈ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿರುವ ನಟ ಚೇತನ್ ಕಿಚ್ಚ ಸುದೀಪ್ ಅವರಿಗೆ ಬುದ್ಧಿ ಮಾತನ್ನು ಹೇಳಿದ್ದಾರೆ.

ನಟ ಚೇತನ್ ಸುದೀಪ್ ಅವರಿಗೆ ಪ್ರತಿಕ್ರಿಯೆ ನೀಡುತ್ತಾ ಸುದೀಪ್ ಸರ್ ಸಿನಿಮಾ ರಂಗದಲ್ಲಿನ ನಿಮ್ಮ ಕೆಲಸವನ್ನು ಗೌರವಿಸುತ್ತೇನೆ. ಇಬ್ಬರು ವೈದ್ಯರ ಮಗನಾಗಿರುವ ನಾನು, ನಮ್ಮ ವೈದ್ಯಕೀಯ ಸಿಬ್ಬಂದಿಗೆ ಹೊಗಳಿಕೆ ಅಗತ್ಯವಿದೆ ಎಂಬುದನ್ನು ಒಪ್ಪುತ್ತೇನೆ. ಆದರೆ ಅದು ಅವೈಜ್ಞಾನಿಕ ಎನರ್ಜಿ ಮೆಡಿಸನ್ ಗಳಂತಹ ಸಿದ್ಧಾಂತಗಳನ್ನು ಹರಡುವ ಮೂಲಕ ಅಲ್ಲ. ಇವು ನಮ್ಮನ್ನು ಮೂಢನಂಬಿಕೆಗಳ ಹಾದಿಗೆ ಕೊಂಡೊಯ್ಯುವುದು ಹಾಗೂ ತಪ್ಪು ಮಾಹಿತಿಯನ್ನು ನೀಡದಂತಾಗುತ್ತದೆ ಎಂದು ಬುದ್ಧಿ ಮಾತನ್ನು ಹೇಳಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here