ನಟ‌ ಕಿಚ್ಚ ಸುದೀಪ್ ಅವರ ಟ್ವಿಟರ್ ನ ಡಿಪಿ ಬದಲಾಗಿತ್ತು. ಇದ್ದಕ್ಕಿದ್ದ ಹಾಗೆ ಡಿಪಿಯಲ್ಲಿ ಬೇರೆಯವರ ಫೋಟೋ ನೋಡಿ ಆಶ್ಚರ್ಯ ಆಗಿರಬಹುದು ಕೆಲವರಿಗೆ. ಆದರೆ ಸುದೀಪ್ ಅವರು ಸಾವನ್ನಪ್ಪಿ ಎಲ್ಲರನ್ನೂ ಅಗಲಿದ ತಮ್ಮ ಅಭಿಮಾನಿಯೊಬ್ಬರ ಫೋಟೋವನ್ನು ಟ್ವಿಟರ್ ಡಿಪಿ ಗೆ ಹಾಕಿ ಸಂತಾಪವನ್ನು ಸೂಚಿಸಿದ್ದಾರೆ. ನಟ ಕಿಚ್ಚ ಸುದೀಪ್ ಅವರ ಅಪಾರವಾದ ಅಭಿಮಾನಿಗಳಲ್ಲಿ ಸುಮಾರು ವರ್ಷಗಳಿಂದಲೂ ತನ್ನನ್ನು ತಾನು ಸುದೀಪ್ ಅವರ ದೊಡ್ಡ ಅಭಿಮಾನಿಯಾಗಿ ಗುರ್ತಿಸಿಕೊಂಡಿದ್ದ ನಂದೀಶ್ ಎನ್ನುವವರು ಎರಡು ದಿನಗಳ ಹಿಂದೆ ದುರಾದೃಷ್ಟವಶಾತ್ ಅಪಘಾತವೊಂದರಲ್ಲಿ ಸಾವನ್ನಪ್ಪಿದ್ದು, ಅಭಿಮಾನಿಯ ಸಾವಿಗೆ ಕಂಬನಿ ಮಿಡಿದ ಸುದೀಪ್ ಅವರು ಅಭಿಮಾನಿಯ ಫೋಟೋವನ್ನ ಟ್ವಿಟರ್ ಡಿಪಿ ಆಗಿ ಬದಲಾಯಿಸಿದ್ದಾರೆ.

ನಂದೀಶ್ ಅವರು ಸುದೀಪ್ ಅವರ ಅಭಿಮಾನಿ ಮಾತ್ರವಲ್ಲದೇ ಅವರಿಗೆ ಆತ್ಮೀಯರು ಹಾಗೂ ಸಹೋದರನಂತೆ ಇದ್ದವರು. ಅಪಘಾತದಲ್ಲಿ ನಂದೀಶ್ ಅವರು ನಿಧನರಾದರು ಎಂಬ ಸುದ್ದಿ ತಿಳಿದು ಸುದೀಪ್ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ತಮ್ಮ ದುಃಖವನ್ನು ಹಂಚಿಕೊಂಡಿರುವುದು ಮಾತ್ರವಲ್ಲದೆಣ ಅಗಲಿದ ಅಭಿಮಾನಿಯ ಫೋಟೋವನ್ನು ಟ್ವಿಟ್ಟರ್ ಡಿಪಿ ಯಲ್ಲಿ ಹಾಕಿ ಸಂತಾಪ ಸೂಚಿಸಿದ್ದಾರೆ. ತಮ್ಮ ಟ್ವೀಟ್ ನಲ್ಲಿ ಅವರು ಫೋಟೋ ಜೊತೆಗೆ ಒಂದು ಭಾವನಾತ್ಮಕ ಪೋಸ್ಟ್ ಕೂಡಾ ಮಾಡಿದ್ದಾರೆ.

ನನ್ನ ಆತ್ಮೀಯ ಪ್ರೀತಿಯ ಸಹೋದರ ನಂದೀಶ್ ಅವರು ಇನ್ನಿಲ್ಲ ಎಂಬುದನ್ನು ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ. ವರ್ಷಗಳಿಂದ ನಮ್ಮೊಂದಿಗೆ ಇದ್ದರು. ನಿಜಕ್ಕೂ ನನ್ನ ಸಹೋದರನನ್ನು ನಾನು ಮಿಸ್ ಮಾಡಿಕೊಳ್ಳುತ್ತೇನೆ. ಇದೊಂದು ನಿಜವಾಗಿಯೂ ಭರಿಸಲಾಗದ ನಷ್ಟ. ಅವರ ಕುಟುಂಬಕ್ಕೆ ಈ ನೋವನ್ನು ಭರಿಸುವ ಶಕ್ತಿ ಆ ದೇವರು ನೀಡಲಿ ಎಂದಿದ್ದಾರೆ. ಸುದೀಪ್ ಅವರು
ಮೃತ ಅಭಿಮಾನಿಯ ಮನೆಗೆ ಕೂಡಾ ಇಂದು ಬೆಳಿಗ್ಗೆ ಭೇಟಿ ನೀಡಿ, ಅವರ ಕುಟುಂಬಕ್ಕೆ ಸಾಂತ್ವನ‌ ನೀಡುವ ಪ್ರಯತ್ನ ಮಾಡಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here