ಅವದೂತ ಎಂದೇ ಇತ್ತೀಚಿನ ವರ್ಷಗಳಲ್ಲಿ ಗುರುತಿಸಲ್ಪಟ್ಟಿದ್ದಾರೆ ವಿನಯ್ ಗುರೂಜಿ. ನಾಡಿನಲ್ಲಿ ಪ್ರಮುಖ ರಾಜಕಾರಣ ಕೂಡಾ ವಿನಯ್ ಗುರೂಜಿಯವರ ಆಶೀರ್ವಾದವನ್ನು ಪಡೆಯಲು ಹೋಗುವುದನ್ನು ನಾವೆಲ್ಲಾ ಸುದ್ದಿ ಮಾದ್ಯಮಗಳಲ್ಲಿ ಗಮನಿಸಿಯೇ ಇದ್ದೇವೆ‌. ಅಲ್ಲದೆ ಆಗಾಗ ವಿನಯ್ ಗುರೂಜಿಗಳು ನೀಡುವ ಹೇಳಿಕೆಗಳು ಕೂಡಾ ಚರ್ಚೆಗೆ ಕಾರಣವಾಗಿರುವುದು ಕೂಡಾ ವಾಸ್ತವ ಸಂಗತಿ. ಇಂತಹ ವಿನಯ್ ಗುರೂಜಿ ಅವರು ಸಿನಿಮಾ ನಟನ ಸಿನಿಮಾಗಳ ಬಗ್ಗೆ ಮಾತಾಡುತ್ತಾ ಮಾಡಿರುವ ವಿಡಿಯೋ ಒಂದು ಗಮನ ಸೆಳೆದಿದೆ. ಈ ವಿಡಿಯೋ ಹಿಂದೆ ಯಾವಾಗಲೋ ಮಾಡಿರುವುದು. ಆದರೆ ಇದರಲ್ಲಿ ವಿನಯ್ ಗುರೂಜಿ ಅವರು ಹೇಳಿರುವ ಮಾತುಗಳು ನಟನ ಸಿನಿಮಾಗಳ ಕುರಿತಾಗಿ ಎಂಬುದು ಸ್ಪಷ್ಟ.

ವಿಡಿಯೋದಲ್ಲಿ ವಿನಯ್ ಗುರೂಜಿ ಅವರು ಕುಳಿತು ಮಾತಾನಾಡುತ್ತಿದ್ದರೆ, ಅಲ್ಲಿ ಕೆಲವರು ಅವರ ಮಾತು ಕೇಳಿ ನಗುತ್ತಿರುವುದು ಸ್ಪಷ್ಟವಾಗಿ ಕೇಳುತ್ತದೆ‌. ಗುರೂಜಿಗಳು ತಮ್ಮ ಮಾತಿನಲ್ಲಿ ನಟನಾ ಸಿನಿಮಾ ಹೆಸರು ಹೇಳುತ್ತಾ, ಆ ನಟನ ಸಿನಿಮಾಗಳ ಬಗ್ಗೆ ಹೇಳಿದ್ದವರ ಬಗ್ಗೆ ವ್ಯಂಗ್ಯವಾಡಿದ್ದಾರೆ. ಇಷ್ಟಕ್ಕೂ ಗುರೂಜಿಗಳು ಇಲ್ಲಿ ಯಾರ ಬಗ್ಗೆ ಮಾತನಾಡಿದ್ದಾರೆ ಎಂದು ಸ್ಯಾಂಡಲ್ ವುಡ್ ಮಾತ್ರವಲ್ಲದೆ, ಪರ ಭಾಷೆಗಳಲ್ಲೂ ಕೂಡಾ ತನ್ನ ನಟನೆಯ ಪ್ರತಿಭೆಯಿಂದ ಹೆಸರು ಗಳಿಸಿರುವ ನಟ ಕಿಚ್ಚ ಸುದೀಪ್ ಅವರ ಸಿನಿಮಾಗಳ ಬಗ್ಗೆ ಎಂಬುದು ಬಹಳ ರೋಚಕವಾಗಿದೆ.

ವಿನಯ್ ಗುರೂಜಿ ಅವರಿಗೆ ಸುದೀಪ್ ಸಿನಿಮಾ ನೋಡಿ ಬಂದ ಹುಡುಗರು ಸಿನಿಮಾ ನೋಡ್ತಾ ಇದ್ದರೆ ಕಾಲು ಕೈ, ಹಾಗೂ ರೋಮ ಎಲ್ಲಾ ಎದ್ದು ನಿಲ್ಲುತ್ತಂತೆ ಎಂದು ಹೇಳಿದ್ರಂತೆ, ಅಲ್ಲದೆ ಮಾಣಿಕ್ಯ ಅಂತೆ, ಹೆಬ್ಬುಲಿ ಅಂತೆ, ಅವನು ಹೆಬ್ಬುಲಿ ಅಂತೆ , ಸರಿಯಾದ ಹುಲಿ ಬಂತು ಎಂದ್ರೆ ಅವರು ಓಡ್ತಾರೆ ಎಂದು ಹೇಳುವ ಮೂಲಕ ವಿನಯ್ ಗುರೂಜಿಗಳು ಹಾಸ್ಯ ಮಾಡಿರುವುದನ್ನು ಈ ವಿಡಿಯೋದಲ್ಲಿ ನೋಡಬಹುದಾಗಿದೆ. ಹಿಂದೆ ಯಾವಾಗಲೋ ಮಾಡಿರುವ ವಿಡಿಯೋ ಇದಾದರೂ ಕೂಡಾ ಎಲ್ಲರ ಗಮನವನ್ನು ಸೆಳೆದಿದೆ.‌ ಈ ವಿಡಿಯೋ ನೋಡಿ..

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here