ಬಿಗ್ ಬಾಸ್ ಸೀಸನ್ ಏಳರ ಸಂಬಂಧಿತ ನಡೆದ ಪತ್ರಿಕಾಗೋಷ್ಠಿಯಲ್ಲಿ ಬಿಗ್ ಬಾಸ್ ಶೋನ ನಿರೂಪಕ ನಟ‌ ಕಿಚ್ಚ ಸುದೀಪ್ ಅವರು ಮಾತನಾಡುತ್ತಾ, ಈ ಹಿಂದೆ ಬಿಗ್ ಬಾಸ್ ಸ್ಪರ್ಧಿಯಾಗಿದ್ದ ನಟ, ನಿರ್ದೇಶಕ ಹುಚ್ಚ ವೆಂಕಟ್ ಬಗ್ಗೆ ಮಾತನಾಡಿದ್ದಾರೆ. ಸುದೀಪ್ ಅವರು ಮಾತನಾಡುತ್ತಾ ಹುಚ್ಚ ವೆಂಕಟ್ ಅವರಿಗೆ ಸಹಾಯದ ಅವಶ್ಯಕತೆ ಇದೆ ಎಂದು ಹೇಳಿದ್ದಾರೆ.
“ಬಿಗ್ ಬಾಸ್ ನಿಂದ ನೀವೇನಾದ್ರು ಕಲಿತೀರಿ ಅಂದ್ರೆ ಅದೂ ನಿಮಗೆ ಬಿಟ್ಟಿದ್ದು. ಆದರೆ ಹುಚ್ಚ ವೆಂಕಟ್ ಗೆ ಸಹಾಯದ ಅವಶ್ಯಕತೆ ಇದೆ ಅನಿಸುತ್ತಿದೆ. ಹುಚ್ಚ ವೆಂಕಟ್ ಕೆಟ್ಟ ವ್ಯಕ್ತಿಯಂತೂ ಅಲ್ಲ ಎಂದಿದ್ದಾರೆ‌ ಸುದೀಪ್ ಅವರು.

ಹುಚ್ಚ ವೆಂಕಟ್ ಅವರ ಮಾತಲ್ಲಿ ಒರಟುತನವಿದೆ, ಆದರೆ ಅನಾವಶ್ಯಕವಾಗಿ ಮಾತನಾಡುವವರಲ್ಲ. ಏನೋ ಹೇಳಲು ಇಷ್ಟಪಡುತ್ತಾರೆ ಆದ್ರೆ ಅವರು ಹೇಳುವ ರೀತಿ ತಪ್ಪಿರ ಬಹುದೆಂದು ಹೇಳಿದ್ದಾರೆ.
ತಪ್ಪು ತುಂಬ ಜನರಲ್ಲಿ ಇರುತ್ತದೆ. ಅಲ್ಲದೆ ಒಬ್ಬ ವ್ಯಕ್ತಿ ಒಳ್ಳೆಯವನಾಗಲು ಹೇಗೆ ಅನೇಕರು ಕಾರಣ ಆಗ್ತಾರೋ,‌ಅದೇ ತರ ಕೆಟ್ಟವನಾಗೋದಿಕ್ಕೂ ಅನೇಕರು ಕಾರಣ‌ ಆಗಿರ್ತಾರೆ ಎಂದು ಸುದೀಪ್ ಅವರಹ ಹೇಳಿದ್ದು, ಹುಚ್ಚ ವೆಂಕಟ್ ಅವರಿಗೆ ನೆರವಿನ ಅಗತ್ಯ ಇದೆ ಎಂದಿದ್ದಾರೆ.

ಜೀವನದಲ್ಲಿ ನಾವು ಅಂದುಕೊಂಡಿದ್ದು ಅದು ನಡೆಯದೆ‌ ಇದ್ದಾಗ , ಆ ನೋವುಗಳು ಏನೇನೋ ಕೆಲಸವನ್ನು ಮಾಡಿಸುತ್ತವೆ. ಎಲ್ಲರು ಕುಳಿತಿರೋ‌ ಕಡೆಯಿಂದ ತಪ್ಪು ಅಂತ ಹೇಳಬಹುದು, ಅದು ಸುಲಭ. ಆದರೆ ಅವರ ಮನಸ್ಥಿತಿ ಹೇಗಿರುತ್ತೆ ಎನ್ನುವುದನ್ನು ಯಾರಿಗೂ ಗೊತ್ತಿರೋದಿಲ್ಲ ಎಂದು ಹುಚ್ಚ ವೆಂಕಟ್ ಅವರ ಇತ್ತೀಚಿನ ವರ್ತನೆ ಬಗ್ಗೆ ಸುದೀಪ್ ಅವರು ತಮ್ಮ ಪ್ರತಿಕ್ರಿಯೆ ನೀಡುತ್ತಾ‌ ಮಾತನಾಡಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here