ಲಕ್ಷುರಿ ಬಜೆಟ್ ಟಾಸ್ಕ್ ರಣರಂಗ ಬಿಗ್ ಬಾಸ್ ಸೀಸನ್ – 07 ರಲ್ಲಿ ಒಂದು ಗಲಭೆಯನ್ನೇ ಹುಟ್ಟು ಹಾಕಿತ್ತು. ಬಿಗ್ ಹೌಸ್ ರಣರಂಗ ಟಾಸ್ಕ್ ನ ವೇಳೆಯಲ್ಲಿ ರಣ ಕಣವಾಗಿಯೇ ಪರಿವರ್ತನೆ ಯಾಗಿತ್ತು. ಅದರಲ್ಲೂ ಅಂದು ಎಲ್ಲದಕ್ಕಿಂತ ದೊಡ್ಡ ಗಲಾಟೆ ಎದ್ದ ವಿಷಯ ತೆಂಗಿನಕಾಯಿಯದು. ಈ ರಂಪಾಟಕ್ಕೆ ಕಾರಣವಾಗಿದ್ದು ಜೈ ಜಗದೀಶ್ ಅವರು. ಈ ವಿಷಯದ ಬಗ್ಗೆ ಈ ವೀಕೆಂಡ್ ನ ವಾರದ ಕಥೆ‌ ಕಿಚ್ಚನ ಜೊತೆಯಲ್ಲಿ ಚರ್ಚೆ ಕೂಡಾ ನಡೆಯಿತು, ಸುದೀಪ್ ಅವರು ಇದರ ಬಗ್ಗೆ ಪಂಚಾಯಿತಿ ನಡೆಸಿ ಯಾರದು ತಪ್ಪು ಎಂಬುದನ್ನು ಕೂಡಾ ಮಾತನಾಡಿದರು.

ಟಾಸ್ಕ್ ನಡೆಯುವಾಗ ತಮ್ಮ ತಂಡದ ಗೋಪುರವನ್ನು ಉಳಿಸಿಕೊಳ್ಳಲು ಜೈ ಜಗದೀಶ್ ಅವರು ತಮ್ಮ ಕೈಯಲ್ಲಿ ತೆಂಗಿನಕಾಯಿ ಹಿಡಿದುಕೊಂಡಿದ್ದರು. ಎದುರಾಳಿ ತಂಡ ಅದನ್ನು ಬೀಳಿಸಲು ಬಾಲ್ ಗಳನ್ನು ಎಸೆಯುತ್ತಿದ್ದರು. ಆಗ ಎದುರಾಳಿಗಳನ್ನು ತಡೆಯಲು ಜೈ ಜಗದೀಶ್ ಅವರು ತಮ್ಮ ಕೈಲಿದ್ದ ತೆಂಗಿನಕಾಯಿಯನ್ನು ಚೈತ್ರ ಕೊಟ್ಟೂರ್ ಅವರ ಕಾಲಿನ ಬಳಿ ಎಸೆದರು. ಅದಾದ ನಂತರ ಒಂದು ದೊಡ್ಡ ಗಲಾಟೆಯೇ ನಡೆದಿತ್ತು. ಈ ವಿಚಾರದ ಬಗ್ಗೆ ಮಾತನಾಡಿದ ಕಿಚ್ಚ ಸುದೀಪ್ ಅವರು ಜೈ ಜಗದೀಶ್ ಅವರು ಮಾಡಿದ್ದು ತಪ್ಪು ಎಂದು ಹೇಳಿದರು.

ಆಗ ಜೈ ಜಗದೀಶ್ ಟಾಸ್ಕ್ ನಲ್ಲಿ ತೆಂಗಿನಕಾಯಿ ಏಕೆ ಕೊಟ್ಟರು ಅನ್ನೋದು ಗೊತ್ತಿಲ್ಲ. ನಾನು ಎದುರಾಳಿ ತಂಡದವರನ್ನು ತಡೆಯಲು ತೆಂಗಿನಕಾಯಿ ಹಿಡಿದು ಹೆದರಿಸುತ್ತಿದ್ದೆ ಅಷ್ಟೇ. ಹೊಡೆಯುವ ಉದ್ದೇಶ ನನಗೆ ಇರಲಿಲ್ಲ. ಆದರೆ ಗೋಪುರ ಬೀಳಿಸಲು ಬಂದಾಗ ನಾನು ತೆಂಗಿನಕಾಯಿಯನ್ನು ನೆಲಕ್ಕೆ ಎಸೆದೆ ಎಂದು ಹೇಳುತ್ತಾ, ನನ್ನಿಂದ ತಪ್ಪಾಗಿದೆ ಕ್ಷಮಿಸಿ ಎಂದು ಕೇಳುವ ಮೂಲಕ ತಮ್ಮ ತಪ್ಪಿಗೆ ಎಲ್ಲರ ಮುಂದೆ ಕ್ಷಮೆ ಕೇಳಿ ತೆಂಗಿನಕಾಯಿ ವಿಚಾರಕ್ಕೊಂದು ಕೊನೆ ಹಾಡಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here