ಮಕರ ಸಂಕ್ರಾಂತಿ ಗೆ ಒಂದು ದಿನ ಇರುವಾಗಲೇ ಸ್ಯಾಂಡಲ್ ವುಡ್ ನ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಬಹು ನಿರೀಕ್ಷಿತ ಚಿತ್ರವಾಗಿರುವ
ಕೋಟಿಗೊಬ್ಬ 3 ರ ಮೋಷನ್ ಪೋಸ್ಟರ್ ಇಂದು ಬಿಡುಗಡೆ ಆಗಿದ್ದು, ಇದು ಅಭಿಮಾನಿಗಳಿಗೆ ಸಂಕ್ರಾಂತಿ ಕೊಡುಗೆಯಾಗಿದ್ದು, ಸಾಕಷ್ಟು ಸಂತಸವನ್ನು ಇದು ತಂದಿದೆ. ಸ್ವತಃ ಕಿಚ್ಚ ಸುದೀಪ್ ಅವರು ಕೂಡಾ ತಮ್ಮ ಟ್ವಿಟರ್ ನಲ್ಲಿ ಮೋಷನ್ ಪೋಸ್ಟರ್ ರಿಲೀಸ್ ಬಗ್ಗೆ ಟ್ವೀಟ್ ಒಂದನ್ನು ಮಾಡಿದ್ದಾರೆ. ಪೋಸ್ಟರ್ ಆನಂದ್ ಆಡಿಯೋ ಅವರ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದ್ದು, ಈಗಾಗಲೇ ಎಲ್ಲರ ಗಮನ ಸೆಳೆದಿದೆ‌.

ಬಿಡುಗಡೆ ಆಗಿರುವ ಮೋಷನ್ ಪೋಸ್ಟರ್ ನಲ್ಲಿ ಸುದೀಪ್ ಅವರ ಲುಕ್ ಭರ್ಜರಿಯಾಗಿದ್ದು, ಕಣ್ಣಿಗೆ ಕೂಲಿಂಗ್ ಗ್ಲಾಸ್ ತೊಟ್ಟು, ಹ್ಯಾಟ್ ಹಾಕಿ, ಕೈಯಲ್ಲಿ ಸಿಗಾರ್ ಹಿಡಿದಿರುವ ಸೂಪರ್ ಲುಕ್ ಮಾಸ್ ಆಗಿ ಗಮನವನ್ನು ಸೆಳೆದಿದೆ. ಪೋಸ್ಟರ್ ನ ಹಿನ್ನೆಲೆಯಲ್ಲಿ ಕೇಳಿ ಬರುವ ಸಂಗೀತ ಕೂಡಾ ಜಬರ್ದಸ್ತ್ ಆಗಿ ಮೂಡಿ ಬಂದಿದೆ. ಅಭಿಮಾನಿಗಳಂತೂ ಕಿಚ್ಚ ಸುದೀಪ್ ಅವರ ಈ ಹೊಸ ಲುಕ್ ನೋಡಿ ಸಿಕ್ಕಾಪಟ್ಟೆ ಖುಷ್ ಆಗಿದ್ದು, ಪೋಸ್ಟರ್ ಅವರ ಮೇಲೆ ಮೋಡಿ ಮಾಡಿರುವುದು ಕೂಡಾ ನಿಜ.

ಬಿಡುಗಡೆಯಾಗಿರುವ ಮೋಷನ್ ಪೋಸ್ಟರ್ ಅನ್ನು ಈಗಾಗಲೇ ಯೂಟ್ಯೂಬ್ ನಲ್ಲಿ 50 ಸಾವಿರಕ್ಕೂ ಹೆಚ್ಚಿನ  ಜನರು ಮೆಚ್ಚಿಕೊಂಡಿದ್ದರೆ, 4.5 ಲಕ್ಷಕ್ಕೂ ಜನರಿಂದ ವೀಕ್ಷಣೆ ಮಾಡಲ್ಪಟ್ಟಿದೆ‌. ಕೋಟಿಗೊಬ್ಬ 3 ಸಿನಿಮಾವನ್ನು ಶಿವ ಕಾರ್ತಿಕೇಯ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿದ್ದು, ಸೂರಪ್ಪ ಬಾಬು ಅವರು ಈ ಸಿನಿಮಾಕ್ಕೆ ನಿರ್ಮಾಪಕರಾಗಿದ್ದಾರೆ. ಮಡೋನಾ ಸೆಬಾಸ್ಟಿಯನ್ ಮತ್ತು ಶ್ರದ್ಧಾ ದಾಸ್ ಅವರು ನಾಯಕಿರಾಗಿರುವ ಈ ಸಿನಿಮಾದ ಮೂಲಕ ಬಾಲಿವುಡ್ ನಟ ಆಫ್ತಾಬ್ ಶಿವದಾಸನಿ ಸ್ಯಾಂಡಲ್ ವುಡ್ ಗೆ ಅಡಿಯಿಡುತ್ತಿದ್ದಾರೆ.‌

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here