ಬಿಗ್ ಬಾಸ್ ಸೀಸನ್ 7 ರ ಈ ವಾರಾಂತ್ಯ ಸಾಕಷ್ಟು ಕುತೂಹಲಭರಿತ ಹಾಗೂ ಮನೋರಂಜನೆಯಿಂದ ಕೂಡಿತ್ತು. ವಿಶೇಷ ಎಂಬಂತೆ ಈ ವಾರ ಬಿಗ್ ಹೌಸ್ ನಲ್ಲಿ ನಾಮಿನೇಟ್ ಆಗಿದ್ದ ಏಳು ಜನರಲ್ಲಿ ಯಾರೊಬ್ಬರೂ ಕೂಡಾ ಎಲಿಮಿನೇಟ್ ಆಗಲಿಲ್ಲ. ಇದು ನೋ ಎಲಿಮಿನೇಷನ್ ವಾರಾಂತ್ಯ ಆಗಿತ್ತು. ಈ ವಾರಾಂತ್ಯದಲ್ಲಿ ವಾರದ ಕಥೆ ಕಿಚ್ಛನ ಜೊತೆ ನಡೆಯುವ ಸಂದರ್ಭದಲ್ಲಿ ಮನೆಯವರೆಲ್ಲರೂ ಕೂಡಾ ಸುದೀಪ್ ಅವರಿಗೆ ಮನವಿ ಮಾಡಿದ್ದರಿಂದ ಮನೆಯ ಒಳಕ್ಕೆ ಚಾಕ್ಲೇಟ್ ಗಳನ್ನು ಕಳುಹಿಸಲಾಗಿತ್ತು. ಆದರೆ ಕಳುಹಿಸುವ ಮುನ್ನ ಸುದೀಪ್ ಅವರ ಮನೆಯ ಯಾರಾದರೂ ಇಬ್ಬರು ಸದಸ್ಯರು ಚಾಕೊಲೇಟ್ ಬೇಡ ಎನ್ನುವುದಾದರೆ ಕಳುಹಿಸುವುದಾಗಿ ಹೇಳಿದ್ದಾರೆ.

ಈ ಷರತ್ತು ಕೇಳಿದ ಮೇಲೆ ದೀಪಿಕಾ ದಾಸ್ ಮತ್ತು ಚಂದನಾ ಅವರು ನಮಗೆ ಚಾಕೊಲೆಟ್ ಬೇಡ, ಉಳಿದವರಿಗೆ ಕಳುಹಿಸಿ ಎಂದು ಹೇಳಿದರು. ಇದಾದ ಮೇಲೆ ಮನೆಯ ಸದಸ್ಯರೆಲ್ಲರಿಗೂ ಒಂದೊಂದು ಚಾಕಲೇಟ್ ಹಾಗೂ ದೀಪಿಕಾ ಮತ್ತು ಚಂದನಾ ಅವರಿಗೆ ಎರೆಡೆರಡನ್ನು ಕಳುಹಿಸಲಾಯಿತು ಮಾತ್ರವಲ್ಲದೆ, ಮನೆಯ ಸದಸ್ಯರು ತಮಗೆ ದೊರೆತ ಚಾಕೊಲೇಟ್ ಗಳನ್ನು ಇತರರೊಂದಿಗೆ ಹಂಚಿಕೊಳ್ಳಬಾರದು ಎಂಬ ಷರತ್ತುನ್ನು ಕೂಡಾ ವಿಧಿಸಲಾಗಿತ್ತು. ಆದರೆ ಈ ವಿಷಯವನ್ನು ಪ್ರಿಯಾಂಕ ಅವರು ಅಷ್ಟು ಗಮನ ನೀಡಲಿಲ್ಲ‌.

ಬ್ರೇಕ್ ನ ಸಮಯದಲ್ಲಿ ಅವರು ಮನೆಯ ಇತರೆ ಸದಸ್ಯರ ಬಳಿ ಹೋಗಿ ತನಗೊಂದು ಪೀಸ್ ಚಾಕೊಲೇಟ್ ನೀಡುವಂತೆ ಎಲ್ಲರ ಬಳಿ ಕೇಳಿಕೊಂಡಿದ್ದಾರೆ. ಆದರೆ ನಿಯಮಕ್ಕೆ ಕಟ್ಟು ಬಿದ್ದ ಮನೆಯ ಸದಸ್ಯರು ಯಾರೂ ಕೂಡಾ ಪ್ರಿಯಾಂಕ ಅವರಿಗೆ ಚಾಕೊಲೇಟ್ ನೀಡಲಿಲ್ಲ. ವಿರಾಮದ ನಂತರ ಮತ್ತೆ ಬಂದ ಸುದೀಪ್ ಅವರು ಈ ವಿಷಯವಾಗಿ ಪ್ರಸ್ರಾಪ ಮಾಡುತ್ತಾ, ಬಿಗ್ ಬಾಸ್ ನ ನಿಯಮಗಳು ತಮಾಷೆಗಾಗಿ ಅಲ್ಲ, ಇನ್ನು ಮುಂದೆ ಮನೆಯೊಳಗಿನ ಸಿಹಿ ತಿಂಡಿಯ ಒಂದು ಸಣ್ಣ ತುಂಡು ಕೂಡಾ ಬರುವುದಿಲ್ಲ ಎಂದರು. ಆಗ ಏನೂ ಅರಿಯದ ಹಾಗೆ ಕುಳಿತಿದ್ದ ಪ್ರಿಯಾಂಕ ಅವರಿಗೆ ನಿಮ್ಮ ಅಯ್ಯೋ ಪಾಪ ಫೇಸ್ ನನ್ನ ಮುಂದೆ ವರ್ಕ್ ಆಗೋದಿಲ್ಲ ಎಂದು ಸುದೀಪ್ ಅವರು ಪ್ರಿಯಾಂಕ ಅವರಿಗೆ ಮಾತಿನಲ್ಲೇ ಹೇಳಿದರು.

ಇದಾದ ನಂತರ ಪ್ರಿಯಾಂಕ ಅವರು ಆ ವಿಷಯಕ್ಕಾಗಿ ಕ್ಷಮಾಪಣೆ ಕೇಳುತ್ತಾ, ನನ್ನಿಂದ ಮನೆಯವರಿಗೆ ಸಿಹಿ ಮಿಸ್ ಆಗುವುದು ಬೇಡ ಎಂದು ಹೇಳಿದ್ದು ಮಾತ್ರವಲ್ಲದೇ, ಇನ್ನು ಮುಂದೆ ಇಂತಹ ತಪ್ಪು ಮಾಡುವುದಿಲ್ಲವೆಂದು ಅವರು ಹೇಳಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here