ನಟ ಸುದೀಪ್ ಅವರ ಸಿ‌ನಿಮಾಗಳ ಬಗ್ಗೆ ವ್ಯಂಗ್ಯವಾಡಿದ್ದ ವಿನಯ್ ಗುರೂಜಿ ಅವರ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಹಿನ್ನೆಲೆಯಲ್ಲಿ ವಿನಯ್ ಗುರೂಜಿ ವಿರುದ್ಧ ಸಾಕಷ್ಟು ಟೀಕೆಗಳು ಕೇಳಿ ಬಂದಿತ್ತು. ಅದರಲ್ಲೂ ಕಿಚ್ಚನ ಅಭಿಮಾನಿಗಳು ಗುರೂಜಿಯವರ ಮಾತುಗಳಿಗೆ ಕೆಂಡಾಮಂಡಲವಾಗಿದ್ದರು.`ಹೆಬ್ಬುಲಿ’ ವಿಚಾರದಲ್ಲಿ ನಟ ಕಿಚ್ಚ ಸುದೀಪ್ ಅವರ ಕಾಲೆಳೆಯುವ ಪ್ರಯತ್ನ ಮಾಡಿದ್ದ ವಿನಯ್ ಗುರೂಜಿಗೆ ಈಗ ಮೈಸೂರಿನ ವಾಲ್ಮೀಕಿ ಸಮುದಾಯದ ಅರ್ಜುನ ಗುರೂಜಿ ತಿರುಗೇಟು ನೀಡುವ ಮೂಲಕ ಇಬ್ಬರು ಅವಧೂತರ ಮಧ್ಯೆ ವಾರ್ ಆರಂಭವಾಗಿದೆ.

ಸರಿಯಾದ ಹುಲಿ ಬಂದ್ರೆ ಓಡಿಹೋಗ್ತಾನೆ ಅವ ಹೆಬ್ಬುಲಿನಾ ? ಸುದೀಪ್ ಗೆ ಅಣಕಿಸಿದ ವಿನಯ್ ಗುರೂಜಿ.. ವೀಡಿಯೊ ವೈರಲ್..

ವಿನಯ್ ಗುರೂಜಿ ಅವರು ಹೆಬ್ಬುಲಿಯಂತೆ, ಮಾಣಿಕ್ಯ ಅಂತೆ, ನಿಜವಾದ ಹುಲಿ ಬಂದರೆ ಓಡಿ ಹೋಗ್ತಾರೆ ಎಂದು ಹೇಳುವ ಸುದೀಪ್ ಅವರ ಬಗ್ಗೆ ವ್ಯಂಗ್ಯವಾಡಿದ್ದರು. ಇದಕ್ಕೆ ಉತ್ತರವಾಗಿ ಮೈಸೂರಿನ ವಾಲ್ಮೀಕಿ ಸಮುದಾಯದ ಅರ್ಜುನ್ ಗುರೂಜಿ ಅವರು ಪ್ರತಿಕ್ರಿಯೆ ನೀಡುತ್ತಾ, ಪ್ರತಿಯೊಬ್ಬರೂ ಕಲಾವಿದನನ್ನು ಗೌರವಿಸುವುದನ್ನು ಕಲಿಯಬೇಕು. ಸುದೀಪ್ ಎಂದರೆ ವಾಲ್ಮೀಕಿ ಸಮುದಾಯದ ಹೆಮ್ಮೆ ಎಂದಿದ್ದಾರೆ. ಕನ್ಮಡದ ಮೇರು ನಟರಾದ ಡಾ. ರಾಜ್‍ಕುಮಾರ್, ಅಂಬರೀಶ್, ವಿಷ್ಣುವರ್ಧನ್ ಎಲ್ಲರೂ ಚಲನಚಿತ್ರದ ಮೂಲಕ ಭಾಷೆಯನ್ನು ಬೆಳೆಸಿದವರು.

ಚಲನಚಿತ್ರ ಎಂದರೆ ಅದು ಭಾಷೆಯ ಕಲೆಯನ್ನು ತೋರಿಸು ಮಾದ್ಯಮ. ಹೀಗಾಗಿ ಕಲಾವಿದನನ್ನು ಗೌರವಿಸಬೇಕು ಎಂದು ವಿನಯ್ ಗುರೂಜಿ ವಿರುದ್ಧ ತಿರುಗೇಟು ನೀಡಿದ್ದಾರೆ. ವಿನಯ್ ಗುರೂಜಿ ಅವರ ಒಂದು ವಿಡಿಯೋ ಕಿಚ್ಚ ಸುದೀಪ್ ಅವರ ಅಭಿಮಾನಿಗಳನ್ನು ಕೆರಳಿಸಿತ್ತು. ಈಗ ಅದರ ಬೆನ್ನಲ್ಲೇ ಅವರಿಗೆ ಅರ್ಜುನ್ ಗುರೂಜಿ ಅವರು ಹೇಳಿರುವ ಮಾತುಗಳು ಗಮನ ಸೆಳೆದಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here