ಇನ್ಫೋಸಿಸ್ ಪ್ರತಿಷ್ಟಾನದ ಅಧ್ಯಕ್ಷೆ ಸುಧಾಮೂರ್ತಿಯವರ ಹೆಸರು ಕೇಳಿದೊಡನೆ ತಟ್ಟನೆ ನೆನಪಾಗುವುದು ಅವರ ಸಮಾಜ ಸೇವೆ. ಸಮಾಜ ಪರ ಕಾರ್ಯಗಳಲ್ಲಿ ಸದಾ ಮಂಚೂಣಿಯಲ್ಲಿರುವ ಸುಧಾ ಮೂರ್ತಿಯವರು ತಾನು ಸರಳವಾದರೂ, ಸಮಾಜದ ಒಳಿತಿಗಾಗಿ ಎಂತಹ ಸಂಕೀರ್ಣವಾದ ಕೃಷಿ ಮಾಡಲು ಕೂಡಾ ಮುಂದಿರುತ್ತಾರೆ. ಅದೇ ಹಾದಿಯಲ್ಲಿ ನಡೆದು ಈಗ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿರುವ ರಾಜ್ಯದ ಸುಪ್ರಸಿದ್ಧ ಗಿರಿಧಾಮವಾದ ನಂದಿ ಬೆಟ್ಟದಲ್ಲಿ ಕೂಡಾ ತಮ್ಮ ಸೇವೆಯ ಹಸ್ತವನ್ನು ಚಾಚಿದ್ದಾರೆ ಸುಧಾ ಮೂರ್ತಿ. ಈ ಪ್ರಸಿದ್ಧ ಗಿರಿಧಾಮಕ್ಕೂ ತಮ್ಮ ಕೊಡುಗೆಯನ್ನು ನೀಡಿದ್ದಾರೆ . ಇತ್ತೀಚಿಗಷ್ಟೇ ಅವರ ಈ ಸೇವೆಯನ್ನು ಲೋಕಾರ್ಪಣೆ ಮಾಡಲಾಗಿದ್ದು, ಅವರ ಈ ಕಾರ್ಯ ಮೆಚ್ಚುಗೆಗೆ ಪಾತ್ರವಾಗಿದೆ‌.

ಸುಧಾ ಮೂರ್ತಿಯವರು ತಮ್ಮ ಫೌಂಡೇಷನ್ ಮೂಲಕ ನಂದಿ ಗಿರಿಧಾಮದಲ್ಲಿ ಸುಮಾರು 60 ರಿಂದ 70 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಗಿರಿಧಾಮದ ಕಾಲುದಾರಿಗಳು ಹಾಗೂ ತಡೆಗೋಡೆಗಳ ನವೀಕರಣ ಹಾಗೂ ದುರಸ್ತಿ ಕಾರ್ಯಗಳನ್ನು ಮಾಡಿಸಿದ್ದಾರೆ. ಒಂದು ಸುಸಜ್ಜಿತ ವ್ಯವಸ್ಥೆಯನ್ನು ಅಲ್ಲಿ ನೀಡಲು ಸಹಾಯವನ್ನು ಮಾಡಿದ್ದಾರೆ. ನಂದಿ ಗಿರಿಧಾಮವು ವಿಶ್ವವಿಖ್ಯಾತ ಗಿರಿಧಾಮವೆಂಬ ಹೆಗ್ಗಳಿಕೆಯನ್ನು ಪಡೆದಿದೆ. ಆದ್ದರಿಂದಲೇ ರಜಾ ದಿನಗಳಲ್ಲಿ ಇಲ್ಲಿ ಜನದಟ್ಟಣೆ ಬಹಳವಾಗಿರುತ್ತದೆ.

ಈ ಹಿಂದೆ ಸುಧಾಮೂರ್ತಿಯವರು ಇಲ್ಲಿಗೆ ಭೇಟಿ ನೀಡಿದ್ದಾಗ ಇಲ್ಲಿನ ಕಾಲುದಾರಿ ಹಾಗೂ ತಡಗೋಡೆಗಳ ದುಸ್ಥಿತಿ ನೋಡಿ, ಅದನ್ನು ತಮ್ಮ ಪ್ರತಿಷ್ಟಾನದ ಮೂಲಕ ಸುಧಾರಿಸುವ ಯೋಚನೆಯನ್ನು ಮಾಡಿ, ನಂತರ ಅದನ್ನು ಕಾರ್ಯರೂಪಕ್ಕೆ ತಂದಿದ್ದಾರೆ. ಒಟ್ಟಾರೆ ಅವರ ಈ ಕಾಳಜಿಯಿಂದ ನಂದಿ ಗಿರಿಧಾಮವು ಮತ್ತಷ್ಟು ಸುಸಜ್ಜಿತವಾದ ವ್ಯವಸ್ಥೆ ಪಡೆಯುವಲ್ಲಿ ಯಶಸ್ವಿಯಾಗಿದೆ. ಸುಧಾ ಮೂರ್ತಿಯವರ ಇಂತಹ ಸಮಾಜಮುಖಿ ಕಾರ್ಯಗಳು ಹೀಗೆ ನಡೆಯಲಿ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here