ಸರಳತೆ ಹಾಗೂ ಸಾತ್ವಿಕತೆಗೆ ಸದಾ ಹೆಸರಾದವರು ಇನ್ಫೋಸಿಸ್ ಸುಧಾ ಮೂರ್ತಿ ಅವರು. ಕರ್ನಾಟಕದಲ್ಲಿ ಇವರೆಂದರೆ ಜನರಿಗೆ ಮಾತ್ರವಲ್ಲ ರಾಜಕಾರಣಿಗಳು ಹಾಗೂ ಸೆಲೆಬ್ರಿಟಿ ಗಳಿಗೂ ಕೂಡಾ ಗೌರವ. ಜನರು ಇವರನ್ನು ಅಮ್ಮಾ ಎಂದು ಕರೆದು ಗೌರವಿಸುತ್ತಾರೆ. ಐಟಿ ಕಂಪನಿಯೊಂದರ ಒಡತಿ, ನಾಡಿನ‌ ಹಿರಿಯ ಬರಹಗಾರ್ತಿ ಹಾಗೂ ಸಾಹಿತಿ, ಇದೆಲ್ಲವನ್ನೂ ಮೀರಿ ಒಬ್ಬ ಸಮಾಜ ಸೇವಕಿಯಾಗಿ ಇವರು ಮಾಡುವ ಕಾರ್ಯಗಳು ಎಲ್ಲರ ಗಮನವನ್ನು ಸೆಳೆಯುವುದರ ಜೊತೆಗೆ, ಎಲ್ಲರಲ್ಲೂ ಅವರ ಬಗ್ಗೆ ಮತ್ತಷ್ಟು ಅಭಿಮಾನ ಹಾಗೂ ಗೌರವವನ್ನು ಮೂಡಿಸುತ್ತದೆ.

ಪ್ರಸ್ತುತ ಈ ಹಿರಿಯ ಸಮಾಜ ಸೇವಕಿಯಾದಂತಹ ಇನ್ಫೋಸಿಸ್ ನ ಮುಖ್ಯಸ್ಥೆಯಾದ ಸುಧಾ ಮೂರ್ತಿಯವರ ಸಜ್ಜನಿಕೆಗೆ ಮತ್ತೊಂದು ನಿದರ್ಶನ ಸಿಕ್ಕಿದೆ. ಅವರ ಸರಳತೆಯನ್ನು ಸಾರಿ ಹೇಳುವಂತೆ ಇದೆ ಈ ವರದಿ. ಇನ್ಫೋಸಿಸ್ ಸಂಸ್ಥೆ ಬಳಿಯಲ್ಲಿ ಹಾಕಲಾಗಿದ್ದ ಕಣದಲ್ಲಿ ರಾಗಿಯನ್ನು ರಾಶಿ ಹಾಕಿ ನಡೆಸಲಾದಂತಹ ಸಾಂಪ್ರದಾಯಿಕ ಪೂಜೆಯ ಸಂದರ್ಭದಲ್ಲಿ ಸುಧಾ ಮೂರ್ತಿಯವರು ಒಬ್ಬ ಸಾಧಾರಣ ರೈತ ಮಹಿಳೆಯಂತೆ ಎಲ್ಲರ ಕಣ್ಣಿಗೆ ಕಂಡರು. ಬಹಳ ಸರಳವಾದ ಉಡುಗೆಯಲ್ಲಿ ಪೂಜೆ ಕಾರ್ಯಕ್ರಮವನ್ನು ಅವರು ನಡೆಸಿಕೊಟ್ಟರು. ಅವರಲ್ಲಿ ತಾನು ಒಂದು ಐಟಿ ಕಂಪನಿಯ ಮುಖ್ಯಸ್ಥೆ, ಒಬ್ಬ ಸಾಹಿತಿ, ಸೆಲೆಬ್ರಿಟಿ ಎನ್ನುವ ಯಾವುದೇ ಹಮ್ಮು ಬಿಮ್ಮು ಎಂದಿಗೂ ಕಾಣುವುದಿಲ್ಲ.

 

ಸುಗ್ಗಿಯ ಸಂದರ್ಭದಲ್ಲಿ ಎಲ್ಲೆಡೆ ರೈತರು ಫಸಲಿಗೆ ಹಿಂದಿನ ಕಾಲದಿಂದಲೂ ಸಾಂಪ್ರದಾಯಿಕವಾಗಿ ಪೂಜೆ ಮಾಡುತ್ತಾರೆ. ಸುಧಾ ಮೂರ್ತಿಯವರು ಇಂತಹ ಒಂದು ಸುಗ್ಗಿ ಸಾಂಪ್ರದಾಯಿಕ ಪೂಜೆಯಲ್ಲಿ ಪಾಲ್ಗೊಂಡು, ಅಲ್ಲಿ ಹಾಕಿದ್ದ ರಾಗಿಯ ಫಸಲಿನ ರಾಶಿಗೆ ಭಕ್ತಿಯಿಂದ ಪೂಜೆ ಮಾಡಿದ್ದಾರೆ. ಅವರು ಪೂಜೆ ನಡೆಸಿದ ತಲೆಬಾಗಿ ನಮಸ್ಕರಿಸಿದ ಫೋಟೋಗಳು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ, ಸುಧಾ ಮೂರ್ತಿ ಅವರ ಈ ಸರಳತೆಯಿಂದಾಗಿಯೇ ಇವರು ಬಹುಬೇಗ ಜನರಿಗೆ ಹತ್ತಿರವಾಗಿ ಅವರ ಸಮಸ್ಯೆಗಳಿಗೆ ಸ್ಪಂದಿಸುತ್ತಾರೆ.

 

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here