ಇನ್ಪೋಸಿಸ್ ಪ್ರತಿಷ್ಠಾನದ ಮುಖ್ಯಸ್ಥೆಯವರಾದ ಸುಧಾ ಮೂರ್ತಿಯವರನ್ನು ನಮ್ಮ ನಾಡಿನಲ್ಲಿ ತಿಳಿಯದವರಿಲ್ಲ. ಸರಳತೆ, ಸಜ್ಜನಿಕೆ ಹಾಗೂ ಸಹಾಯ ಹಸ್ತ ನೀಡುವುದರಲ್ಲಿ ಸದಾ ಮುಂದೆ ಇರುವ ಅವರು ಸೆಲೆಬ್ರೆಟಿ ಎನ್ನುವ ಪದಕ್ಕೆ ಹೊಸ ಅರ್ಥವನ್ನೇ ನೀಡಿದವರು. ದೇಶದ ದೊಡ್ಡ ಐಟಿ ಕಂಪನಿಯ ಮುಖ್ಯಸ್ಥೆಯಾದರೂ ಅವರ ಸರಳತೆ ಇಂದು ಹಲವರಿಗೆ ಮಾದರಿಯಾಗಬೇಕಿದೆ. ಕೇವಲ ಹಾಕಿಕೊಳ್ಳುವ ವಸ್ತ್ರಗಳಿಗೆ ಕೋಟಿ ಕೋಟಿ ಸುರಿಯುವ ಸೆಲೆಬ್ರಿಟಿಗಳಿಗೆ ಸಾಮಾನ್ಯ ಜನರಿಗೆ ಸಹಾಯ ನೀಡುವಾಗ ಅದೇ ಉದಾರತೆ ಕಾಣುವುದಿಲ್ಲ. ಇಂತಹವರ ಮುಂದೆ ಸುಧಾ ಮೂರ್ತಿಯವರು ಭಿನ್ನವಾಗಿ ನಿಲ್ಲುತ್ತಾರೆ.

ಉಡುಗೆ ತೊಡುಗೆ ಎಲ್ಲಾ ಸರಳ, ಸಾಧಾರಣ ಆದರೆ ನೀಡುವ ಸಹಾಯ ಕೋಟಿಗಳು. ಇಂತಹ ಸಹೃದಯಿಗಳು ಬಹಳ ವಿರಳ. ಈಗ ಸುಧಾ ಮೂರ್ತಿಯವರ ಒಂದು ವಿಡಿಯೋ ಲಭ್ಯವಾಗಿದೆ. ಅದರಲ್ಲಿ ಸುಧಾ ಮೂರ್ತಿ ಅವರು ದೇವಾಲಯವೊಂದರ ದೇವರ ಸೇವೆಗೆ ಹೂ ಕಟ್ಟುತ್ತಿರುವ ಹೆಂಗಸರ ಜೊತೆ ತಾವು ಕುಳಿತು ಅವರೊಟ್ಟಿಗೆ ಮಾತನಾಡುತ್ತಾ ಹೂ ಕಟ್ಟುತ್ತಿದ್ದಾರೆ. ಅಲ್ಲಿ ಸುಧಾ ಮೂರ್ತಿಯವರು ಪ್ರತ್ಯೇಕವಾಗಿಯೋ, ವಿಶೇಷವಾಗಿಯೋ ಇಲ್ಲ, ಬದಲಾಗಿ ಸಾಮಾನ್ಯರೊಳಗೆ ಸಾಮಾನ್ಯರಂತೆ ಕುಳಿತು ಹೂ ಕಟ್ಟುತ್ತಿದ್ದಾರೆ.

ತಿರುಮಲ ತಿರುಪತಿಯ ಶ್ರೀ ವೆಂಕಟೇಶ್ವರನ ದಿವ್ಯ ಸಾನಿಧ್ಯಕ್ಕೆ ಬೇಟಿ ನೀಡಿರುವ ಅವರು, ಅಲ್ಲಿ ಸ್ವಾಮಿಯವರ ಪೂಜೆ ಗಾಗಿ ಆಲಯದ ಮಹಿಳಾ ಸಿಬ್ಬಂದಿ ಹೂ ಕಟ್ಟುವ ಜಾಗಕ್ಕೆ ಹೋದ ಸುಧಾ ಮೂರ್ತಿಯವರು ಅವರೊಡನೆ ಕನ್ನಡದೊಡನೆ ಮಾತನಾಡುತ್ತಾ, ಸುಮ್ಮನೆ ಕುಳಿತಿರುವ ಬದಲು ಶ್ರೀಗಳ ಸೇವೆ ಮಾಡಲು ಬಂದೆ ಎಂದು ನಗುನಗುತ್ತಾ ಮಾತನಾಡುತ್ತಾ ಕೆಲಸದಲ್ಲಿ ತೊಡಗಿದ್ದಾರೆ. ಕೋಟಿ ಕೋಟಿ ಹಣವಿದ್ದವರು ಗಾಂಭೀರ್ಯ, ಪೊಳ್ಳು ಹೆಮ್ಮೆ ಮರೆಯುವ ಈ ಕಾಲದಲ್ಲಿ ಸುಧಾ ಮೂರ್ತಿಯವರಂತಹ ಸರಳ ಸಹೃದಯವಂತರು ಸದಾ ಜನರ ಅಭಿಮಾನವನ್ನು ಗಳಿಸಿ ಅವರ ಮನಸ್ಸಿನಲ್ಲಿ ಉಳಿಯುತ್ತಾರೆ. ಈ ವೀಡಿಯೋ ನೋಡಿ…

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here