ಬಾಲಿವುಡ್ ನ ಬಿಗ್ ಬಿ ಅಮಿತಾಬ್ ಬಚ್ಚನ್ ಅವರು ನಡೆಸಿಕೊಡುವ ಪ್ರತಿಷ್ಠಿತ ಕಾರ್ಯಕ್ರಮ ಕೌನ್ ಬನೇಗಾ ಕರೋಡ್ ಪತಿ‌. ಈಗ ಕೆಬಿಸಿ ಯ 11 ನೇ ಆವೃತ್ತಿ ನಡೆಯುತ್ತಿದ್ದು ಅದು ಕೊನೆಯ ಹಂತವನ್ನು ತಲುಪಿದೆ. ಅನಾರೋಗ್ಯದ ನಡುವೆಯೂ ಅಮಿತಾಬ್ ಅವರು ಕೊನೆಯ ಸಂಚಿಕೆಗಳ ರೆಕಾರ್ಡಿಂಗ್ ನಲ್ಲಿ ಭಾಗವಹಿಸಿದ್ದಾರೆ. ಈ ಬಾರಿಯ ಕರಮ್ ವೀರ್ ಎಪಿಸೋಡ್ ನಲ್ಲಿ ಕನ್ನಡತಿ ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆಯವರಾದ ಶ್ರೀಮತಿ ಸುಧಾ ಮೂರ್ತಿ ಅವರು ಹಾಟ್ ಸೀಟ್ ನಲ್ಲಿ ಕೂರಲಿದ್ದು, ಈಗಾಗಲೇ ಅದರ ಬಗ್ಗೆ ಒಂದು ವಿಡಿಯೋವನ್ನು ಸೋನಿ ಚಾನೆಲ್ ಪ್ರೋಮೋ ಹಾಕಿತ್ತು‌. ಈಗ ಅದರ ಬೆನ್ನಲ್ಲೇ ಖುದ್ದು ಅಮಿತಾಬ್ ಅವರು ಸುಧಾ ಮೂರ್ತಿ ಅವರನ್ನು ಭೇಟಿಯಾದ ವಿಚಾರವನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಹಂಚಿ ಕೊಂಡಿದ್ದಾರೆ.

ಸುಧಾ ಮೂರ್ತಿ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಂದರ್ಭದಲ್ಲಿ ಅವರು ಅಮಿತಾಬ್ ಬಚ್ಚನ್ ಅವರಿಗೆ ಒಂದು ವಿಶೇಷ ಉಡುಗೊರೆಯನ್ನು ನೀಡಿದ್ದಾರೆ. ಆ ವಿಶೇಷ ಉಡುಗೊರೆ ದೇವದಾಸಿಯರು ನೇಯ್ದ ಕೌದಿಯಾಗಿದೆ. ಕೌದಿಯನ್ನು ನೀಡುತ್ತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಸುಧಾ ಮೂರ್ತಿ ಅವರನ್ನು ಭೇಟಿಯಾದ ವಿಷಯದ ಬಗ್ಗೆ ಅಮಿತಾಬ್ ಅವರು ನಿನ್ನೆ 3 ಸಂಚಿಕೆಗಳನ್ನು ಚಿತ್ರೀಕರಿಸಲಾಗಿದ್ದು, ಅದರಲ್ಲಿ ಗೌರವಾನ್ವಿತ ಸುಧಾ ಮೂರ್ತಿ ಅವರ ಸಂಚಿಕೆ ಅದ್ಭುತವಾಗಿದೆ ಎಂದಿದ್ದಾರೆ.

ಅಲ್ಲದೆ ಸುಧಾಮೂರ್ತಿ ಅವರು ನನಗೆ ನೀಡಿದ ಈ ಅದ್ಭುತವಾದ ಉಡುಗೊರೆಯು ಈ ಕಾರ್ಯಕ್ರಮವನ್ನು ಸದಾ ನೆನಪಿನಲ್ಲಿ ಇಟ್ಟುಕೊಳ್ಳುವಂತೆ ಮಾಡಿದೆ ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಸುಧಾ ಮೂರ್ತಿಯವರು ಕೆಬಿಸಿ ಯಲ್ಲಿ ಭಾಗವಹಿಸಿರುವುದು ಎಲ್ಲಾ ಕನ್ನಡಿಗರಿಗೂ ಹೆಮ್ಮೆಯ ವಿಷಯವಾಗಿದೆ. ಎಲ್ಲರೂ ಈ ಕಾರ್ಯಕ್ರಮ ವಾಹಿನಿಯಲ್ಲಿ ಪ್ರಸಾರವಾಗುವ ಸಮಯಕ್ಕಾಗಿ ಕಾಯುತ್ತಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here