ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದಾಯಿತು. ಮಕ್ಕಳ ಫಲಿತಾಂಶ ನೋಡಿ ಅವರ ತಂದೆ ತಾಯಿಗಳು ಹಾಗೂ ಶಾಲೆಗಳು ಸಂಭ್ರಮ ಪಟ್ಟವು. ಸ್ಯಾಂಡಲ್ ವುಡ್ ನಲ್ಲಿ ಕೂಡಾ ನಟ ಪ್ರೇಮ್ ಅವರ ಮಗಳು ಪಿಯುಸಿ ಯಲ್ಲಿ91% ಅಂಕ ಪಡೆದರೆ, ನಿರ್ದೇಶಕ ರಘುರಾಮ್ ಅವರ ಮಗಳು 92% ಪಡೆದು ಅವರು ತಮ್ಮ ಸಂಭ್ರಮವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಈಗ ಅದರ ಬೆನ್ನಲ್ಲೇ ಸಿಬಿಎಸ್ಇ 12 ನೇ ತರಗತಿಯ ಫಲಿತಾಂಶ ಪ್ರಕಟವಾಗಿದ್ದು, ಮತ್ತೊಬ್ಬ ಸ್ಯಾಂಡಲ್ ವುಡ್ ಸೆಲೆಬ್ರಿಟಿ ಮನೆಯಲ್ಲಿ ಫಲಿತಾಂಶ ಸಂಭ್ರಮಕ್ಕೆ ಕಾರಣವಾಗಿದೆ.

ಸ್ಯಾಂಡಲ್ ವುಡ್ ನ ನಟಿ ಸುಧಾರಾಣಿ ಅವರ ಮಗಳು ನಿಧಿ ಸಿಬಿಎಸ್ಇ ಹನ್ನರಡನೇ ತರಗತಿ ಫಲಿತಾಂಶದಲ್ಲಿ 96.4% ಅಂಕಗಳನ್ನು ಗಳಿಸುವ ಮೂಲಕ ಶಾಲೆಯಲ್ಲಿ ಅತಿ ಹೆಚ್ಚು ಅಂಕಗಳಿಸಿರುವ ವಿದ್ಯಾರ್ಥಿಗಳಲ್ಲಿ ಎರಡನೇ ಸ್ಥಾನವನ್ನು ಪಡೆಯುವ ಮೂಲಕ ಅವರ ತಂದೆ ತಾಯಿಗೆ ಕೀರ್ತಿ ತಂದಿರುವುದು ಮಾತ್ರವಲ್ಲದೆ ಎಲ್ಲರ ಮೊಗದಲ್ಲೂ ಸಂತಸಕ್ಕೂ ಕೂಡಾ ಆಕೆ ಕಾರಣವಾಗಿದ್ದಾಳೆ. ಈ ವಿಷಯವನ್ನು ನಟಿ ಸುಧಾರಾಣಿ ಅವರು ಸಾಮಾಜಿಕ ಜಾಲ ತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಇದು ನಮ್ಮ ಜೀವನದ ಬಹಳ ಸಂತಸದ ದಿನವೆಂದು ಹೇಳುತ್ತಾ, ನಮ್ಮ ಸುಬ್ಬಿಕುಟ್ಟಿ ಸಿಬಿಎಸ್ಇ ಬೋರ್ಡ್ ನ ಹನ್ನೆರಡನೇ ತರಗತಿಯ ಕಾಮರ್ಸ್ ವಿಭಾಗದಲ್ಲಿ ಅತ್ಯುತ್ತಮವಾದ 96.4% ಅಂಕಗಳನ್ನು ಪಡೆದು, ಶಾಲೆಗೆ ಎರಡನೇ ಟಾಪರ್ ಆಗಿದ್ದಾಳೆ, ಮತ್ತು ತನ್ನ ಫೇವರಿಟ್ ಸಬ್ಜೆಕ್ಟ್ ನಲ್ಲಿ ನೂರಕ್ಕೆ ನೂರು ಅಂಕ ಗಳಿಸಿರುವಳು ಎಂದು, ಅವಳನ್ನು ಹರಿಸಿದ ನಿಮಗೆಲ್ಲರಿಗೂ ಧನ್ಯವಾದಗಳು ಎಂದು ಪೋಸ್ಟ್ ಹಾಕಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here