ಬೇಸಿಗೆ ಬಂತು ಎಂದರೆ ತಂಪು ಪಾನೀಯಗಳಿಗೆ ಇರುವ ಬೇಡಿಕೆ ಏರಿ ಬಿಡುತ್ತದೆ. ಇಂತಹ ಸಂದರ್ಭಗಳಲ್ಲಿ ಕೆಮಿಕಲ್ ಮಿಶ್ರಿತ ಸಾಫ್ಟ್ ಡ್ರಿಂಕ್ಸ್ ಬದಲಾಗಿ ಹಣ್ಣಿನ ರಸಗಳನ್ನು ಸೇವಿಸುವುದು ಆರೋಗ್ಯ ದೃಷ್ಟಿಯಿಂದ ಬಲು ಹಿತ. ಅಂತಹುದೇ ಒಂದು ಆರೋಗ್ಯಕರ ಪೇಯ ಕಬ್ಬಿನ ರಸ‌. ಹೌದು ಕಬ್ಬಿನ ರಸ ಅಥವಾ ಕಬ್ಬಿನ ಹಾಲಿನಿಂದ ಬಿಸಿಲನ ಬೇಗೆಯಲ್ಲಿ ತಂಪು ಸಿಗುವ ಜೊತೆಗೆ ಇದು ನಮ್ಮ ಆರೋಗ್ಯದ ದೃಷ್ಟಿಯಿಂದ ಕೂಡಾ ಉತ್ತಮ ಎಂಬುದು ಹಲವರಿಗೆ ತಿಳಿದಿಲ್ಲ. ಬನ್ನಿ ಹಾಗಾದರೆ ಕಬ್ಬಿನ ರಸದ ಮಹತ್ವ ಏನೆಂಬುದನ್ನು ನಾವು ತಿಳಿಯೋಣ.

ಕಬ್ಬಿನ ರಸ ಮೂತ್ರಕೋಶದ ಸಮಸ್ಯೆಗಳಾದ ಮೂತ್ರಕೋಶದ ಸೋಂಕು ಹಾಗೂ ಕಿಡ್ನಿ ಕಲ್ಲುಗಳಂತಹ ಸಮಸ್ಯೆಯ ನಿವಾರಣೆಯಲ್ಲಿ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ.

ಎದೆಯಲ್ಲಿ ಉರಿ, ಹೊಟ್ಟೆಯಲ್ಲಿ ಉಂಟಾಗುವ ಉರಿ, ಉರಿ ಮೂತ್ರದಂತಹ ಸಮಸ್ಯೆಗಳಿಗೆ ಕೂಡಾ ಕಬ್ಬಿನ ರಸ ಪರಿಹಾರವನ್ನು ನೀಡಬಲ್ಲದು.

ಬಾಣಂತಿಯರಿಗಾದರೆ ಕಬ್ಬಿನ ಹಾಲು ಅವರ ಎದೆ ಹಾಲನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ ಎನ್ನಲಾಗಿದೆ.

ಕಬ್ಬಿನ ರಸವನ್ನು ಪಾನೀಯವಾಗಿ ಸೇವಿಸುವುದು ಮಾತ್ರವಲ್ಲದೇ ಆಗಾಗ ಕಬ್ಬಿನ ಜಲ್ಲೆಯನ್ನು ಜಗಿದು ರಸವನ್ನು ಹೀರುವುದರಿಂದ ಹಲ್ಲುಗಳು ಹಾಗೂ ಒಸಡುಗಳು ಕೂಡಾ ಗಟ್ಟಿಯಾಗುತ್ತವೆ. ಏಕೆಂದರೆ ಇಲ್ಲಿರುವ ಕ್ಯಾಲ್ಸಿಯಂ ಹಲ್ಲುಗಳಿಗೆ ಉಪಯುಕ್ತ ಆಗಿರುತ್ತದೆ.

ಕಬ್ಬಿನ ರಸದಲ್ಲಿರುವ ಆ್ಯಂಟಿ ಆಕ್ಸಿಡೆಂಟ್ ಗಳು ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸಲು ನೆರವನ್ನು ನೀಡುತ್ತದೆ.

ಕಬ್ಬಿನ ರಸದ ಸೇವನೆಯಿಂದ ದೇಹದಲ್ಲಿರುವ ಕೆಟ್ಟ ರಕ್ತದ ಪ್ರಮಾಣ ಕಡಿಮೆಯಾಗಿ, ರಕ್ತ ಶುದ್ಧೀಕರಣವಾಗುವುದರಿಂದ ನಮ್ಮ ದೇಹ ಅರೋಗ್ಯ ಕೂಡಾ ವೃದ್ಧಿಸುತ್ತದೆ.

ಕಬ್ಬಿನ ರಸದ ಸೇವೆನೆಯಿಂದ ದೇಹಕ್ಕೆ ಪೋಷಕಾಂಶಗಳು ದೊರೆಯುವುದರಿಂದ, ಜೀವಕೋಶಗಳ ಪುನಶ್ಚೇತನಕ್ಕೆ ಇದು ಸಹಾಯಕ ಎನ್ನಲಾಗಿದೆ.

ಕಬ್ಬಿನ ರಸ ಕಾಮಾಲೆ ರೋಗ ಇರುವವರಿಗೆ, ರೋಗ ‌ನಿವಾರಣೆಗೆ ಸಾಕಷ್ಟು ಪರಿಣಾಮಕಾರಿ ಎನ್ನಲಾಗಿದ್ದು, ಅವರು ದಿನವೊಂದಕ್ಕೆ ಒಂದು ಲೋಟ ಕಬ್ಬಿನ ರಸ ಕುಡಿಯುವುದು ಅವರ ಆರೋಗ್ಯಕ್ಕೆ ಅತ್ಯುತ್ತಮ ಎನ್ನಲಾಗಿದೆ. ಏಕೆಂದರೆ ಇದು ಲಿವರ್ ಸಾಮಾನ್ಯ ಸ್ಥಿತಿಗೆ ಬಂದು ಸರಿಯಾಗಿ ಕೆಲಸ ನಿರ್ವಹಿಸಲು ನೆರವಾಗುತ್ತದೆ.‌

ಬೇಸಿಗೆಯಲ್ಲಿ ಸಾಮಾನ್ಯವಾಗಿ ಉಂಟಾಗುವ ನಿರ್ಜಲೀಕರಣ (ಡಿಹೈಡ್ರೇಶ‌ನ್) ನಿಂದ ಆಯಾಸ ಉಂಟಾಗುವ ಸಾಧ್ಯತೆಗಳು ಹೆಚ್ಚು. ಕಬ್ಬಿನ ರಸ ಸೇವನೆಯಿಂದ ಈ ಸಮಸ್ಯೆ ದೂರಾಗುವುದು ಹಾಗೂ ದೇಹದಲ್ಲಿ ನೀರಿನ ಪ್ರಮಾಣವನ್ನು ಸಮತೋಲನವಾಗಿಡಲು ನೆರವು ‌ನೀಡುವುದು.

ನಿದ್ರಾಹೀನತೆ ಅನೇಕರಲ್ಲಿ ಇತ್ತೀಚಿನ ದಿನಗಳಲ್ಲಿ ಕಂಡು ಬರುವ ಒಂದು ದೊಡ್ಡ ಸಮಸ್ಯೆ. ಹೀಗೆ ನಿದ್ರಾಹೀನತೆಯಿಂದ ಬಳಲುವವರಿಗೆ ಕೂಡಾ ಕಬ್ಬಿನ ಹಾಲು ಮದ್ದು. ಇದರ ಸೇವನೆಯಿಂದ ಸುಖ ನಿದ್ರೆ ಕೂಡಾ ಸಾಧ್ಯವಾಗುತ್ತದೆ.

ಇಷ್ಟಲ್ಲದೇ ಇನ್ನೂ ಅನೇಕ ಉತ್ತಮವಾದ ಗುಣಗಳನ್ನು ಹೊಂದಿರುವ ಕಬ್ಬಿನ ಹಾಲಿನ ಸೇವನೆ ನಿಯಮಿತವಾಗಿ ನಡೆಯಬೇಕು. ಅಲ್ಲದೆ ಕಬ್ಬಿನ ಹಾಲನ್ನು ತೆಗೆಯುವ ಸ್ಥಳದ ಸ್ವಚ್ಚತೆಯನ್ನು ಕೂಡಾ ಗಮನಿಸಿ ನಂತರ ಅದರ ಸೇವನೆ ಸೂಕ್ತ ಎಂಬುದನ್ನು ಮರೆಯಬೇಡಿ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here