ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆದ ಆರನೇ ಸ್ಪರ್ಧಿ ಸುಜಾತ ಅವರು. 42 ದಿನಗಳನ್ನು ಬಿಗ್ ಹೌಸ್ ನಲ್ಲಿ ಕಳೆದ ನಟಿ ಈಗ ಮನೆಯಿಂದ ಹೊರ ಬಂದ ಮೇಲೆ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಸುಜಾತ ಅವರು ಬಿಗ್ ಹೌಸ್ ನಲ್ಲಿ ಸುದ್ದಿಯಾಗಿದ್ದು ಆಪಲ್ ಗಾಗಿ ನಡೆದ ಜಗಳದಿಂದ. ಬಿಗ್ ಬಾಸ್ ಮನೆಯಲ್ಲಿ ಎಲ್ಲರಿಗೂ ಹಂಚಿಕೊಂಡು ತಿನ್ನುವಂತೆ ಹೇಳಲಾಗಿತ್ತು. ಆದರೆ ಚೈತ್ರ ಕೊಟ್ಟೂರು ಅವರು ಯಾರಿಗೂ ಹೇಳದೆ ಸ್ವಲ್ಪ ತಿಂದು ಬಚ್ಚಿಟ್ಟಿದ್ದರಿಂದ ಅವರು ಅದನ್ನು ಕೇಳಿದರು. ಆದರೆ ಅದಾದ ನಂತರ ಚಂದನ್ ಆಚಾರ್ ಇಟ್ಟ ಫಿಟ್ಟಿಂಗ್ ನಿಂದಾಗಿ ಆ ವಿಚಾರಕ್ಕೆ ಸಾಕಷ್ಟು ಜಗಳ ವಾಯಿತು ಎಂದು ಹೇಳಿದ್ದಾರೆ ಸುಜಾತ ಅವರು.

ಇನ್ನು ಭುಜದಿಂದ ತಳ್ಳಬೇಕಿದ್ದ ಟಾಸ್ಕ್ ನಲ್ಲಿ ಕಿಶನ್ ಕೈಯಿಂದಲೇ ತಳ್ಳಿದ್ದರಿಂದ ಬಿದ್ದು ಕಾಲಿಗೆ ಪೆಟ್ಟಾಗಿ ಹದಿನೆಂಟು ವರ್ಷಗಳ ಹಿಂದೆ ಕಾಲಿಗೆ ಏಟಾಗಿದ್ದು, ಆ ನೋವು ಮತ್ತೆ ಕಾಣಿಸಿಕೊಂಡಿದ್ದರಿಂದ, ದೈಹಿಕವಾಗಿ ಅಲ್ಲಿಯವರೆಗೆ ಸಮರ್ಥವಾಗಿಯೇ ಇದ್ದ ತನಗೆ ಸ್ವಲ್ಪ ಕಷ್ಟವಾಯಿತು ಎಂದು ಅವರು ಹೇಳಿದ್ದಾರೆ. ಇನ್ನು ಚಿಕಿತ್ಸೆ ನೀಡಿದ ವೈದ್ಯರು ಕೂಡಾ ವಿಶ್ರಾಂತಿ ಅಗತ್ಯ ಇದೆ ಎಂದು ಹೇಳಿದ್ದರು. ಆದರೆ ತಾನು ಆಟದಿಂದ ಹಿಂದೆ ಸರಿಯುವ ಆಲೋಚನೆ ಮಾಡಿರಲಿಲ್ಲ ಎಂದು ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ. ಆ ಆಲೋಚನೆಯಿಂದಲೇ ಪೆಟ್ಟಾದ ನಂತರವೂ ಮನೆಯಲ್ಲಿ ಇರಲು ನೆರವಾಯಿತು ಎನ್ನುತ್ತಾರೆ ಸುಜಾತ‌.

ಇನ್ನು ಮಳೆಯಿಂದ ಹೊರ ಬಂದ ಮೇಲೆ ರಾಜು ತಾಳಿಕೋಟೆ ಅವರ ಹಾಸ್ಯ ಚಟಾಕಿಗಳನ್ನು ಮಿಸ್ ಮಾಡಿಕೊಳ್ಳುತ್ತಿರುವೆ ಎಂದಿರುವ ಅವರು, ಜೈ ಜಗದೀಶ್ ಅವರು ಮನೆಯಿಂದ ಹೊರಗೆ ಹೋಗುವಾಗ ನನ್ನನ್ನು ನಾಮಿನೇಟ್ ಮಾಡಿ ಎಂದು ನಾನೇ ಅವರಿಗೆ ಹೇಳಿದ್ದೆ. ಅದರಿಂದ ಬಿಗ್ ಹೌಸ್ ನಲ್ಲಿ ನನ್ನ ಜರ್ನಿ ಕೊನೆ ಹಂತಕ್ಕೆ ತಲುಪಿದೆ ಎಂದು ಅವರು ಹೇಳಿದ್ದಾರೆ. ಕಾಲಿಗೆ ಪೆಟ್ಟಾದ ಮೇಲೆ ಸುಜಾತ ಅವರು ಟಾಸ್ಕ್ ಗಳಲ್ಲಿ ಮೊದಲಿನಂತೆ ಸಕ್ರಿಯವಾಗಿರಲಿಲ್ಲ ಎಂಬುದು ಕೂಡಾ ನಿಜ. ಆದರೂ ಎಲ್ಲವನ್ನೂ ಎದುರಿಸಿ 42 ದಿನಗಳ ಕಾಲ ಅವರು ಬಿಗ್ ಹೌಸ್ ನಲ್ಲಿ ಕಳೆದು ಒಂದು ಹೊಸ ಅನುಭವ ಪಡೆದು ಹೊರ ಬಂದಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here