ಕನ್ನಡ ಚಿತ್ರರಂಗದ ಈ ವರ್ಷದ ಮೆಗಾ ಬ್ಲಾಕ್‌ಬಸ್ಟರ್ ಸಿನಿಮಾ ಟಗರು. ಡಾ.ಶಿವರಾಜಕುಮಾರ್ ,ಧನಂಜಯ್ ,ವಸಿಷ್ಠ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ಟಗರು ಚಿತ್ರವನ್ನು ಸುಕ್ಕಾ ಸೂರಿ ನಿರ್ದೇಶನ ಮಾಡಿದ್ದರು. ಪ್ರಪ್ರಥಮ ಬಾರಿಗೆ ಸ್ವತಂತ್ರ ನಿರ್ಮಾಪಕರಾಗಿ ಕೆ ಪಿ ಶ್ರೀಕಾಂತ್ ಟಗರು ಸಿನಿಮಾಗೆ ಬಂಡವಾಳ ಹೂಡಿದ್ದರು. ಮೊದಲ ಚಿತ್ರದ ಮೂಲಕ ದಾಖಲೆಯ ಗೆಲುವು ಪಡೆದ ಕೆ ಪಿ ಶ್ರೀಕಾಂತ್ ಅವರು ಇದೀಗ ತಮ್ಮ ಎರಡನೇ ಚಿತ್ರದ ನಿರ್ಮಾಣಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ ‌. ವಿಶೇಷವೆಂದರೆ ತಮ್ಮ ಬ್ಯಾನರ್ ನ ಎರಡನೇ ಸಿನಿಮಾವನ್ನು ಸಹ ಟಗರು ನಿರ್ದೇಶಿಸಿದ್ದ ಸುಕ್ಕಾ ಸೂರಿ ಅವರೇ ನಿರ್ದೇಶನ ಮಾಡುತ್ತಿದ್ದಾರೆ.

ವಿಭಿನ್ನವಾದ ಶೀರ್ಷಿಕೆಯನ್ನು ಈ ಹೊಸ ಚಿತ್ರಕ್ಕೆ ಇಡಲಾಗಿದೆ. ಸುಕ್ಕಾ  ಸೂರಿ ನಿರ್ದೇಶನದ ಈ ಚಿತ್ರಕ್ಕೆ ಪಾಪ್ ಕಾರ್ನ್ ಮಂಕಿ ಟೈಗರ್ ಎಂದು ವಿಭಿನ್ನ ಹೆಸರು ಇಟ್ಟಿರುವ ಚಿತ್ರತಂಡ ಪ್ರೇಕ್ಷಕರಿಗೆ ಶೀರ್ಷಿಕೆ ಮೂಲಕವೇ ಕುತೂಹಲ ಹುಟ್ಟು ಹಾಕಲಾಗಿದೆ ಈ ಟೀಂ.ಇದೊಂದು ಪಕ್ಕಾ ಅಂಡರ್ ವರ್ಲ್ಡ್ ಮಾಫಿಯಾ ಸಿನಿಮಾ ಎಂಬ ಮಾತುಗಳು ಕೇಳಿಬರುತ್ತಿವೆ. ಮಾಸ್ ಸಿನಿಮಾಗಳನ್ನು ವಿಭಿನ್ನವಾದ ನಿರೂಪಣೆ ಮಾಡುವುದರಲ್ಲಿ ಎತ್ತಿದ ಕೈ ಆಗಿರುವ ಸೂರಿ ಅವರು ಈ ಬಾರಿ ಸಹ ಕನ್ನಡ ಸಿನಿಮಾ ರಸಿಕರಿಗೆ ವಿಭಿನ್ನ ನಿರೂಪಣೆ ಮೂಲಕವೇ ಮನರಂಜನೆ ಒದಗಿಸಲಿದ್ದಾರೆ ಎಂಬ ಮಾತುಗಳು ಈಗಾಗಲೇ ಈ ಚಿತ್ರದ ಬಗ್ಗೆ ಕೇಳಿ ಬರುತ್ತಿವೆ.

ಇನ್ನು ಟಗರು ಚಿತ್ರದಲ್ಲಿ ಶಿವಣ್ಣನವರ ಎದುರು ಖಡಕ್ ವಿಲನ್ ರೋಲ್ ನಲ್ಲಿ ಮಿಂಚಿ ಅಭಿಮಾನಿಗಳ ಪ್ರೀತಿ ಪಡೆದಿದ್ದ ಡಾಲಿ ಧನಂಜಯ್ ಅವರು ಪಾಪ್ ಕಾರ್ನ್ ಮಂಕಿ ಟೈಗರ್ ಚಿತ್ರದಲ್ಲಿ  ಪೂರ್ಣ ಪ್ರಮಾಣದ ನಾಯಕನಾಗಿ ಮಿಂಚಲಿದ್ದಾರೆ. ಟಗರು ಚಿತ್ರದ ಅದ್ಬುತವಾದ ಅಭಿನಯದ ಮೂಲಕ ಧನಂಜಯ್ ಅವರು ಅಭಿಮಾನಿಗಳ ಪಾಲಿಗೆ ಡಾಲಿ ಎಂದೇ ಖ್ಯಾತರಾಗಿದ್ದಾರೆ. ಮುಂದಿನ ತಿಂಗಳ ಗೌರಿ  ಹಬ್ಬದಂದು ಕೆ ಪಿ ಶ್ರೀಕಾಂತ್ ಅವರ ನಿರ್ಮಾಣದ ಎರಡನೇ ಸಿನಿಮಾಗೆ ಮುಹೂರ್ತ ನಡೆಯಲಿದೆ. ಈ ಚಿತ್ರದ ಚಿತ್ರೀಕರಣ ಬೆಂಗಳೂರು ಸೇರಿದಂತೆ ಮುಂಬೈನಲ್ಲಿ ನಡೆಯಲಿದೆ ಎಂದು ತಿಳಿದು ಬಂದಿದೆ.

ಇನ್ನು  ಈ ಚಿತ್ರದಲ್ಲಿ ಧನಂಜಯ್ ಗೆ ನಾಯಕಿಯಾಗಿ ನಿವೇದಿತಾ (ಸ್ಮಿತಾ) ಕಾಣಿಸಿಕೊಳ್ಳಲಿದ್ದಾರೆ. ಸ್ಮಿತಾ ಈ ಹಿಂದೆ ಅವ್ವ ,ಡಿಸೆಂಬರ್ 1 ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದರು. ಅಭಿನಯಕ್ಕಾಗಿ ರಾಷ್ಟ್ರಪ್ರಶಸ್ತಿ ಪಡೆದಿರುವ ನಿವೇದಿತಾ ಅವರು ಈ ಹಿಂದೆ ಪುನೀತ್ ರಾಜ್‍ಕುಮಾರ್ ಅಭಿನಯದ ಯಾರೇ ಕೂಗಾಡಲಿ ಚಿತ್ರದಲ್ಲಿ ಸಹ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದರು.ಇನ್ನು ಟಗರು ಚಿತ್ರಕ್ಕೆ ಸಂಗೀತ ನೀಡಿದ್ದ ಚರಣ್ ರಾಜ್ , ಸಂಭಾಷಣೆ ಬರೆದಿದ್ದ ಮಾಸ್ತಿ ಅವರೇ ಪಾಪ್ ಕಾರ್ನ್ ಮಂಕಿ ಟೈಗರ್ ಚಿತ್ರಕ್ಕೂ ಕೆಲಸ ಮಾಡಲಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here