ಇಂದು ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಅಧಿಕೃತ ಮಾಹಿತಿ ನೀಡುತ್ತೇನೆ ಎಂದಿದ್ದ ಸುಮಲತಾ ಅಂಬರೀಶ್ ಬೆಂಗಳೂರಿನ ಖಾಸಗಿ‌ ಹೋಟೇಲ್ ನಲ್ಲಿ ಪತ್ರಿಕಾಗೋಷ್ಠಿ ಕರೆದಿದ್ದರು. ಈ ಪತ್ರಿಕಾಗೋಷ್ಠಿಯಲ್ಲಿ ಸುಮಲತಾ ಅಂಬರೀಶ್ ಜೊತೆ ಚಾಲೆಂಜಿಂಗ್ ಸ್ಟಾರ್ ದರ್ಶನ್ , ರಾಕಿಂಗ್ ಸ್ಟಾರ್ ಯಶ್ , ಪುತ್ರ ಅಭಿಷೇಕ್ ಅಂಬರೀಶ್ , ಹಿರಿಯ ನಟ ದೊಡ್ಡಣ್ಣ , ಧೀರ ರಾಕ್ ಲೈನ್ ವೆಂಕಟೇಶ್ , ನಟ ಜೈ ಜಗದೀಶ್ ದಂಪತಿಗಳು ಭಾಗವಹಿಸಿದ್ದರು.ಮೊದಲಿಗೆ ದೊಡ್ಡಣ್ಣ ಅವರು ಮಾತನಾಡಿ ಮಂಡ್ಯದ ಜನ ಅಂಬರೀಶ್ ಮೇಲೆ ತೋರಿದ್ದ ಪ್ರೀತಿ ಸುಮಲತಾ ಅವರ ಮೇಲೂ ತೋರಿಸುತ್ತಿದ್ದಾರೆ. ಅಂಬರೀಶ್ ಅವರು ಆಪತ್ಭಾಂಧವ ಆಗಿದ್ದರು .ಅವರು ನನಗೆ ಹಲವು ಬಾರಿ ಉಪಕಾರ ಮಾಡಿದ್ದಾರೆ ಎಂದು ಅಂಬರೀಶ್ ಅವರನ್ನು ನೆನೆದರು.

ಬಳಿಕ ಅಂಬರೀಶ್ ಅವರನ್ನು ನೆನೆದು ಭಾವುಕರಾಗಿ‌ ಮಾತು ಆರಂಭಿಸಿ ಸುಮಲತಾ ಅಂಬರೀಶ್ ಅವರು ಅಂಬರೀಶ್ ನಿಧನರಾದ ಬಳಿಕ ನಾನು ಜರ್ಜರಿತರಾಗಿದ್ದೆ. ಆಗ ನಾನು‌ ಏನು ಮಾಡಬೇಕೆಂದು ಗೊಂದಲದಲ್ಲಿದ್ದೆ. ಆ ಸಮಯದಲ್ಲಿ ಅಭಿಮಾನಿಗಳು , ಬಂಧುಗಳು , ಸ್ನೇಹಿತರು ನನಗೆ ಧೈರ್ಯ ತುಂಬಿದರು. ಅಂಬರೀಶ್ ಇದ್ದಾಗ ದಿನ ಮನೆಯು ಸ್ನೇಹಿತರಿಂದ ತುಂಬಿ ತುಳುಕುತ್ತಿತ್ತು. ಆದರೆ ಅಂಬರೀಶ್ ಹೋದ ಬಳಿಕ ಎಲ್ಲರೂ ನಮ್ಮನ್ನು ಮರೆತರು‌ ಅದು ನನಗೆ ಅಚ್ಚರಿ ಉಂಟು ಮಾಡಿತು.ಆಗ ನಮಗೆ ಆತ್ಮಸ್ಥೈರ್ಯ ತುಂಬಿದ್ದು ಅಂಬಿ ಅಭಿಮಾನಿಗಳು.

ಅಂಬರೀಶ್ ಇಲ್ಲದ ದಿನಗಳನ್ನು ನಾನು ಊಹಿಸಿಕೊಳ್ಳಲಾಗುತ್ತಿರಲಿಲ್ಲ. ಈಗ ನಮಗೆ ಅಭಿಮಾನಿಗಳೇ ನಮಗೆ ಧೈರ್ಯ ತುಂಬಿದ್ದಾರೆ‌. ಈಗ ನನಗೆ ನಿಮ್ಮ ಸೇವೆ ಮಾಡುವ ಅವಕಾಶ ಬೇಕಾಗಿದೆ. ಅಭಿಮಾನಿಗಳ ಒತ್ತಾಯಕ್ಕೆ ಮಣಿದು ನಾನು ರಾಜಕೀಯಕ್ಕೆ ಬಂದಿದ್ದೇನೆ. ಅಂಬರೀಶ್ ಮೇಲೆ ನೀವಿಟ್ಟ ಪ್ರೀತಿಗೆ ಋಣ ತೀರಿಸಲು ರಾಜಕೀಯಕ್ಕೆ ಬಂದಿದ್ದೇನೆ. ನಿಮ್ಮ ಸೇವೆ ಮಾಡಲು ಅವಕಾಶ ಮಾಡಿಕೊಡಿ. ನನಗೆ ರಾಜಕೀಯ ಮಾಡುವ ಅವಶ್ಯಕತೆ ಇಲ್ಲ. ಅಂಬರೀಶ್ ನಮಗಾಗಿ ಎಲ್ಲಾ ಮಾಡಿಕೊಟ್ಟು ಹೋಗಿದ್ದಾರೆ. ಈಗ ನಾನು ಮಂಡ್ಯದ ಜನರ ಋಣ ತೀರಿಸಲು ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ದೆ ಮಾಡುತ್ತಿದ್ದೇನೆ. ಎಲ್ಲರೂ ನನ್ನ ಬೆಂಬಲಿಸಿ ಎಂದು ಸುಮಲತಾ ಅಂಬರೀಶ್ ಅವರು ತಿಳಿಸಿದರು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here