ಅಭಿಷೇಕ್ ಅಂಬರೀಶ್ ಅವರು ಇಂದು ಅಮ್ಮನ ಪರ ಪ್ರಚಾರಕ್ಕೆ ಧುಮುಕುತ್ತಿದ್ದಾರೆ. ಕಳೆದ ಒಂದು‌ ತಿಂಗಳಿಂದ ನಿರಂತರವಾಗಿ ಸುಮಲತಾ ಅಂಬರೀಶ್ ಅವರು ಮಂಡ್ಯ ಜಿಲ್ಲೆಯಲ್ಲಿ ‌ನಿರಂತರವಾಗಿ ಪ್ರಚಾರ ನಡೆಸುತ್ತಿದ್ದಾರೆ. ಮಂಡ್ಯ ಜಿಲ್ಲೆಯ ಚುನಾವಣಾ ಕಣ ಬಹಳ ಜಿದ್ದಾಜಿದ್ದಿನಿಂದ ಕೂಡಿರುವ ಕ್ಷೇತ್ರವಾಗಿದ್ದು ಸುಮಲತಾ ಅಂಬರೀಶ್ ಅವರು ಇಲ್ಲಿಯ ತನಕ ಸಹ ತಾವು ಚುನಾವಣೆಯಲ್ಲಿ ಯಾವ ಪಕ್ಷದಿಂದ ಸ್ಪರ್ಧಿಸುತ್ತೇನೆ ಅಥವಾ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವ ವಿಷಯವಾಗಿ ಸ್ವಲ್ಪ ಮಟ್ಟಿಗೆ ಗೊಂದಲವಾಗಿಯೇ ಇದ್ದಾರೆ. ಕೊನೆ ಕ್ಷಣದ ತನಕ ಕಾಂಗ್ರೆಸ್ ಪಕ್ಷದ ಟಿಕೆಟ್ ಎದುರು ನೋಡುತ್ತಿರುವುದಾಗಿ ಸುಮಲತಾ ಅಂಬರೀಶ್ ಅವರು ತಿಳಿಸಿದ್ದಾರೆ.

ಈಗಾಗಲೇ ಮಂಡ್ಯದ ಜಿಲ್ಲೆಯ ಹಲವಾರು ಗ್ರಾಮಗಳಿಗೆ ಪ್ರಚಾರ ಕಾರ್ಯದಲ್ಲಿ ಭೇಟಿ ಕೊಟ್ಟಿರುವ ಸುಮಲತಾ ಅಂಬರೀಶ್ ಅವರು ಇಂದು ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿಗೆ ಚುನಾವಣೆ ಪ್ರಚಾರದಲ್ಲಿ ಭಾಗವಹಿಸಲು ಬರುತ್ತಿದ್ದಾರೆ. ವಿಶೇಷ ಎಂದರೆ ಈ ಬಾರಿ ಅಮ್ಮನ ಜೊತೆ ಅಭಿಷೇಕ್ ಅಂಬರೀಶ್ ಅವರು ಚುನಾವಣೆಯಲ್ಲಿ ಭಾಗವಹಿಸಲು ಮಳವಳ್ಳಿ ಗೆ ಬರುತ್ತಿದ್ದಾರೆ. ಚುನಾವಣೆ ಕ್ಯಾಂಪೇನ್ ಆರಂಭವಾದ ಬಳಿಕ ಮೊದಲ ಬಾರಿಗೆ ಮಳವಳ್ಳಿ ಗೆ ಬರುತ್ತಿರುವ ಅಭಿಷೇಕ್ ಅಂಬರೀಶ್ ಅವರು ” ನಾನು ಮಳವಳ್ಳಿ ಗೆ ಬರುತ್ತಿದ್ದೇನೆ.

ನನ್ನ ಅಮ್ಮನೊಂದಿಗೆ ಅದು ಸಹ ಚುನಾವಣಾ ಪ್ರಚಾರಕ್ಕಾಗಿ . ನನ್ನ ಅಪ್ಪ ಯಾವಾಗಲೂ ನೆನಪಿಸಿಕೊಳ್ಳುತ್ತಿದ್ದ ಊರು ಮಳವಳ್ಳಿ. ನನ್ನ ತಾತ ಸಾಕಷ್ಟು ವರ್ಷಗಳ ಕಾಲ ಜೀವನ ನಡೆಸಿದ ಮಳವಳ್ಳಿ ಗೆ ನಾನು ಅಮ್ಮನೊಂದಿಗೆ ಬರುತ್ತಿದ್ದೇನೆ” ಎಂದು ಅಭಿಷೇಕ್ ಅಂಬರೀಶ್ ಹೇಳಿದ್ದಾರೆ. ಅತ್ತ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಸಹ ಸುಮಲತಾ ಅಂಬರೀಶ್ ಅವರು ಒಳಗೊಳಗೆ ಪ್ರಚಾರ ಸಹ ಮಾಡುತ್ತಿದ್ದಾರೆ ಎನ್ನಲಾಗಿದೆ‌.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here